ಕ್ರೀಡೆ

ಆರಂಭಿಕ ಸಮಸ್ಯೆಗೆ ನಾನೇ ಪರಿಹಾರ

ಆರಂಭಿಕ ಸಮಸ್ಯೆಗೆ ನಾನೇ ಪರಿಹಾರ
Published On :

ಕಟಕ್: ಟೀಂ ಇಂಡಿಯಾ ಅನುಭವಿಸುತ್ತಿರುವ ಆರಂಭಿಕರ ತೊಂದರೆಗೆ ನಾನೇ ಪರಿಹಾರ ಎಂದು ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಅಬ್ಬರಿಸುತ್ತಿರುವ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಐಪಿಎಲ್ನ 7ನೇ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಉತ್ತಪ್ಪ, ಇದುವರೆಗೂ 302 ರನ್ ಗಳಿಸಿದ್ದು, ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ 4ನೇ ಆಟಗಾರ G¬Ò¥Û§Áæ.”
ನಾನು ಬ್ಯಾಟಿಂಗ್ ಶೈಲಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಇದು ನನ್ನ ಬ್ಯಾಟಿಂಗ್ ಬಲಗೊಳ್ಳಲು ನೆರವಾಗಿದೆ. ಅಲ್ಲದೆ, ನನ್ನ ಫುಟ್ವರ್ಕ್ನಲ್ಲೂ ಬದಲಾವಣೆಯಾಗಿದೆ. ಪ್ರವೀಣ್ ಆಮ್ರೆ ಅವರು ನನ್ನ ಬ್ಯಾಟಿಂಗ್ನಲ್ಲಿ ಸಕಾರಾತ್ಮಕವಾದ ಪರಿಣಾಮ ಬೀರಿದ್ದಾರೆ ಎಂದು ಹೇಳಿದ್ದಾರೆ.
ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲು ನಾವು ಹಲವಾರು ತಾಂತ್ರಿಕ ಸಾಹಸಗಳನ್ನು ಮಾಡಿದ್ದೇವೆ. ಈಗ ನನ್ನ ಬ್ಯಾಟಿಂಗ್ನಲ್ಲಿ ಶಕ್ತಿ ತುಂಬಿರುವ ವಿಶ್ವಾಸ ನನ್ನಲ್ಲಿ ÈÚßàt¥æ’ ಎಂದು ಅವರು ~ØÒ¥ÚÁÚß.”
ಕಳೆದ ಕೆಲ ವರ್ಷಗಳಿಂದ ನಮ್ಮ ತಂಡದ ಪರ ಉತ್ತಮ ಕೊಡುಗೆ ನೀಡುವಲ್ಲಿ ವೈಫಲ್ಯ ಕಂಡಿದ್ದೇನೆ. ಈಗ ಟೀಂ ಇಂಡಿಯಾಕ್ಕೆ ಮರಳುವ ಹಸಿವು ನನ್ನನ್ನು ಕಾಡುತ್ತಿದೆ. ಅಲ್ಲದೆ, ನಾನು ಐಪಿಎಲ್ನಲ್ಲಿ ನೀಡುತ್ತಿರುವ ಪ್ರದರ್ಶನ ನನ್ನ ಬಗ್ಗೆ ಮಾತನಾಡುತ್ತಿದೆ. ಆರಂಭಿಕ ಆಟಗಾರನಾಗಿ ನಾನು ಭಾರತ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ÔæàM¦¥æ§Þ«æ’ ಎಂದಿರುವ ಉತ್ತಪ್ಪ, ಐಪಿಎಲ್ನ ಮುಂದಿನ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಲಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.