ಇಂದು ಕೆಒಎ ಚುನಾವಣೆ
ಬೆಂಗಳೂರು: ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆಗೆ (ಕೆಒಎ) ಭಾನುವಾರ ಚುನಾವಣೆ ನಡೆಯಲಿದೆ. ಹಾಲಿ ಅಧ್ಯಕ್ಷ ಕೆ. ಗೋವಿಂದರಾಜ ಮತ್ತು ಪ್ರಧಾನ ಕಾರ್ಯದರ್ಶಿ ಅನಂತರಾಜು ಅವರು ಮತ್ತೊಂದು ಅವಧಿಯ ಆಯ್ಕೆಗಾಗಿ ಸ್ಪರ್ಧಾಕಣದಲ್ಲಿದ್ದಾರೆ.
ಕೆಒಗೆ ನೋಂದಾಯಿತವಾಗಿರುವ ಒಟ್ಟು 22 ಸಂಸ್ಥೆಗಳು ಮತದಾನದ ಹಕ್ಕು ಹೊಂದಿವೆ. ತಲಾ ಸಂಸ್ಥೆಗೆ 3 ಮತಗಳಿದ್ದು, ಒಟ್ಟಾರೆ 66 ಮತಗಳು ಚಲಾವಣೆಯಾಗಬೇಕಿದೆ.
ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಹಾಗೂ ಉಪಾಧ್ಯಕ್ಷರು 6, ಜಂಟಿ ಕಾರ್ಯದರ್ಶಿ 2 ಮತ್ತು ಸಮಿತಿ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಭಾರತಕ್ಕೆ ದಕ್ಷಿಣ ಏಷ್ಯನ್ ಬಾಸ್ಕೆಟ್ಬಾಲ್ ಪ್ರಶಸ್ತಿ
ಕಾಠ್ಮಂಡು: ಭಾರತ ಪುರುಷರ ತಂಡ ಕಾಠ್ಮಂಡುವಿನಲ್ಲಿ ನಡೆದ ಮೂರನೇ ದಕ್ಷಿಣ ಏಷ್ಯನ್ ಬಾಸ್ಕೆಟ್ಬಾಲ್ ಅಸೋಶಿಯೇಷನ್ ಚಾಂಪಿಯನ್ಶಿಪ್ನಲ್ಲಿ ಪ್ರಶತ್ತಿ ಗೆದ್ದುಕೊಂಡಿದೆ. ಭಾರತ ತಂಡದ ಆಟಗಾರರು 108-32 ಅಂಕಗಳಿಂದ ಮಾಲ್ಡೀವ್ಸ್ ತಂಡವನ್ನು ಪರಾಭವಗೊಳಿಸಿ ಚಾಂಪಿಯನ್ಶಿಪ್ಗೆ ಭಾಜನರಾದರು. ಈ ಟೂರ್ನಿಯಲ್ಲಿ ಭಾರತ 4-0 ಗೆಲುವಿನೊಂದಿಗೆ ಸೋಲಿಲ್ಲದ ಸರದಾರರಾಗಿ ಚಾಂಪಿಯನ್ಪಟ್ಟದೊಂದಿಗೆ ತಮ್ಮ ಹೋರಾಟಕ್ಕೆ ತೆರೆ ಎಳೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

