ಕ್ರೀಡೆ

ಕಮ್ವರೋರ್, ಕಾಬು 10ಕೆ ಚಾಂಪಿಯನ್

Published On :

ಬೆಂಗಳೂರು: ದಣಿವರಿಯದ ಓಟ ಓಡಿದ ಜೆಫ್ರೀ ಕಮ್ವರೋರ್ ಮತ್ತು ಲೂಸಿ ಕಾಬು ಅವರು 10ಕೆ ಬೆಂಗಳೂರು ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಭಾನುವಾರ ನಡೆದ 7ನೇ ಆವೃತ್ತಿಯ ಮ್ಯಾರಥಾನ್‌ನಲ್ಲಿ 27 ನಿಮಿಷ 44 ಸೆಕೆಂಡ್‌ಗಳಲ್ಲಿ ಗುರಿ ಸೇರಿದ ಕಮ್ವರೋರ್ ಮೊದಲ ಸ್ಥಾನ ಪಡೆದರು. ಇದರೊಂದಿಗೆ ಅವರು 2008ರಲ್ಲಿ ಎರಿಟ್ರೆಯಾದ ಜೆರ್ಸಿನಿ ಟಾಡೆಸೆ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು.
ಇನ್ನು ಮಹಿಳೆಯರ ವಿಭಾಗದಲ್ಲಿ 31:48 ಅವಧಿಯಲ್ಲಿ ಗುರಿ ಸೇರಿದ ಕಾಬು, ನಾಲ್ಕು ವರ್ಷಗಳ ಹಿಂದೆ ಇಥಿಯೋಫಿಯಾದ ಯಿಮೆರ್ ವುಡೆಸ್ ಅವರು ಬರೆದ ದಾಖಲೆಯನ್ನು ಅಳಿಸಿ ಹಾಕಿದರು.ಇನ್ನು ಭಾರತೀಯರ ಪುರುಷರ ವಿಭಾಗದಲ್ಲಿ ಬಿ.ಸಿ ತಿಲಕ್ ಮತ್ತು ಸ್ವಾತಿ ಗಧಾವೆ ಅವರು ಅಗ್ರಸ್ಥಾನ ಪಡೆದುಕೊಂಡರು. ತಿಲಕ್ 30:38 ಅವಧಿಯಲ್ಲಿ ಗುರಿ ಸೇರಿದರೆ, ಸ್ವಾತಿ 37:22 ಅವಧಿಯಲ್ಲಿ ಗುರಿ ಸೇರಿದರು.ಫಲಿತಾಂಶ:
ಏಲೈಟ್ ಪುರುಷರ ವಿಭಾಗ: ಜೆಫ್ರೀ ಕಮ್ವರೋರ್ (ಕೀನ್ಯಾ), ಜೋಶು ಚೆಪ್ತೆಗೀ (ಉಗಾಂಡ), ಕಿಂಡೆ ಅತನಾವ್ (ಇಥಿಯೋಪಿಯಾ).
ಏಲೈಟ್ ಮಹಿಳೆಯರ ವಿಭಾಗ: ಲೂಸಿ ಕಾಬು (ಕೀನ್ಯಾ), ಜಾಯಿಸ್ ಚೆಪ್ಕಿರು (ಕೀನ್ಯಾ), ಲಿನೆಟ್ ಮಸಾಯಿ.
ಭಾರತೀಯರ ಪುರುಷರ ವಿಭಾಗ: ಬಿ.ಸಿ ತಿಲಕ್, ಅನಿಶ್ ಥಾಪ, ನಿತೇಂದ್ರ ಸಿಂಗ್ ರಾವತ್.ಭಾರತೀಯವು ಮಹಿಳೆಯರ ವಿಭಾಗ: ಸ್ವಾತಿ ಗಧಾವೆ, ಜಯಶ್ರೀ ಬೋರಾಗೀ, ಸುಪ್ರಿಯಾ ಪಾಟೀಲ್.
ಅಮೇರಿಕದ ಖ್ಯಾತ ಅಥ್ಲೀಟ್ ಕಾರ್ಲ್ ಲೂಯಿಸ್ ಮತ್ತು ಅಂಬಾಸೀಡರ್ ಪುನಿತ್ ರಾಜ್‌ಕುಮಾರ್ ಅವರು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.
ಪುರುಷರ ಮತ್ತು ಮಹಿಳೆಯರ ಏಲೈಟ್ ವಿಭಾಗದಲ್ಲಿ ದಾಖಲೆ ಮಾಡಿದ ಕಮ್ವರೋರ್ ಮತ್ತು ಕಾಬು ವಿಶೇಷ ಬಹುಮಾನವಾಗಿ ತಲಾ 7,500 ಅಮೆರಿಕನ್ ಡಾಲರ್ ಪಡೆದುಕೊಂಡರೆ, ಮೊದಲ ಸ್ಥಾನ ಪಡೆದಿದ್ದಕ್ಕೆ 21,000 ಅಮೆರಿಕನ್ ಡಾಲರ್ ಬಹುಮಾನ ಪಡೆದುಕೊಂಡರು.
 ಪಂದ್ಯಾವಳಿಯಲ್ಲಿ ಒಟ್ಟು 170,000 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತನೀಡಲಾಯಿತು.
 ಇದರೊಂದಿಗೆ ಮ್ಯಾರಥಾನ್ ಓಡಲು ಖ್ಯಾತರಾಗಿರುವ ಕೀನ್ಯಾ ಓಟಗಾರರು, ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುವ ಮೂಲಕ ಬೆಂಗಳೂರಿನಲ್ಲಿ  ನಡೆದ ಮ್ಯಾರಥಾನ್‌ನಲ್ಲಿ ಕೀನ್ಯಾ ಮೇಲುಗೈ ಸಾಧಿಸಿದಂತಾಗಿದೆ. ಈ ಮುನ್ನ ಸಹ ಕೀನ್ಯಾ ಮೂಲದವರು ಬೆಂಗಳೂರಿನಲ್ಲಿ ಮೇಲುಗೈ ಸಾಧಿಸಿದ ಹಲವು ನಿದರ್ಶನಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.