ರೈಡರ್ಸ್ ಮುಂದೆ ಮಂಕಾದ ಸನ್
ಹೈದರಾಬಾದ್: ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಮತ್ತು ಮಧ್ಯಮ ಕ್ರಮಾಂಕದಲ್ಲಿ ಯೂಸುಫ್ ಪಠಾಣ್ ಅವರು ಬ್ಯಾಟ್ನೊಂದಿಗೆ ಗುಡುಗುವುದರೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ, ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್ ಅಂತರದಿಂದ ಜಯ ಕಂಡುಕೊಂಡಿತು.
ರಾಬಿನ್ ಉತ್ತಪ್ಪ (40), ಮನೀಷ್ ಪಾಂಡೆ (35), ಯೂಸುಫ್ ಪಠಾಣ್ (ಅ. 39) ಹಾಗೂ ರೇಯಾನ್ ಟೆನ್ ಡಯಾಶೆಟ್ (ಅ. 25) ಅವರ ಆಕರ್ಷಕ ಬ್ಯಾಟಿಂಗ್ ನೆರವಿನೊಂದಿಗೆ 143 ರನ್ಗಳ ಗುರಿ ಬೆನ್ನಟ್ಟಿದ ಕೋಲ್ಕತಾ, ಇನ್ನು 2 ಎಸೆತಗಳು ಬಾಕಿ ಇರುವಂತೆಯೇ 146 ರನ್ ಗಳಿಸಿ ಜಯದ ಕೇಕೆ ಹಾಕಿತು. ಹೈದರಾಬಾದ್ ಪರ ಡೇಲ್ ಸ್ಟೇಯ್ನ್ ಮತ್ತು ಕರಣ್ ಶರ್ಮಾ ಮಾತ್ರ ತಲಾ ಒಂದು ವಿಕೆಟ್ ಪಡೆದರು. ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಬಾದ್, ಆರಂಭಿಕರು ವೈಫಲ್ಯ ಕಾಣುವುದರೊಂದಿಗೆ 8 ವಿಕೆಟ್ ಕಳೆದುಕೊಂಡು 142 ರನ್ ಕಲೆ ಹಾಕಿತು. ಡೇವಿಡ್ ವಾರ್ನರ್ (34) ಮತ್ತು ಇರ್ಫಾನ್ ಪಠಾಣ್ (23) ಹೈದರಾಬಾದ್ ಪರ ಕೊಂಚ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೋಲ್ಕತಾ ಪರ ಉಮೇಶ್ ಯಾದವ್ 26 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಶಕಿಬ್ ಅಲ್ ಹಸನ್ 22 ರನ್ ನೀಡಿ 2 ವಿಕೆಟ್ ಪಡೆದರು. ಸುನಿಲ್ ನಾರಾಯಣ ಮತ್ತು ಪಿಯುಶ್ ಚಾವ್ಲಾ ತಲಾ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 142/8
ಎರಾನ್ ಫಿಂಚ್ ಸಿ ಮಾರ್ಕೆಟ್ ಬಿ ಉಮೇಶ್ 8 (8), ಶಿಖರ್ ಧವನ್ ಸಿ ಗಂಭೀರ್ ಬಿ ನಾರಾಯಣ 19 (14), ನಮನ್ ಓಜಾ ಸಿ ಪಠಾಣ್ ಬಿ ಶಕಿಬ್ 22 (24), ಡೇವಿಡ್ ವಾರ್ನರ್ ಸಿ ಪಠಾಣ್ ಬಿ ಉಮೇಶ್ 34 (18), ಕೆ.ಎಲ್ ರಾಹುಲ್ ಎಲ್ಬಿ ಚಾವ್ಲಾ 14 (15), ಇರ್ಫಾನ್ ಪಠಾಣ್ ಅಜೇಯ 23 (19), ಡಾರೆನ್ ಸಾಮಿ ಸಿ ಪಾಂಡೆ ಬಿ ಶಕಿಬ್ 7 (16), ಕರಣ್ ಶರ್ಮಾ ರನೌಟ್ (ಪಠಾಣ್) 4 (4), ಡೇಲ್ ಸ್ಟೇಯ್ನ್ ಬಿ ಉಮೇಶ್ 1 (2) ಇತರೆ (ಬೈ-1, ಎಲ್ಬಿ-1, ವೈಡ್-8) 10
ವಿಕೆಟ್ ಪತನ: 1-14, 2-41, 3-64, 4-98, 5-104, 6-129, 7-139, 8-142.
ಬೌಲಿಂಗ್ ವಿವರ: ಮಾರ್ನ್ ಮಾರ್ಕೆಲ್ 4-0-39-0, ಉಮೇಶ್ ಯಾದವ್ 4-0-26-3, ಸುನಿಲ್ ನಾರಾಯಣ 4-0-21-1, ಶಕಿಬ್ ಅಲ್ ಹಸನ್ 3-0-22-2, ರೇಯಾನ್ ಟೆನ್ 1-0-8-0, ಪಿಯುಶ್ ಚಾವ್ಲಾ 4-0-24-1
ಕೋಲ್ಕತಾ ನೈಟ್ ರೈಡರ್ಸ್ 19.4 ಓವರ್ಗಳಲ್ಲಿ 146/3
ರಾಬಿನ್ ಉತ್ತಪ್ಪ ರನೌಟ್ (ಓಜಾ/ಸಾಮಿ) 40 (33), ಗೌತಮ್ ಗಂಭೀರ್ ಸಿ ಓಜಾ ಬಿ ಸ್ಟೇಯ್ನ್ 6 (10), ಮನೀಷ್ ಪಾಂಡೆ ಸಿ ಫಿಂಚ್ ಬಿ ಶರ್ಮಾ 35 (32), ಯುಸುಫ್ ಪಠಾಣ್ ಅಜೇಯ 39 (28)
ರೆಯಾನ್ ಟೆನ್ ಡಯಾಶೆಟ್ 25 (15), ಇತರೆ (ಲೆಗ್ಬೈ-1) 1
ವಿಕೆಟ್ ಪತನ: 1-8, 2-59, 3-104.
ಬೌಲಿಂಗ್ ವಿವರ: ಭುವನೇಶ್ವರ ಕುಮಾರ್ 3.4-0-37-0, ಡೇಲ್ ಸ್ಟೇಯ್ನ್ 4-0-24-1, ಕರಣ್ ಶರ್ಮಾ 4-0-19-1, ಡಾರೆನ್ ಸಾಮಿ 1-0-7-0, ಅಮಿತ್ ಮಿಶ್ರಾ 4-0-38-0, ಇರ್ಫಾನ್ ಪಠಾನ್ 3-0-20-0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

