ಸಿಮನ್ಸ್ ಸಿಡಿತಕ್ಕೆ ಕಿಂಗ್ಸ್ ಕಂಗಾಲು
ಮೊಹಾಲಿ: ಆರಂಭಿಕ ಲೆಂಡ್ಲ್ ಸಿಮನ್ಸ್ (ಅಜೇಯ 100) ಅವರ ಆಕರ್ಷಕ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸುಲಭ ಗೆಲವು ದಾಖಲಿಸಿದೆ.
ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ಕೈಗೊಂಡರು. ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 156 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ 19 ಓವರ್ಗಳಲ್ಲಿ 3 ವಿಕೆಟ್ಗೆ 159 ರನ್ ದಾಖಲಿಸಿತು. ಈ ಮೂಲಕ ಮುಂಬೈ 7 ವಿಕೆಟ್ಗಳ ಅಂತರದಲ್ಲಿ ಪಂಜಾಬ್ ತಂಡವನ್ನು ಮಣಿಸಿತು. ಈ ಗೆಲವಿನಿಂದ ಮುಂಬೈ ಇಂಡಿಯನ್ಸ್ ತಂಡ ಪಂದ್ಯಾವಳಿಯನ್ನು ಗೆಲವಿನೊಂದಿಗೆ ಮುಕ್ತಯಗೊಳಿಸುವ ಹಾದಿಯಲ್ಲಿ ಸಾಗಿದೆ.
ಆಕರ್ಷಕ ಬ್ಯಾಟಿಂಗ್ ನಡೆಸಿದ ಸಿಮನ್ಸ್ 61 ಎಸೆತಗಳನ್ನು ಎದುರಿಸಿ, 14 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 100 ರನ್ ದಾಖಲಿಸಿ ತಂಡದ ಗೆಲವಿನ ರೂವಾರಿಯಾದರು. ಅಲ್ಲದೆ ಸಿಮನ್ಸ್ ಟೂರ್ನಿಯಲ್ಲಿ ಮೊದಲ ಶತಕ ದಾಖಲಿಸಿ, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಂಜಾಬ್ ತಂಡದ ಪರ ಮನನ್ ವೊಹ್ರಾ (36), ಶಾನ್ ಮಾರ್ಷ್ (30) ಹಾಗೂ ಜಾರ್ಜ್ ಬೇಯ್ಲಿ (39) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್ಮನ್ ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲಿಲ್ಲ.
ಇನ್ನು ಮುಂಬೈ ಪರ ಮತ್ತೊಮ್ಮೆ ಮಿಂಚಿದ ಕರ್ನಾಟಕದ ಯುವ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರೆ, ಉಳಿದಂತೆ ಬುಮ್ರಾ 2, ಸ್ಯಾಂಟೋಕಿ ಹಾಗೂ ಪ್ರವೀಣ್ ಕುಮಾರ್ ತಲಾ 1 ವಿಕೆಟ್ ಪಡೆದರು. ಇನಿಂಗ್ಸ್ನ ಮಧ್ಯ ಭಾಗದಲ್ಲಿ ಬೌಂಡರಿ ದಾಖಲಿಸಲು ಪರದಾಡಿದ ಪಂಜಾಬ್ ಬೃಹತ್ ಮೊತ್ತ ದಾಖಲಿಸುವ ಅವಕಾಶ ಕಳೆದುಕೊಂಡಿತು.
ಸ್ಕೋರ್ ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್
20 ಓವರ್ಗಳಲ್ಲಿ 8 ವಿಕೆಟ್ಗೆ 156
ಸೆಹ್ವಾಗ್ ರನೌಟ್ (ಪ್ರವೀಣ್) 17, ಮನನ್ ವೊಹ್ರಾ ಬಿ ಶ್ರೇಯಸ್ 36, ಶಾನ್ ಮಾರ್ಷ್ ಸಿ ಪೊಲಾರ್ಡ್ ಬಿ ಸ್ಯಾಂಟೋಕಿ 30, ಗ್ಲೆನ್ ಮ್ಯಾಕ್ಸ್ವೆಲ್ ಸಿ ಮತ್ತು ಬಿ ಶ್ರೇಯಸ್ 2, ಜಾರ್ಜ್ ಬೇಯ್ಲಿ ಸಿ ರಾಯುಡು ಬಿ ಬುಮ್ರಾ 39, ವೃದ್ಧಿಮಾನ್ ಸಾಹ ರನೌಟ್ (ರಾಯುಡು) 3, ಅಕ್ಷರ್ ಪಟೇಲ್ ಸಿ ಶರ್ಮಾ ಬಿ ಪ್ರವೀಣ್ 6, ರಿಶಿ ಧವನ್ ಅಜೇಯ 13, ಹೆಂಡ್ರಿಕ್ಸ್ ಬಿ ಬುಮ್ರಾ 0, ಶಿವಂ ಶರ್ಮಾ ಅಜೇಯ 1, ಇತರೆ (ಲೆಗ್ ಬೈ 5, ವೈಡ್ 3) ಒಟ್ಟು 8.
ವಿಕೆಟ್ ಪತನ: 1-23, 2-87, 3-92, 4-93, 5-105, 6-116, 7-154, 8-154.
ಬೌಲಿಂಗ್ ವಿವರ: ಪ್ರವೀಣ್ ಕುಮಾರ್ 4-0-20-1, ಕ್ರಿಶ್ಮರ್ ಸ್ಯಾಂಟೋಕಿ 4-0-40-1, ಜಸ್ಪ್ರೀತ್ ಬುಮ್ರಾ 4-0-31-2, ಪ್ರಗ್ಯಾನ್ ಓಜಾ 4-0-28-0, ಶ್ರೇಯಸ್ ಗೋಪಾಲ್ 4-0-32-2
ಮುಂಬೈ ಇಂಡಿಯನ್ಸ್
19 ಓವರ್ಗಳಲ್ಲಿ 3 ವಿಕೆಟ್ಗೆ 159
ಲೆಂಡ್ಲ್ ಸಿಮನ್ಸ್ ಅಜೇಯ 100, ಮೈಕ್ ಹಸ್ಸಿ ಬಿ ಅಕ್ಷರ್ ಪಟೇಲ್ 6, ಅಂಬಟಿ ರಾಯುಡು ಸಿ ಸೆಹ್ವಾಗ್ ಬಿ ರಿಶಿ ಧವನ್ 17, ರೋಹಿತ್ ಶರ್ಮಾ ಸಿ ಸಂದೀಪ್ ಬಿ ಹೆಂಡ್ರಿಕ್ಸ್ 18, ಪೊಲಾರ್ಡ್ ಅಜೇಯ 8, ಇತರೆ (ವೈಡ್ 10) ಒಟ್ಟು 10.
ವಿಕೆಟ್ ಪತನ: 1-68, 2-111, 3-148.
ಬೌಲಿಂಗ್ ವಿವರ: ಸಂದೀಪ್ ಶರ್ಮಾ 3-0-37-0, ಹೆಂಡ್ರಿಕ್ಸ್ 4-0-33-1, ಅಕ್ಷರ್ ಪಟೇಲ್ 4-0-27-1, ರಿಶಿ ಧವನ್ 4-0-30-1, ಶಿವಂ ಶರ್ಮಾ 4-0-32-0
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

