ಮುಂಬೈ ಮುಂದೆ 157 ಗುರಿ
ಮೊಹಾಲಿ: ಮುಂಬೈ ಇಂಡಿಯನ್ಸ್ ಸಂಘಟಿತ ಬೌಲಿಂಗ್ ದಾಳಿಯ ಹೊರತಾಗಿಯೂ ಅಂತಿಮ ಓವರ್ಗಳಲ್ಲಿ ಅಬ್ಬರಿಸುವ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬುಧವಾರ ನಡೆದ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ಕೈಗೊಂಡರು. ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 156 ರನ್ ದಾಖಲಿಸಿತು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ 157 ರನ್ಗಳ ಗುರಿ ಪಡೆದಿದೆ.
ಈಗಾಗಲೇ ಪ್ಲೇ ಆಫ್ಸುತ್ತಿಗೆ ಪ್ರವೇಶಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಈ ಪಂದ್ಯ ಒಂದು ರೀತಿಯಲ್ಲಿ ಅಭ್ಯಾಸ ಪಂದ್ಯಾವಾಗಿ ಪರಿಣಮಿಸಿತ್ತು. ಹಾಗಾಗಿ ತಂಡದಲ್ಲಿ ಡೇವಿಡ್ ಮಿಲ್ಲರ್ ಬದಲಿಗೆ ಶಾನ್ ಮಾರ್ಷ್ ಅವರನ್ನು ಕಣಕ್ಕಿಳಿಸುವ ಪ್ರಯತ್ನಕ್ಕೆ ಮುಂದಾಯಿತು.
ಪಂಜಾಬ್ ತಂಡದ ಪರ ಮನನ್ ವೊಹ್ರಾ (36), ಶಾನ್ ಮಾರ್ಷ್ (30) ಹಾಗೂ ಜಾರ್ಜ್ ಬೇಯ್ಲಿ (39) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್ಮನ್ ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲಿಲ್ಲ.
ಇನ್ನು ಮುಂಬೈ ಪರ ಮತ್ತೊಮ್ಮೆ ಮಿಂಚಿದ ಕರ್ನಾಟಕದ ಯುವ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರೆ, ಉಳಿದಂತೆ ಬುಮ್ರಾ 2, ಸ್ಯಾಂಟೋಕಿ ಹಾಗೂ ಪ್ರವೀಣ್ ಕುಮಾರ್ ತಲಾ 1 ವಿಕೆಟ್ ಪಡೆದರು. ಇನಿಂಗ್ಸ್ನ ಮಧ್ಯ ಭಾಗದಲ್ಲಿ ಬೌಂಡರಿ ದಾಖಲಿಸಲು ಪರದಾಡಿದ ಪಂಜಾಬ್ ಬೃಹತ್ಮೊತ್ತ ದಾಖಲಿಸುವ ಅವಕಾಶ ಕಳೆದುಕೊಂಡಿತು.
ಸ್ಕೋರ್ ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ಗಳಲ್ಲಿ 8 ವಿಕೆಟ್ಗೆ 156
ಸೆಹ್ವಾಗ್ ರನೌಟ್ (ಪ್ರವೀಣ್) 17, ಮನನ್ ವೊಹ್ರಾ ಬಿ ಶ್ರೇಯಸ್ 36, ಶಾನ್ ಮಾರ್ಷ್ ಸಿ ಪೊಲಾರ್ಡ್ ಬಿ ಸ್ಯಾಂಟೋಕಿ 30, ಗ್ಲೆನ್ ಮ್ಯಾಕ್ಸ್ವೆಲ್ ಸಿ ಮತ್ತು ಬಿ ಶ್ರೇಯಸ್ 2, ಜಾರ್ಜ್ ಬೇಯ್ಲಿ ಸಿ ರಾಯುಡು ಬಿ ಬುಮ್ರಾ 39, ವೃದ್ಧಿಮಾನ್ ಸಾಹ ರನೌಟ್ (ರಾಯುಡು) 3, ಅಕ್ಷರ್ ಪಟೇಲ್ ಸಿ ಶರ್ಮಾ ಬಿ ಪ್ರವೀಣ್ 6, ರಿಶಿ ಧವನ್ ಅಜೇಯ 13, ಹೆಂಡ್ರಿಕ್ಸ್ ಬಿ ಬುಮ್ರಾ 0, ಶಿವಂ ಶರ್ಮಾ ಅಜೇಯ 1, ಇತರೆ (ಲೆಗ್ ಬೈ 5, ವೈಡ್ 3) ಒಟ್ಟು 8.
ವಿಕೆಟ್ ಪತನ: 1-23, 2-87, 3-92, 4-93, 5-105, 6-116, 7-154, 8-154.
ಬೌಲಿಂಗ್ ವಿವರ: ಪ್ರವೀಣ್ ಕುಮಾರ್ 4-0-20-1, ಕ್ರಿಶ್ಮರ್ ಸ್ಯಾಂಟೋಕಿ 4-0-40-1, ಜಸ್ಪ್ರೀತ್ ಬುಮ್ರಾ 4-0-31-2, ಪ್ರಗ್ಯಾನ್ ಓಜಾ 4-0-28-0, ಶ್ರೇಯಸ್ ಗೋಪಾಲ್ 4-0-32-2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

