ರಾಜಸ್ಥಾನ ಗೆದ್ದ ಪಂಜಾಬ್
ಚಂಡೀಗಢ: ದಾಂಡಿಗರು ಉತ್ತಮ ರೀತಿಯಲ್ಲಿ ಸ್ಫೋಟಿಸುವುದರೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಶುಕ್ರವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 16 ರನ್ಗಳ ಅಂತರದಿಂದ ಜಯಿಸಿತು.
ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ಗಳಿಸಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ 8 ವಿಕೆಟ್ ಕಳೆದುಕೊಂಡು 163 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ಪರ ಆರಂಭಿಕರಾದ ವೀರೇಂದ್ರ ಸೆಹ್ವಾಗ್ (18) ಮತ್ತು ಮನನ್ ವೋಹ್ರಾ (25) ಅಬ್ಬರಿಸಿದಷ್ಟೇ ಬೇಗನೆ ಪೆವಿಲಿಯನ್ ಸೇರಿದರು. ನಂತರ ಬಂದ ಶಾನ್ ಮಾರ್ಷ್ (40) ಮತ್ತು ವೃದ್ಧಿಮಾನ್ ಸಾಹಾ (ಅಜೇಯ 27) ಅವರು ಆಕರ್ಷಕ ಜತೆಯಾಟ ಪ್ರದರ್ಶಿಸುವ 3ನೇ ವಿಕೆಟ್ಗೆ 59 ರನ್ ಪೇರಿಸಿದ್ದು ತಂಡ 170 ರನ್ಗಳ ಗಡಿ ದಾಟಲು ನೆರವಾಯಿತು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ (ಅಜೇಯ 29) ಮತ್ತು ನಾಯಕ ಜಾರ್ಜ್ ಬೇಯ್ಲಿ (ಅಜೇಯ 26) ಸಹ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವ ಮೂಲಕ ತಂಡಕ್ಕೆ ಆಸರೆಯಾದರು. ಮಿಲ್ಲರ್ ಮತ್ತು ಬೇಯ್ಲಿ ಮುರಿಯದ ಐದನೇ ವಿಕೆಟ್ಗೆ 32 ಎಸೆತಗಳಲ್ಲಿ 60 ರನ್ ಪೇರಿಸಿದರು.
ಆದರೆ, ರಾಜಸ್ಥಾನದ ಪರ ಜೇಮ್ಸ್ ಫಾಕ್ನರ್ (35) ಮತ್ತು ಬ್ರಾಡ್ ಹಾಡ್ಜ್ (31) ಬಿಟ್ಟರೆ ಉಳಿದವರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವೈಫಲ್ಯ ಕಂಡರು.
ಶಾನ್ ಮಾರ್ಷ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್ ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ಗಳಲ್ಲಿ 4 ವಿಕೆಟ್ಗೆ 179
ವೀರೇಂದ್ರ ಸೆಹ್ವಾಗ್ ಸಿ ಮಲಿಕ್ ಬಿ ಫಾಕ್ನರ್ 18 (8), ಮನನ್ ವೋಹ್ರಾ ರನೌಟ್ (ಬಿನ್ನಿ) 20 (25), ಶಾನ್ ಮಾರ್ಷ್ ಸಿ ರಹಾನೆ ಬಿ ಮಲಿಕ್ 40 (35), ವೃದ್ಧಿಮಾನ್ ಸಹಾ ಸಿ ರಹಾನೆ ಬಿ ತೆವಾಟಿಯಾ 27 (20), ಡೇವಿಡ್ ಮಿಲ್ಲರ್ ಅಜೇಯ 29 (20), ಜಾರ್ಜ್ ಬೇಯ್ಲಿ ಅಜೇಯ 26 (18), ಇತರೆ (ಬೈ-3, ಲೆಗ್ಬೈ-7, ವೈಡ್-3, ನೋಬಾಲ್-1) 14 ವಿಕೆಟ್ ಪತನ: 1-24, 2-54, 3-113, 4-119
ಬೌಲಿಂಗ್ ವಿವರ: ವಿಕ್ರಮ್ಜೀತ್ ಮಲಿಕ್ 3-0-29-1, ಶೇನ್ ವ್ಯಾಟ್ಸನ್ 2-0-16-0, ಜೇಮ್ಸ್ ಫಾಕ್ನರ್ 3-0-39-1, ಕೆವೊನ್ ಕೂಪರ್ 4-0-25-0, ತೆವಾಟಿಯಾ 4-0-24-1, ಪ್ರವೀಣ್ ತಾಂಬೆ 4-0-36-0
ರಾಜಸ್ಥಾನ ರಾಯಲ್ಸ್ 20 ಓವರ್ಗಲ್ಲಿ 8 ವಿಕೆಟ್ಗೆ 163
ಅಜಿಂಕ್ಯ ರಹಾನೆ ಬಿ ರಿಶಿ ಧವನ್ 23 (26), ಕರುಣ್ ನಾಯರ್ ಸಿ ಬೇಯ್ಲಿ ಬಿ ಬಾಲಾಜಿ 11 (6), ಸಂಜು ಸ್ಯಾಮ್ಸನ್ ಸ್ಟಂಪ್ ಸಾಹಾ ಬಿ ಕರಣ್ವೀರ್ 30 (29), ಶೇನ್ ವ್ಯಾಟ್ಸನ್ ಬಿ ರಿಶಿ ಧವನ್ 0 (1), ಸ್ಟುವರ್ಟ್ ಬಿನ್ನಿ ಸಿ ಮಾರ್ಷ್ ಬಿ ಕರಣ್ವೀರ್ 7 (10), ಆರ್. ಟೆವಾಟಿಯಾ ಸಿ ಕರಣ್ವೀರ್ ಬಿ ಪಟೇಲ್ 16 (13), ಬ್ರಾಡ್ ಹಾಡ್ಜ್ ಸ್ಟಂಪ್ ಸಾಹಾ ಬಿ ಪಟೇಲ್ 31 (18), ಜೇಮ್ಸ್ ಫಾಕ್ನರ್ ಅಜೇಯ 35 (13), ಕೆವಿನ್ ಕೂಪರ್ ಸಿ ಮಾರ್ಷ್ ಬಿ ಪಟೇಲ್ 2 (2), ವಿಕ್ರಮ್ಜೀತ್ ಮಲಿಕ್ ಅಜೇಯ 1 (2), ಇತರೆ (ಎಲ್ಬಿ-4, ವೈಡ್-3) 7ವಿಕೆಟ್ ಪತನ: 1-21, 2-56, 3-56, 4-70, 5-83, 6-101, 7-128, 8-130.
ಬೌಲಿಂಗ್ ವಿವರ: ಲಕ್ಷ್ಮೀಪತಿ ಬಾಲಾಜಿ 4-0-37-1, ಹೆಂಡ್ರಿಕ್ಸ್ 4-0-57-0, ರಿಶಿ ಧವನ್ 4-0-25-2, ಅಕ್ಷರ್ ಪಟೇಲ್ 4-0-24-3, ಕರಣ್ವೀರ್ ಸಿಂಗ್ 4-0-16-2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

