ಕ್ರೀಡೆ

ಸೋತ ಸೋಮ್

Published On :

ಪ್ಯಾರಿಸ್: ಪ್ರಸಕ್ತ ಸಾಲಿನ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಆಗಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲೇ ಭಾರತದ ಸಿಂಗಲ್ಸ್ ತಾರೆ ಸೋಮ್‌ದೇವ್ ದೇವವರ್ಮನ್, ಸೋಲನುಭವಿಸಿ ನಿರಾಸೆ ಮೂಡಿಸಿದ್ದಾರೆ.
ಭಾನುವಾರ ನಡೆದ ಪುರುಷರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸೋಮ್‌ದೇವ್ ಮೂರು ಗಂಟೆ ಹದಿಮೂರು ನಿಮಿಷಗಳ ಹೋರಾಟದಲ್ಲಿ ಎದುರಾಳಿ ನೆಡೊವ್ಯೆಸೊವ್ ವಿರುದ್ಧ 7-5, 3-6, 6-7(4), 3-6 ಸೆಟ್‌ಗಳ ಅಂತರದಲ್ಲಿ ವಿರೋಚಿತ ಸೋಲನುಭವಿಸಿದರು.
ಪಂದ್ಯದಲ್ಲಿ ಸಕಾರಾತ್ಮಕವಾಗಿ ಆರಂಭ ಪಡೆದ ಸೋಮ್‌ದೇವ್ ಮೊದಲ ಸೆಟ್‌ನಲ್ಲಿ 7್ಛ5 ಅಂತರದ ಮೇಲುಗೈ ಸಾಧಿಸಿದರು. ನಂತರ ಎರಡನೇ ಸೆಟ್‌ನಿಂದ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದ ಸೋಮ್, ಹೋರಾಟವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು ಪರಿಣಾಮ ನಂತರದ ಮೂರು ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿ ಪಂದ್ಯದಲ್ಲಿ ಮಣಿದರು.
ಫೆಡರರ್, ಸೆರೆನಾ ಗೆಲವು: ಇನ್ನು ಪುರುಷರ ವಿಭಾಗದ ಮತ್ತೊಂದು ಪಂದ್ಯದಲ್ಲಿ ಮಾಜಿ ನಂಬರ್ ಒನ್ ಆಟಗಾರ ರೋಜರ್ ಫೆಡರರ್ ತಮ್ಮ ಎದುರಾಳಿ ಲ್ಯಾಕೊ ವಿರುದ್ಧ 6-2, 6-4, 6-2 ನೇರ ಸೆಟ್‌ಗಳ ಅಂತರದಲ್ಲಿ ಮೇಲುಗೈ ಸಾಧಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಅಮೆರಿಕಾದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ತಮ್ಮ ಎದುರಾಳಿ ಲಿಮ್ ವಿರುದ್ಧ 6-2, 6-1 ನೇರ ಸೆಟ್‌ಗಳ ಗೆಲವು ದಾಖಲಿಸಿದ್ದಾರೆ.
ಇನ್ನು ಸೆರೆನಾ ಸೋದರಿ ವೀನಸ್ ವಿಲಿಯಮ್ ಸಹ ತಮ್ಮ ಎದುರಾಳಿ ಬೆನ್ಸಿಕ್ ವಿರುದ್ಧ 6-4, 6-1 ಅಂತರದಲ್ಲಿ ಗೆಲವು ದಾಖಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಅಗ್ನೆಸ್ಕಾ ರಾಡ್ವಾಂಸ್ಕಾ ತಮ್ಮ ಎದುರಾಳಿ ಜಾಂಗ್ ವಿರುದ್ಧ 6-3, 6-0 ಅಂತರದ ಸುಲಭ ಗೆಲವು ದಾಖಲಿಸಿ ಶುಭಾರಂಭ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.