ಆರ್ಆರ್ಗೆ ಕೈಕೊಟ್ಟ ಅದೃಷ್ಟ
ಮುಂಬೈ: ಅದೃಷ್ಟದ ಅಭಯ ಹಸ್ತ ಮುಂಬೈ ಇಂಡಿಯನ್ಸ್ ಪರವಾಗಿದ್ದ ಪರಿಣಾಮ ಹಾಲಿ ಚಾಂಪಿಯನ್ ತಂಡ ಐಪಿಎಲ್ ಏಳನೇ ಆವೃತ್ತಿಯಲ್ಲಿ ಪ್ಲೇ ಆಫ್ಗೆ ತಲುಪುವಲ್ಲಿ ಯಶಸ್ವಿಯಾಗಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಲೇಬೇಕಾದ ಅನಿವಾರ್ಯತೆಯಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡ ಕಡೇಯ ಕ್ಷಣದಲ್ಲಿನ ನಾಟಕೀಯ ತಿರುವಿನಿಂದ 32 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ಗಳ ಭರ್ಜರಿ ಗೆಲವು ದಾಖಲಿಸಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ಗೆ ಇಳಿದ ರಾಜಸ್ಥಾನ ರಾಯಲ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ಗಳ ಉತ್ತಮ ಮೊತ್ತ ಪೇರಿಸಿತು. ಮುಂಬೈ ಇಂಡಿಯನ್ಸ್ ತಂಡ ಅಗತ್ಯ ರನ್ರೇಟ್ನಿಂದ ಗೆಲವು ದಾಖಲಿಸಲು ಈ ಮೊತ್ತವನ್ನು 14.3 ಓವರ್ಗಳಲ್ಲಿ ಗಳಿಸಬೇಕಿತ್ತು.
ಆದರೆ ಮುಂಬೈ ಇಂಡಿಯನ್ಸ್ ತಂಡ 14.3 ಓವರ್ಗಳಲ್ಲಿ ಗೆಲವು ದಾಖಲಿಸಲು 1 ರನ್ ಮಾತ್ರ ಅಗತ್ಯವಿತ್ತಾದರೂ, ರನ್ರೇಟ್ ಸಮಬಲಗೊಂಡ ಹಿನ್ನೆಲೆಯಲ್ಲಿ ಅಂಪೈರ್ಗಳು ಮಾತುಕತೆ ನಡೆಸಿ ಮತ್ತೊಂದು ಎಸೆತದಲ್ಲಿ ಮುಂಬೈ ಇಂಡಿಯನ್ಸ್ ತಂಡ ಬೌಂಡರಿ ದಾಖಲಿಸಬೇಕೆಂದು ನಿರ್ಧರಿಸಿದರು.
ಆಗ ಸಿಕ್ಕ ಅವಕಾಶವನ್ನು ಬಳಸಿಕೊಂಡ ಮುಂಬೈ ತಂಡದ ಬ್ಯಾಟ್ಸ್ಮನ್ ಆದಿತ್ಯ ತಾರೆ ಆ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಅಚ್ಚರಿಯ ರೀತಿಯಲ್ಲಿ ಪ್ಲೇ ಆಫ್ ಸುತ್ತಿಗೆ ಕೊಂಡೊಯ್ದರು.
ಈ ಸೋಲಿನಿಂದ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸುವ ಅವಕಾಶ ಹೊಂದಿದ್ದ ರಾಜಸ್ಥಊನ ತಂಡ ಪಂದ್ಯಾವಳಿಯಿಂದ ಹೊರ ನಡೆಯಿತು.
ಮುಂಬೈ ಇಂಡಿಯನ್ಸ್ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಕೋರೆ ಆ್ಯಂಡರ್ಸನ್ (ಅಜೇಯ 95, 44 ಎಸೆತ, 9 ಬೌಂಡರಿ, 6 ಸಿಕ್ಸರ್) ತಂಡದ ಗೆಲವಿಗೆ ಬೆನ್ನೆಲುಬಾಗಿ ನಿಂತರು.
ಈ ಮೊದಲು ಸಂಜು ಸ್ಯಾಮ್ಸನ್ ಕೇವಲ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 74 ರನ್ ಹಾಗೂ ಕರುಣ್ ನಾಯರ್ 27 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 50 ರನ್ ಸಿಡಿಸಿ ರಾಜಸ್ಥಾನ ರಾಯಲ್ಸ್ಗೆ ಉತ್ತಮ ಆಸರೆಯಾದರು.
ಸ್ಯಾಮ್ಸನ್ ಜತೆ ಇನಿಂಗ್ಸ್ ಆರಂಭಿಸಿದ್ದ ನಾಯಕ ಶೇನ್ ವ್ಯಾಟ್ಸನ್ ಕೇವಲ 8 ರನ್ ಗಳಿಸಿ ವಿಕೆಟ್ ಕೈ ಚೆಲ್ಲಿದಾಗ ರಾಜಸ್ಥಾನದ ಮೊತ್ತ 5.3 ಓವರ್ಗಳಲ್ಲಿ 30 ರನ್ ಅಷ್ಟೆ ಆಗಿತ್ತು.
ನಂತರದಲ್ಲಿ ಸಂಜು ಮತ್ತು ಕರುಣ್ ಶುರುವಿನಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರಿಂದ, ರಾಜಸ್ಥಾನದ ಮೊತ್ತ 10 ಓವರ್ಗಳಲ್ಲಿ ಬರಿ 59 ರನ್ ಆಗಿತ್ತು. ಆದರೆ ಉತ್ತಮ ಲಯಕ್ಕೆ ಮರಳುತ್ತಿದ್ದಂತೆ ಸಂಜು, ಕರುಣ್ ಎದುರಾಳಿ ಬೌಲರ್ಗಳನ್ನು ಚಚ್ಚಲು ಮುಂದಾದ ಪರಿಣಾಮ, ತಂಡ ಬೃಹತ್ ಮೊತ್ತ ಪೇರಿಸಿತ್ತು.
ಸ್ಕೋರ್ ವಿವರ
ರಾಜಸ್ಥಾನ ರಾಯಲ್ಸ್ 20 ಓವರುಗಳಲ್ಲಿ 4 ವಿಕೆಟ್ಗೆ 189
ವ್ಯಾಟ್ಸನ್ ಸಿ ಪೊಲಾರ್ಡ್ ಬಿ ಹರ್ಭಜನ್ 8, ಸಂಜು ಸ್ಯಾಮ್ಸನ್ ಸಿ ಹರ್ಭಜನ್ ಬಿ ಗೋಪಾಲ್ 74, ಕರುಣ್ ನಾಯರ್ ಸಿ ಸಿಮನ್ಸ್ ಬಿ ಬುಮ್ರಾ 50, ಬ್ರಾಡ್ ಹಾಡ್ಜ್ ಅಜೇಯ 29, ಫಾಕ್ನರ್ ಸಿ ಆ್ಯಂಡರ್ಸನ್ ಬಿ ಪೊಲಾರ್ಡ್ 23, ಕೂಪರ್ ಅಜೇಯ 0 ಇತರೆ (ಲೆಗ್ ಬೈ 2, ವೈಡ್ 3) ಒಟ್ಟು 5
ವಿಕೆಟ್ ಪತನ: 1-34, 2-134, 3-136, 4-185
ಬೌಲಿಂಗ್ ವಿವರ: ಆ್ಯಂಡರ್ಸನ್ 2-0-14-0, ಬುಮ್ರಾ 4-1-30-1, ಪ್ರಗ್ಯಾನ್ ಓಜಾ 4-0-31-0, ಹರ್ಭಜನ್ 4-0-43-1, ಶ್ರೇಯಸ್ ಗೋಪಾಲ್ 3-0-36-1, ಪೊಲಾರ್ಡ್ 3-0-33-1
ಮುಂಬೈ ಇಂಡಿಯನ್ಸ್ 14.4 ಓವರ್ಗಳಲ್ಲಿ 5 ವಿಕೆಟ್ಗೆ 195
ಸಿಮನ್ಸ್ ಸಿ ಫಾಕ್ನರ್ ಬಿ ಕುಲಕರ್ಣಿ 12, ಹಸ್ಸಿ ಬಿ ಕೂಪರ್ 22, ಆ್ಯಂಡರ್ಸನ್ ಅಜೇಯ 95, ಪೊಲಾರ್ಡ್ ಸಿ ಹಾಡ್ಜ್ ಬಿ ಕೂಪರ್ 7, ರೋಹಿತ್ ಸಿ ಕರುಣ್ ಬಿ ಕುಲಕರ್ಣಿ 16, ರಾಯುಡು ರನೌಟ್ (ನಾಯರ್/ಸ್ಯಾಮ್ಸನ್) 30, ಆದಿತ್ಯ ತಾರೆ ಅಜೇಯ 6, ಇತರೆ (ಲೆಗ್ ಬೈ 3, ವೈಡ್ 4) ಒಟ್ಟು 6
ವಿಕೆಟ್ ಪತನ: 1-19, 2-53, 3-61, 4-108, 5-189
ಬೌಲಿಂಗ್ ವಿವರ: ಫಾಕ್ನರ್ 3.4-0-54-0, ಕುಲಕರ್ಣಿ 3-0-42-2, ವ್ಯಾಟ್ಸನ್ 2-0-33-0, ಕೂಪರ್ 4-0-38-2, ತಾಂಬೆ 2-0-25-0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

