ಕ್ರೀಡೆ

ಮ್ಯಾಡ್ರಿಡ್ ರಿಯಲ್ ಚಾಂಪಿಯನ್

Published On :

ಲಿಸ್ಬನ್: ಪಂದ್ಯದ ಆರಂಭದಿಂದಲೂ ಸಿಂಹಪಾಲು ಅವಧಿಯಲ್ಲಿ ಪಂದ್ಯದ ಮೇಲೆ ಅಟ್ಲೆಟಿಕೊ ಮ್ಯಾಡ್ರಿಡ್ ತಂಡ ನಿಯಂತ್ರಣ ಸಾಧಿಸಿತ್ತಾದರೂ, ಅಂತಿಮ ಕ್ಷಣದಲ್ಲಿ ನಿಯಂತ್ರಣ ಕಳೆದುಕೊಂಡ ಪರಿಣಾಮ ಮೊದಲ ಬಾರಿಗೆ ಯೂರೋಪ್‌ನ ಫುಟ್ಬಾಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಕೈ ಚೆಲ್ಲಿತು.
  ಇನ್ನು ಅಂತಿಮ ಕ್ಷಣದಲ್ಲಿ ಸಿಕ್ಕಅವಕಾಶವನ್ನು ಬಳಸಿಕೊಂಡು, ನಂತರ ಹೆಚ್ಚುವರಿ ಸಮಯದಲ್ಲಿ ಪ್ರಾಬಲ್ಯ ತೋರಿದ ರಿಯಲ್ ಮ್ಯಾಡ್ರಿಡ್ ತಂಡ ಚಾಂಪಿಯನ್ಸ್ ಲೀಗ್ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ರಿಯಲ್ ಮ್ಯಾಡ್ರಿಡ್ ತಂಡವು 4-1 ಗೋಲುಗಳ ಅಂತರದಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ ವಿರುದ್ಧ ಗೆಲವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕಿತು. ಈ ಮೂಲಕ ರಿಯಲ್ ಮ್ಯಾಡ್ರಿಡ್ ತಂಡ ಒಟ್ಟು 10ನೇ ಬಾರಿಗೆ ಈ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು. ಪಂದ್ಯದ ಹೆಚ್ಚುವರಿ ಸಮಯದಲ್ಲಿ ಅತ್ಯುತ್ತಮ ಗೋಲು ದಾಖಲಿಸಿದ ಗ್ಯಾರೆತ್ ಬೇಲ್, ಮಾರ್ಸೆಲೊ ಹಾಗೂ ಕ್ರಿಸ್ಚಿಯಾನೊ ರೊನಾಲ್ಡೊ ಅತ್ಯುತ್ತಮ ಗೋಲು ದಾಖಲಿಸುವ ಮೂಲಕ ರಿಯಲ್ ಮ್ಯಾಡ್ರಿಡ್ ಗೆಲವಿನ ಕೇಕೆ ಹಾಕಿತು.
ಪಂದ್ಯದ ಮೊದಲಾರ್ಧದಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ ತಂಡದ ಪರ ಡೈಗೊ ಗಾಡಿನ್ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಆರಂಭಿಕ ಮುನ್ನಡೆಯನ್ನು ತಂದುಕೊಟ್ಟರಲ್ಲದೇ, ಮೊದಲಾರ್ಧದ ಅಂತ್ಯಕ್ಕೆ ತಂಡ ಮೇಲುಗೈ ಸಾಧಿಸುವಂತೆ ನೋಡಿಕೊಂಡರು.
ಈ ಮೂಲಕ ಇದೇ ಮೊದಲ ಬಾರಿಗೆ ಅಟ್ಲೆಟಿಕೊ ಮ್ಯಾಡ್ರಿಡ್ ತಂಡ ಯೂರೋಪಿಯನ್ ಫುಟ್ಬಾಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವತ್ತ ತನ್ನ ಹೆಜ್ಜೆ ಹಾಕಿತ್ತು.
ಇನ್ನು ಪಂದ್ಯದ ಎರಡನೇ ಅವಧಿಯ ಅಂತ್ಯದಲ್ಲಿ ಅಂದರೆ 93ನೇ ನಿಮಿಷದಲ್ಲಿ, ರಿಯಲ್ ಮ್ಯಾಡ್ರಿಡ್ ತಂಡದ ಆಟಗಾರ ಸೆರ್ಗಿಯೊ ರೊಮಸ್ ತಮ್ಮ ತಲೆಯಿಂದ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.