

ಲಿಲ್ಲೆ: ಫ್ರಾನ್ಸ್‌ನ ರೀಚರ್ಡ್ ಗ್ಯಾಸ್ಕೆಟ್‌ನನ್ನು ಮಣಿಸುವ ಮೂಲಕ ಸ್ವಿಡ್ಚರ್ಲೆಂಡ್‌ನ ರೋಜರ್ ಫೆಡರರ್ ಮೊದಲ ಬಾರಿಗೆ ಡೇವೀಸ್ ಕಪ್‌ಗೆ ಮುತ್ತಿಟ್ಟಿದ್ದಾರೆ.
ಫ್ರಾನ್ಸ್‌ನ ಲಿಲ್ಲೆಯಲ್ಲಿ ನಡೆದ ಡೇವಿಸ್ ಕಪ್ ಟೆನಿಸ್ ಟ್ಯೂರ್ನಿಯಲ್ಲಿ ರೋಜರ್ ಫೆಡರರ್ ರೀಚರ್ಡ್‌ರನ್ನು 6-4, 6-2, 6-2 ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಕಪ್ ಎತ್ತಿ ಹಿಡಿದರು. ಸ್ವಿಡ್ಚರ್ಲೆಂಡ್ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಡೇವಿಸ್ ಕಪ್ ಗೆದ್ದ ಖ್ಯಾತಿಗೆ ಪಾತ್ರವಾಯಿತು.
17 ಬಾರಿ ಗ್ರಾಂಡ್ ಸ್ಲಾಮ್ ಗೆದ್ದಿರುವ ರೋಜರ್ ಫೆಡರರ್ ಇದೇ ಮೊದಲ ಬಾರಿಗೆ ತನ್ನ ದೇಶಕ್ಕೆ ಡೇವಿಸ್ ಕಪ್‌ನ್ನು ಜಯಿಸಿಕೊಟ್ಟಿದ್ದಾರೆ. ಇದರೊಂದಿಗೆ ತನ್ನ ಖಾತೆಯಲ್ಲಿ ಬಾಕಿ ಉಳಿದುಕೊಂಡಿದ್ದ ಡೇವಿಸ್ ಕಪ್ ಅನ್ನು ಗೆದ್ದುಕೊಂಡಿದ್ದಾರೆ.