ಪಂದ್ಯ ಬಹಿಷ್ಕಾರ ಬೆದರಿಕೆ ಹಾಕಿದ್ದ ವಿಂಡೀಸ್ ಪಡೆ

ಕೊಚ್ಚಿ: ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮುನ್ನ, ಪಂದ್ಯ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಕಾರಣ, ವೆಸ್ಟ್ ಇಂಡೀಸ್ ಆಟಗಾರರು ತಮ್ಮ ಸಂಭಾವನೆಯ ಹೊಸ ಪಟ್ಟಿಯಲ್ಲಿ ಶೇ.75 ರಷ್ಟು ಕಡಿಮೆ ಮೊತ್ತ ನಿಗದಿಪಡಿಸಿರುವ ಕಾರಣ ಆಟಗಾರರು ಪಂದ್ಯಕ್ಕೆ ಬಹಿಷ್ಕಾರ ಹಾಕುವ ಬೆದರಿಕೆ ಒಡ್ಡಿದ್ದರು ಎಂದು ವರದಿಗಳಲ್ಲಿ ಪ್ರಕಟವಾಗಿದೆ.
ವೆಸ್ಟ್ ಇಂಡೀಸ್ ಆಟಗಾರರ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಾವೆಲ್ ಹೈಂಡ್ಸ್ಗೆ, ವಿಂಡೀಸ್ ನಾಯಕ ಡ್ವೈನ್ ಬ್ರಾವೊ ಪತ್ರ ಬರೆದು ಈ ನಿರ್ಧಾರದ ವಿರುದ್ಧ ವಿಂಡೀಸ್ ತಂಡದ ಆಟಗಾರರು ಪ್ರತಿಭಟಿಸುವುದಾಗಿ ತಿಳಿಸಿದ್ದರು. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೊಸ ವೇತನ ಪಟ್ಟಿಯ ಪ್ರಕಾರ ಪ್ರತಿ ಆಟಗಾರರ ಟೆಸ್ಟ್, ಏಕದಿನ ಹಾಗೂ ಟಿ-20 ಪಂದ್ಯಗಳ ವೇತನದಲ್ಲಿ ಶೇ. 75ರಷ್ಟು ಸಂಭವನೆ ಕಡಿಮೆಯಾಗಿತ್ತು. ಹಾಗಾಗಿ ಆಟಗಾರರು ಪ್ರತಿಭಟನೆ ನಡೆಸಲು ಪಂದ್ಯಕ್ಕೆ ಬಹಿಷ್ಕಾರ ಹಾಕಲು ಮುಂದಾಗಿದ್ದರು.
ಹೈಂಡ್ಸ್ ಅವರು ಆಟಗಾರರ ಅಭಿಪ್ರಾಯ ಕೇಳದೇ, ಸಂಭಾವನೆ ಕುರಿತು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಜತೆಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಹಾಗಾಗಿ ಆಟಗಾರರು ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಬ್ರಾವೋ ತಿಳಿಸಿದ್ದರು.
ಅಲ್ಲದೆ ಹಳೆಯ ಮಾದರಿಯ ವೇತನ ಮಾದರಿಯನ್ನೆ ಮುಂದುವರಿಸಬೇಕು ಎಂದು ಆಗ್ರಹಿಸಿರುವ ಬ್ರಾವೊ, ಬೇಡಿಕೆ ಈಡೇರದಿದ್ದರೆ, ಆಟಗಾರರೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಿದ್ದರು. ಹಾಗಾಗಿ ಮೊದಲ ಪಂದ್ಯ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದವು. ಅನಂತರ ನಿರ್ಧಾರ ಬದಲಿಸಿದ ಆಟಗಾರರು, ಪಂದ್ಯದಲ್ಲಿ ಆಡಲು ಮನಸ್ಸು ಮಾಡಿದರು.
ಡಬ್ಲ್ಯೂ ಐಸಿಎ ಕ್ಷಮೆ: ಆಟಗಾರರ ದಿಢೀರ್ ನಿರ್ಧಾರದಿಂದ ಪಂದ್ಯದ ಮೇಲೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದವು. ಈ ಬೆಳವಣಿಗೆಯಿಂದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆ ಬಿಸಿಸಿಐ, ಪಂದ್ಯವಳಿಯ ಷೇರುದಾರರು, ಅಭಿಮಾನಿಗಳಲ್ಲಿ ಕ್ಷಮೆ ಕೋರಿತು. ಅಲ್ಲದೆ ಪಂದ್ಯವನ್ನು ನಡೆಯಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಪ್ರಕಟಣೆಯಲ್ಲಿ ಪ್ರಕಟಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


