ಕ್ರೀಡೆ

ವಿಂಡೀಸ್ ಸರಣಿ ಮೊಟಕು: 258 ಕೋಟಿ ಪರಿಹಾರ ಕೇಳಿದ ಬಿಸಿಸಿಐ

ವಿಂಡೀಸ್ ಸರಣಿ ಮೊಟಕು: 258 ಕೋಟಿ ಪರಿಹಾರ ಕೇಳಿದ ಬಿಸಿಸಿಐ
Published On :

ನವದೆಹಲಿ: ಭಾರತ-ವಿಂಡೀಸ್ ನಡುವಿನ ಸರಣಿ ಅರ್ಧಕ್ಕೆ ಮೊಟಕುಗೊಂಡಿದ್ದರಿಂದ ತಮಗೆ ಭಾರಿ ನಷ್ಟವಾಗಿದ್ದು, ನಷ್ಟದ ಮೊತ್ತವನ್ನು ಭರಿಸುವಂತೆ ಬಿಸಿಸಿಐ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಗೆ ಒತ್ತಡ ಹೇರಿದೆ.

ಭಾರತದಲ್ಲಿ ನಡೆದಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಡುವಿನ ಸರಣಿ ರದ್ದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗರಂ ಆಗಿರುವ ಭಾರತ ಕ್ರಿಕೆಟ್ ನಿಯಂತ್ರಣ ಸಂಸ್ಥೆ ಇಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ಖಡಕ್ ಉತ್ತರ ನೀಡಿದ್ದು, ಸರಣಿ ರದ್ದಾದ ಹಿನ್ನಲೆಯಲ್ಲಿ 42 ಮಿಲಿಯನ್ ಡಾಲರ್ (258 ಕೋಟಿ ರು.)ಗಳನ್ನು ಪಾವತಿಸುವಂತೆ ಒತ್ತಡ ಹೇರಿದೆ. ಬಿಸಿಸಿಐನ ದಿಢೀರ್ ನಿರ್ಧಾರದಿಂದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಗೊಂದಲಕ್ಕೀಡಾಗಿದ್ದು, ಸಂಜೆ ವೇಳೆಗೆ ಉತ್ತರಿಸುವ ಸಾಧ್ಯತೆ ಇದೆ.

ಕಳೆದ ಅಕ್ಟೋಬರ್‌ನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಧರ್ಮಶಾಲಾದಲ್ಲಿ ನಡೆದ ನಾಲ್ಕನೇ ಏಕದಿನ ಕ್ರಿಕೆಟ್ ಬಳಿಕ ವೆಸ್ಟ್ ಇಂಡೀಸ್ ತಂಡ ಪ್ರವಾಸವನ್ನು ಮೊಟಕುಗೊಳಿಸಿತ್ತು. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಲ್ಲಿ ವೇತನ ತಾರತಮ್ಯವಾಗಿದೆ ಎಂದು ಆರೋಪಿಸಿ ವಿಂಡೀಸ್ ಕ್ರಿಕೆಟಿಗರು ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಪ್ರವಾಸದಲ್ಲಿ ವಿಂಡೀಸ್ ತಂಡ ಇನ್ನು 1 ಏಕದಿನ ಪಂದ್ಯ, 1 ಟಿ20 ಪಂದ್ಯ ಮತ್ತು 3 ಟೆಸ್ಟ್‌ಗಳು ಆಡಬೇಕಿತ್ತು.

ಹೀಗಾಗಿ ಈ ಪಂದ್ಯಗಳ ಆಯೋಜಕರಿಗೆ ನಷ್ಟವಾಗಿದ್ದು, ಈದೀಗ ಬಿಸಿಸಿಐ ನಷ್ಟ ಭರಿಸುವಂತೆ ವಿಂಡೀಸ್ ಕ್ರಿಕೆಟ್ ಮಂಡಳಿ ಮೇಲೆ ಒತ್ತಡ ಹೇರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.