ಪಾಕಿಸ್ತಾನ ಕ್ರಿಕೆಟಿಗನಿಂದ ಮತಾಂತರ ಯತ್ನ: ಪಿಸಿಬಿಯಿಂದ ವಿಚಾರಣೆ

ಇಸ್ಲಾಮಾಬಾದ್: ಶ್ರೀಲಂಕಾ ಕ್ರಿಕೆಟ್ ಆಟಗಾರ ತಿಲಕರತ್ನೆ ದಿಲ್ಶಾನ್ ಅವರನ್ನು ಮತಾಂತರಗೊಳ್ಳುವಂತೆ ಹೇಳಿ ವಿವಾದಕ್ಕೆ ಕಾರಣವಾಗಿರುವ ಕ್ರಿಕೆಟ್ ಆಟಗಾರ ಅಹ್ಮದ್ ಶೆಹಜಾದ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ತನಿಖೆಗೆ ಮುಂದಾಗಿದೆ.
ದಂಬೂಲಾದಲ್ಲಿ ನಡೆದ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಅಂತಿಮ ಏಕದಿನ ಪಂದ್ಯದ ನಂತರ ಎರಡೂ ತಂಡದ ಆಟಗಾರರು ಪೆವಿಲಿಯನ್ನತ್ತ ಹೆಜ್ಜೆಹಾಕುತ್ತಿದ್ದಾಗ ದಿಲ್ಶಾನ್ ಬಳಿ ಬಂದ ಶೆಹಜಾದ್, ಇಸ್ಲಾಂಗೆ ಮತಾಂತರಗೊಳ್ಳುವಂತೆ ಸಲಹೆ ನೀಡಿದ್ದರು.
'ಒಂದು ವೇಳೆ ನೀವು ಕಾಫಿರ್ ಆಗಿದ್ದರೆ (ಇಸ್ಲಾಂಯೇತರ) ಕೂಡಲೇ ಇಸ್ಲಾಂಗೆ ಮತಾಂತರಗೊಳ್ಳಿ. ನೀವು ಜೀವನದಲ್ಲಿ ಏನು ಮಾಡಿದ್ದೀರಿ ಎಂಬುದು ಪರಿಗಣನೆಗೆ ಬರುವುದಿಲ್ಲ. ನೇರವಾಗಿ ಸ್ವರ್ಗಕ್ಕೆ ಹೋಗಬಹುದು' ಎಂದು ಶೆಹಜಾದ್ ಹೇಳಿದ್ದಾರೆ. ಈ ವೇಳೆ ದಿಲ್ಶಾನ್ ಅವರು 'ನೀನು ಹೇಳಿದ್ದು ನನಗೆ ಕೇಳಿಸಲಿಲ್ಲ' ಎಂದಾಗ 'ಶೆಹಜಾದ್ ಹಾಗಾದರೆ ಅಗ್ನಿ ಪರೀಕ್ಷೆಗೆ ಸಿದ್ಧನಾಗು' ಎಂದು ಹೇಳಿದ್ದರು ಎಂದು ತಿಳಿದುಬಂದಿದೆ. ಇದು ಮೈದಾನದಲ್ಲಿನ ಕ್ಯಾಮೆರಾಗಳಲ್ಲಿ ಗೋಚರವಾಗಿತ್ತು. ಈ ವಿಚಾರ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಪ್ರಕರಣ ಸಂಬಂಧ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಕ್ರಿಕೆಟಿಗ ಶೆಹಜಾದ್ ಅವರಿಗೆ ವಿವರಣೆ ನೀಡುವಂತೆ ಸಮನ್ಸ್ ಜಾರಿ ಮಾಡಿದೆ.
ದಿಲ್ಶಾನ್ ಅವರ ತಂದೆ ಇಸ್ಲಾಂ ಧರ್ಮಕ್ಕೆ ಸೇರಿದವರಾಗಿದ್ದು, ಅವರ ತಾಯಿ ಬೌದ್ಧ ಧರ್ಮದವರಾಗಿದ್ದಾರೆ. ಕ್ರಿಕೆಟಿಗ ದಿಲ್ಶಾನ್ ಅವರನ್ನು ಶ್ರೀಲಂಕಾದಲ್ಲಿ ತುವಾನ್ ಮಹಮದ್ ದಿಲ್ಶಾನ್ ಎಂದೇ ಕರೆಯಲಾಗುತ್ತಿತ್ತು. 1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವಾಗ ದಿಲ್ಶಾನ್ ತಮ್ಮ ಹೆಸರನ್ನು ಬೌದ್ಧ ಧರ್ಮದ ಅನ್ವಯ ತಿಲಕರತ್ನೆ ಮುದಿಯಾನ್ಸೆಲಗೆ ದಿಲ್ಶಾನ್ ಎಂದು ಬದಲಾಯಿಸಿಕೊಂಡಿದ್ದರು.
ದಿಲ್ಶಾನ್ ಅವರ ಬಾಲ್ಯದ ಕೋಚ್ ರಂಜನ್ ಪರಿಣವಿತರಣ ಅವರು ಹೇಳುವಂತೆ ದಿಲ್ಶಾನ್ ಅವರು ಆರಂಭದಲ್ಲಿ ಇಸ್ಲಾಂ ಹೆಸರನ್ನು ಮುಂದುವರೆಸಿಕೊಂಡು ಬಂದಿದ್ದರು. ಬಳಿಕ ಅವರ ಸಹೋದರ ಮತ್ತು ಸಹೋದರಿಯರು ಅವರ ತಾಯಿಯ ಬೌದ್ಧಧರ್ಮದ ಹೆಸರುಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


