ಕ್ರೀಡೆ

ಆಸ್ಕರ್ ಪಿಸ್ಟೋರಿಯಸ್ ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲ

ಆಸ್ಕರ್ ಪಿಸ್ಟೋರಿಯಸ್ ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲ
Published On :

ಪ್ರಿಟೋರಿಯಾ: 'ಬ್ಲೇಡ್ ರನ್ನರ್' ಖ್ಯಾತಿಯ ಪ್ಯಾರ್ಯಾಲಿಂಪಿಕ್ ಆಟಗಾರ ಆಸ್ಕರ್ ಪಿಸ್ಟೋರಿಯಸ್ ತನ್ನ ಪ್ರೇಯಸಿಯನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲ ಎಂದು ದಕ್ಷಿಣ ಆಫಿಕಾದ ಪ್ರಿಟೋರಿಯಾ ಹೈಕೋರ್ಟ್ ಹೇಳಿದೆ.

ಕಳೆದ 2013ರ ಪ್ರೇಮಿಗಳ ದಿನಾಚರಣೆಯಂದು ಪ್ರೇಯಸಿಯನ್ನೇ ಕೊಂದು ಜೈಲುಪಾಲಾಗಿದ್ದ ಪ್ಯಾರಾಲಿಂಪಿಕ್ಸ್ ಆಟಗಾರ ಆಸ್ಕರ್ ಪಿಸ್ಟೋರಿಯಸ್ ಗೆ ದಕ್ಷಿಣ ಆಫ್ರಿಕಾ ನ್ಯಾಯಾಲಯ ಕೊಂಚ ರಿಲೀಫ್ ನೀಡಿದ್ದು, ಪಿಸ್ಟೋರಿಯಸ್ ತನ್ನ ಪ್ರೇಯಸಿಯನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಆಸ್ಕರ್ ವಿರುದ್ಧ ದಾಖಲಾಗಿದ್ದ ಪ್ರಮುಖ 'ಉದ್ದೇಶಪೂರ್ವಕ ಕೊಲೆ' ಆರೋಪವನ್ನು ನ್ಯಾಯಾಧೀಶರು ತಳ್ಳಿಹಾಕಿದ್ದಾರೆ.

'ಪ್ರಕರಣದ ಸಂಪೂರ್ಣ ವಿಚಾರಣೆಯನ್ನು ನಡೆಸಲಾಗಿದ್ದು, ಪ್ರಕರಣದಲ್ಲಿನ ಬಹುತೇಕ ಸಾಕ್ಷಿಗಳು ಆಸ್ಕರ್ ವಿರುದ್ಧದ 'ಉದ್ದೇಶಪೂರ್ವಕ ಕೊಲೆ' ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿವೆ. ಬಾಗಿಲ ಹಿಂದೆ ನಿಂತಿರುವ ವ್ಯಕ್ತಿಯನ್ನು ನಿರ್ದಿಷ್ಟವಾಗಿ ಯಾರು ಎಂದು ಗುರುತಿಸಿ ಕೊಲೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಆಸ್ಕರ್ ಪಿಸ್ಟೋರಿಯಸ್ ಉದ್ದೇಶಪೂರ್ವಕವಾಗಿ ತನ್ನ ಗೆಳತಿ ರೀವಾ ಸ್ಟೀನ್ ಕಂಪ್ ಳನ್ನು ಕೊಲೆ ಮಾಡಿಲ್ಲ' ಎಂದು ನ್ಯಾಯಾಧೀಶರಾದ ಥಕೊಝೈಲ್ ಮಸಿಪಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣ ಸಂಬಂಧದ ವಿಚಾರಣೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ನ್ಯಾಯಾಧೀಶರು ತೀರ್ಪು ನೀಡುವ ಸಾಧ್ಯತೆ ಇದೆ.

2013ರ ಪ್ರೇಮಿಗಳ ದಿನಾಚರಣೆಯಂದು ಪಿಸ್ಟೋರಿಯಸ್ ನ ಪ್ರೇಯಸಿ ರೀವಾ ಸ್ಟೀನ್ ಕಂಪ್ ಆತನಿಗೆ ಶುಭಾ ಕೋರಲು ಮುಂಜಾನೆಯೇ ಆತನ ಮನೆಗೆ ಆಗಮಿಸಿದ್ದಳು. ಈ ವೇಳೆ ಗಾಢ ನಿದ್ರೆಯಲ್ಲಿದ್ದ ಪಿಸ್ಟೋರಿಯಸ್ ಮನೆಗೆ ಕಳ್ಳರು ಆಗಮಿಸಿದ್ದಾರೆ ಎಂದು ಭಾವಿಸಿ ಬಾಗಿಲ ಹಿಂದೆ ಇದ್ದ ರೀವಾಳ ಮೇಲೆ ತನ್ನ ಪಿಸ್ತೂಲ್ ನಿಂದ ಗುಂಡಿನ ದಾಳಿ ನಡೆಸಿದ್ದ. ಸ್ಥಳದಲ್ಲೇ ರೀವಾ ಪ್ರಾಣಪಕ್ಷಿ ಹಾರಿಹೋಗಿತ್ತು. ರೀವಾಳ ತಲೆಗೆ ಗುಂಡು ತಗುಲಿ ಆಕೆಯ ತಲೆ ಛಿದ್ರವಾಗಿತ್ತು.
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪ್ರಿಟೋರಿಯಾ ಪೊಲೀಸರು, ಪಿಸ್ಟೋರಿಯಸ್ ನನ್ನು ಬಂಧಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ತನ್ನ ವಿಚಾರಣೆ ಪೂರ್ಣಗೊಳಿಸಿದ್ದು, ಶೀಘ್ರದಲ್ಲಿಯೇ ಪಿಸ್ಟೋರಿಯಸ್ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದೆ.

ಕೋರ್ಟ್ ಹಾಲ್‌ನಲ್ಲೇ ಗಳಗಳನೇ ಅತ್ತ ಪಿಸ್ಟೋರಿಯಸ್
ಅತ್ತ ನ್ಯಾಯಾಧೀಶರು ತೀರ್ಪು ಘೋಷಣೆ ಮಾಡುತ್ತಿದ್ದಂತೆಯೇ ಇತ್ತ, ಆರೋಪಿ ಸ್ಥಾನದಲ್ಲಿ ಕುಳಿತಿದ್ದ ಆಸ್ಕರ್ ಪಿಸ್ಟೋರಿಯಸ್ ತನ್ನ ಪ್ರೇಯಸಿಯನ್ನು ನೆನೆದು ನ್ಯಾಯಾಲಯದ ಆವರಣದಲ್ಲೇ ಗಳಗಳನೇ ಅತ್ತಿದ್ದಾನೆ.

ತೀರ್ಪಿನ ವೀಡಿಯೊಗಾಗಿ ಇಲ್ಲಿ ಕ್ಲಿಕ್ಕಿಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.