ಯುವಿ, ಜಹೀರ್ ಫಿಟ್ : ಡುಮಿನಿ ಸ್ಪಷ್ಟನೆ

ಡೆಲ್ಲಿ ಡೇರ್‍ಡೇವಿಲ್ಸ್ ತಂಡದ ಸ್ಟಾರ್ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಜಹೀರ್ ಖಾನ್ ಸಂಪೂರ್ಣ ಫಿಟ್ ಆಗಿದ್ದಾರೆಂದು...
ಯುವರಾಜ್ ಹಾಗೂ ಜಹೀರ್
ಯುವರಾಜ್ ಹಾಗೂ ಜಹೀರ್
Updated on

ನವದೆಹಲಿ: ಡೆಲ್ಲಿ ಡೇರ್‍ಡೇವಿಲ್ಸ್ ತಂಡದ ಸ್ಟಾರ್ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಜಹೀರ್ ಖಾನ್ ಸಂಪೂರ್ಣ ಫಿಟ್ ಆಗಿದ್ದಾರೆಂದು ತಂಡದ ನಾಯಕ ಜೀನ್ ಪಾಲ್ ಡುಮಿನಿ ಸ್ಪಷ್ಟಪಡಿಸಿದ್ದಾರೆ. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಈ ಇಬ್ಬರು ಆಟಗಾರರು ಗಾಯಗೊಂಡಿದ್ದಾರೆಂಬ ವದಂತಿಗಳನ್ನು ತಳ್ಳಿಹಾಕಿದ ಅವರು, ಯುವರಾಜ್ ಹಾಗೂ ಜಹೀರ್ ಇಬ್ಬರೂ ತಮ್ಮ ತಂಡದ ಪ್ರಮುಖ ಆಟಗಾರರಾಗಿದ್ದು, ಅವರ ಉಪಸ್ಥಿತಿಯಿಂದ ತಂಡ ಬಲಿಷ್ಠವಾಗಿದೆ ಎಂದರು.
ಯುವಿ, ಜಹೀರ್ ಪಿsಟ್ ಇಲ್ಲ ಎಂಬ ಸುದ್ದಿ ಹರಡಲು ಕೆಲವು ಕಾರಣಗಳಿದ್ದವು. ಶುಕ್ರವಾರ ಡೆಲ್ಲಿ ತಂಡ ನಡೆಸಿದ ಅಭ್ಯಾಸಕ್ಕೆ ಇವರಿಬ್ಬರೂ ಆಗಮಿಸಿರಲಿಲ್ಲ. ಅಲ್ಲದೆ, ಶನಿವಾರದ ಅಭ್ಯಾಸಕ್ಕೂ ಯುವಿ ಗೈರು ಹಾಜರಾಗಿದ್ದರು. ಶನಿವಾರವೂ ಇದೇ ಚಿತ್ರಣ ಮುಂದುವರಿಯಿತು. ಆದ್ದರಿಂದ, ಯುವಿ, ಜಹೀರ್ ಇಬ್ಬರೂ ಫಿಟ್  ಇಲ್ಲ ಎಂಬ ಸುದ್ದಿಗಳು ಹರಿದಾಡತೊಡಗಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com