ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಕವಿದ ಕಾನೂನು ಕಾರ್ಮೋಡ

ಈ ಬಾರಿಯ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ನಡೆಯುವ ಎಲ್ಲಾ ಸಂಗೀತ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ತನಗೆ ರಾಯಧನ ನೀಡಲೇಬೇಕು...
ಐಪಿಆರ್‍ಎಸ್ ಸಂಸ್ಥೆ (ಸಂಗ್ರಹ ಚಿತ್ರ)
ಐಪಿಆರ್‍ಎಸ್ ಸಂಸ್ಥೆ (ಸಂಗ್ರಹ ಚಿತ್ರ)
Updated on: 

ಕೋಲ್ಕತಾ: ಈ ಬಾರಿಯ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ನಡೆಯುವ ಎಲ್ಲಾ ಸಂಗೀತ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ತನಗೆ ರಾಯಧನ ನೀಡಲೇಬೇಕು ಎಂದು "ದ ಇಂಡಿಯನ್ ಪರ್ಫಾಮಿಂಗ್ ರೈ ಸೊಸೈಟಿ ಲಿಮಿಟೆಡ್ (ಐಪಿಆರ್‍ಎಸ್)' ಎಂಬ ಸಂಸ್ಥೆಯು ಐಪಿಎಲ್ ಆಡಳಿತ ಮಂಡಳಿ, ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಉದ್ಘಾಟನಾ ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ಎನ್ ಕಂಪಾಸ್ ಇವೆಂಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.

ಉದ್ಘಾಟನಾ ಸಮಾರಂಭದಲ್ಲಿ ತನ್ನ ಸಂಸ್ಥೆಯ ಕಲಾವಿದರು ನಡೆಸಿಕೊಡುವ ಕಾರ್ಯಕ್ರಮಕ್ಕೆ ತನ್ನಿಂದ ಪರವಾನಗಿ ಪಡೆಯಬೇಕು ಹಾಗೂ ಕಾರ್ಯಕ್ರಮಕ್ಕಾಗಿ ರಾಯಧನ ನೀಡಬೇಕು ಎಂದು ಈ ಹಿಂದೆ ಐಪಿಆರ್‍ಎಸ್ ಆಯೋಜಕರನ್ನು ಕೇಳಿಕೊಂಡಿತ್ತು. ಆದರೆ, ಇದಕ್ಕೆ ಆಯೋಜಕರು ಸೊಪ್ಪುಹಾಕದ ಹಿನ್ನೆಲೆಯಲ್ಲಿ, ಇದೀಗ ಐಪಿಆರ್‍ಎಸ್, ನ್ಯಾಯಾಲಯದ ಮೆಟ್ಟಿಲೇರಿದೆ.

ಯಾವುದು ಈ ಸಂಸ್ಥೆ?
ಐಪಿಆರ್‍ಎಸ್ ಸಂಸ್ಥೆ ಕಲಾವಿದರ, ಸಂಗೀತಗಾರರ ಹಕ್ಕುಗಳಿಗಾಗಿ ಕಳೆದ ಹಲವಾರು ವರ್ಷಗಳಿಂದ ಶ್ರಮಿಸುತ್ತಿದೆ. ಸಂಗೀತ, ನೃತ್ಯ ಸೇರಿದಂತೆ ಎಲ್ಲಾ ಮಾದರಿಯ ಪ್ರದರ್ಶನ ಕಲೆಗಳನ್ನು ನೀಡುವ ಕಲಾವಿದರು, ಲೇಖಕರು, ಸಂಗೀತಗಾರರು, ಬಾಲಿವುಡ್ ನಟ-ನಟಿ, ನಿರ್ಮಾಪಕರನ್ನೊಳಗೊಂಡಂತೆ ಸುಮಾರು 3,500 ಸದಸ್ಯರನ್ನು ಈ ಸಂಸ್ಥೆ ಹೊಂದಿದೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್, ಅನುಮಲ್ಲಿಕ್, ಗುಲ್ಜಾರ್, ಬಪ್ಪಿ ಲಹಿರಿ, ರವೀಂದ್ರ ಜೈನ್, ಜತಿನ್ ಪಂಡಿತ್ (ಜತಿನ್-ಲಲಿತ್ ಜೋಡಿ), ಶ್ರವಣ್ ರಾಥೋಡ್ (ನದೀಮ್-ಶ್ರಮಣ್ ಜೋಡಿ), ಇಳಯರಾಜಾ ಮುಂತಾದ ಪ್ರಖ್ಯಾತರು ಈ ಸಂಸ್ಥೆಯ ಸದಸ್ಯರಾಗಿದ್ದಾರೆ. ತನ್ನ ಸಂಸ್ಥೆಯ ಸದಸ್ಯರು ನಡೆಸಿಕೊಡುವ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ರಾಯಧನವನ್ನು ಪಡೆದು ಅದನ್ನು ಸಂಬಂಧಪಟ್ಟ ಕಲಾವಿದರಿಗೆ ಸಂಸ್ಥೆ ಹಂಚುತ್ತದೆ.

ಸಂಸ್ಥೆಯ ವಾದವೇನು?
ಪಶ್ಚಿಮ ಬಂಗಾಳ ಸರ್ಕಾರದ ಒಡೆತನದಲ್ಲಿರುವ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಏ. 7ರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ನಟರಾದ ಹೃತಿಕ್ ರೋಷನ್, ಫರ್ಹಾನ್ ಅಖ್ತರ್, ಅನುಷ್ಕಾ ಶರ್ಮಾ, ಸಂಗೀತ ನಿರ್ದೇಶಕ ಪ್ರೀತಮ್ ಕಾರ್ಯಕ್ರಮ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಈ ಕಾರ್ಯಕ್ರಮಕ್ಕೆ ರಾಯಧನ ಕೊಡಬೇಕು ಎಂದು ಐಪಿಆರ್‍ಎಸ್ ಒತ್ತಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com