ಅಭಿಮಾನಿಗಳ ನೆರವಿಗೆ ಚಾಲೆಂಜರ್ಸ್ ಹೆಜ್ಜೆ

ಐಪಿಎಲ್‍ನಲ್ಲಿ ವಿಶ್ವ ಶ್ರೇಷ್ಠ ಪ್ರದರ್ಶನಗಳನ್ನು ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಲ್ಲಿ ಅತ್ಯಂತ ಮನರಂಜನೆಯ ತಂಡವಾಗಿ ಬಿಂಬಿತವಾಗಿದೆ. ಹಾಗಾಗಿ ಪ್ರತಿ ಬಾರಿಯೂ ಆರ್‍ಸಿಬಿಗೆ ಹೆಚ್ಚು ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸುತ್ತಾರೆ...
ಅಭಿಮಾನಿಗಳ ನೆರವಿಗೆ ಚಾಲೆಂಜರ್ಸ್ ಹೆಜ್ಜೆ
ಅಭಿಮಾನಿಗಳ ನೆರವಿಗೆ ಚಾಲೆಂಜರ್ಸ್ ಹೆಜ್ಜೆ
Updated on: 

ಬೆಂಗಳೂರು: ಐಪಿಎಲ್‍ನಲ್ಲಿ ವಿಶ್ವ ಶ್ರೇಷ್ಠ ಪ್ರದರ್ಶನಗಳನ್ನು ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಲ್ಲಿ ಅತ್ಯಂತ ಮನರಂಜನೆಯ ತಂಡವಾಗಿ ಬಿಂಬಿತವಾಗಿದೆ. ಹಾಗಾಗಿ ಪ್ರತಿ ಬಾರಿಯೂ ಆರ್‍ಸಿಬಿಗೆ ಹೆಚ್ಚು ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸುತ್ತಾರೆ.

ಪಂದ್ಯವನ್ನು ವೀಕ್ಷಿಸಲು ಮೈದಾನಕ್ಕೆ ಆಗಮಿಸುವ ಅಭಿಮಾನಿಗಳು ಹಾಗೂ ತಂಡ ಬಗ್ಗೆ ಆಸಕ್ತಿ ಹೊಂದಿರುವ ಅಭಿಮಾನಿಗಳಿಗಾಗಿ ಆರ್‍ಸಿಬಿ ಫ್ಯಾನ್ ಫಸ್ಟ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳಿಗೆ ಪಂದ್ಯದ ದಿನದ ಸಂಪೂರ್ಣ ಮಾಹಿತಿಯಿಂದ ಹಿಡಿದು ತಂಡದ ಆಟಗಾರರ ಮೈದಾನದ ಹೊರಗಿನ ಚಟುವಟಿಕೆಗಳ ಮಾಹಿತಿಯನ್ನು ನೀಡಲು ನಿರ್ಧರಿಸಿದೆ. ಹಾಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡಿದೆ.

ಪಂದ್ಯದ ವೇಳೆ ಪ್ರೇಕ್ಷಕರಿಗೆ ಮಾರ್ಗದರ್ಶನ ನೀಡಲು ಮೈದಾನದಲ್ಲಿ 60 ಸ್ವಯಂ ಸೇವಕರನ್ನು ನಿಯೋಜಿಸಿದೆ. ಅಭಿಮಾನಿಗಳು ತಮಗೆ ಯಾವುದೇ ಮಾಹಿತಿ ಅಥವಾ ಮಾರ್ಗದರ್ಶನ ಬೇಕಾದಲ್ಲಿ ಅವರನ್ನು ಸಂಪರ್ಕಿಸಬಹುದಾಗಿದೆ. ಅಭಿಮಾನಿಗಳು ತಮ್ಮ ಟಿಕೆಟ್ ಅನ್ನು ಬಳಸಿಕೊಂಡು ಆ್ಯಪ್ ಮೂಲಕ ಪಂದ್ಯದ ಇಡೀ ದಿನನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ತಮ್ಮ ಸ್ಟ್ಯಾಂಡ್‍ಗೆ ಹೊಗುವ ದಾರಿ, ವಾಹನ ನಿಲುಗಡೆ, ಭದ್ರತೆ ಸೇರಿದಂತೆ ಇತರೆ ಮಾಹಿತಿಯನ್ನು ಪಡೆಯಬಹುದಾಗಿದೆ. ಅಲ್ಲದೆ ತಂಡದ ಟೀ ಶರ್ಟ್, ಬ್ಯಾಂಡ್ ಹಾಗೂ ಇತರೆ ವಸ್ತುಗಳ ಖರೀದಿಗೂ ಅವಕಾಶ ಕಲ್ಪಿಸಲಾಗಿದೆ.

ಪಂದ್ಯದ ಕುರಿತ ನೇರ ಮಾಹಿತಿ, ತಂಡದ ವೇಳಾಪಟ್ಟಿ ಹೀಗೆ ಸಾಕಷ್ಟು ಮಾಹಿತಿಗಳನ್ನು ನೀಡಲಾಗುವುದು. ಇನ್ನು ಆರ್‍ಸಿಬಿ ಇನ್‍ಸೈಡರ್ ಎಂಬ ವಿಭಾಗವನ್ನು ಆರಂಭಿಸಿದ್ದು, ತಂಡ ಮೈದಾನದ ಹೊರಗೆ ನಡೆಸುವ ಚಟುವಟಿಕೆಗಳ ವಿಡಿಯೋಗಳನ್ನು ನೀಡಲಾಗುವುದು. ಇನ್ನು ಅಭಿಮಾನಿಗಳು ತಮ್ಮ ಅಬಿsಪ್ರಾಯವನ್ನು ತಂಡದೊಂದಿಗೆ ಹಂಚಿಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ #rcbinstadia ಕ್ಕೆ ಟ್ವೀಟ್ ಮಾಡಬಹುದಾಗಿದೆ. ಈ ಟ್ವೀಟ್‍ಗಳನ್ನು ಆರ್‍ಸಿಬಿ ಆಟಗಾರರೊಂದಿಗೆ ಹಂಚಿಕೊಳ್ಳಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com