ಸೌಮ್ಯಜಿತ್, ಮಣಿಕಾಗೆ ಪ್ರಶಸ್ತಿ

ರಾಷ್ಟ್ರೀಯ ಚಾಂಪಿಯನ್ ಸೌಮ್ಯಜಿತ್ ಘೋಷ್ ಹಾಗೂ ಮಣಿಕಾ ಬಾತ್ರಾ 45ನೇ ಅಖಿಲ ಭಾರತ ಸಾಂಸ್ಥಿಕ ಮಟ್ಟದ ಟೇಬಲ್ ಟೆನಿಸ್ ಚಾಂಪಿಯನ್‍ಶಿಪ್‍ನಲ್ಲಿ...
ಸೌಮ್ಯಜಿತ್ ಘೋಷ್
ಸೌಮ್ಯಜಿತ್ ಘೋಷ್

ನವದೆಹಲಿ: ರಾಷ್ಟ್ರೀಯ ಚಾಂಪಿಯನ್ ಸೌಮ್ಯಜಿತ್ ಘೋಷ್ ಹಾಗೂ ಮಣಿಕಾ ಬಾತ್ರಾ 45ನೇ ಅಖಿಲ ಭಾರತ ಸಾಂಸ್ಥಿಕ ಮಟ್ಟದ ಟೇಬಲ್ ಟೆನಿಸ್ ಚಾಂಪಿಯನ್‍ಶಿಪ್‍ನಲ್ಲಿ ಕ್ರಮವಾಗಿ ಪುರುಷರ ಹಾಗೂ  ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.  ಭಾನುವಾರ ಇಲ್ಲಿನ ತ್ಯಾಗರಾಜ್  ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯಗಳಲ್ಲಿ, ಸೌಮ್ಯಜಿತ್ ಘೋಷ್, ಪಿಎಸ್‍ಪಿಬಿ ಕಾಲೇಜಿನ ಹರ್ಮೀತ್ ದೇಸಾಯ್ ಅವರನ್ನು 4- 2 ಸೆಟ್‍ಗಳ ಅಂತರದಲ್ಲಿ ಸೋವಿಸಿ ಪ್ರಶಸ್ತಿಗೆ ಭಾಜನರಾದರೆ ಮಣಿಕಾ ಬಾತ್ರಾ ಅವರು, ಅಂಕಿತಾ ದಾಸ್ ಅವರನ್ನು ಸೋಲಿಸಿ ಚಾಂಪಿಯನ್ ಶಿಪ್ ಪಟ್ಟ ಅಲಂಕರಿಸಿದರು. ಹರ್ಮೀತ್ ಅವರು ಪ್ರಶಸ್ತಿಯೊಂದಿಗೆ ರು. 75 ಸಾವಿರ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರೆ, ಮಣಿಕಾ ಅವರು ರು. 58 ಸಾವಿರ ನಗದು ಬಹುಮಾನವನ್ನು ಪಡೆದುಕೊಂಡರು.
ಸೌಮ್ಯಜಿತ್ ಹಾಗೂ ಹರ್ಮೀತ್ ದೇಸಾಯ್  ನಡುವಿನ ಪಂದ್ಯ  ಕುತೂಹಲಕಾರಿಯಾಗಿತ್ತು,   ತೀರಾ ಹಠಯಾರಿಯಾಗಿ ಕಂಡ ಹರ್ಮೀತ್ ದೇಸಾಯ್, ಸೌಮ್ಯಜೀತ್ಹೆ  ಭಾರೀ ಪೈಪೋಟಿ ನೀಡಿದರ. ಇದೇ ಅಂಕಣದಲ್ಲಿ, ಕಳೆದ ವರ್ಷ ಫೈನಲ್ ನಲ್ಲಿ ಜಿ. ಸತಿಯನ್ ವಿರುದ್ಧ ಕಂಡಿದ್ದ ಸೌಮ್ಯಜೀತ್, ಈ ಬಾರಿ ಪ್ರಶಸ್ತಿ ಗೆಲ್ಲುವ ಉಮೇದಿನಲ್ಲಿದ್ದರು. ಆದರೆ, ಅದಕ್ಕೆ ದೇಸಾಯ್ ಸೆಡ್ಡು ಹೊಡೆದರು. ಪಂದ್ಯದ ಪ್ರತಿ ಹಂತದಲ್ಲೂ
ಅವರಿಗೆ ಸವಾಲಾಗಿ ಪರಿಣಮಿಸಿದರು. ಮೊದಲ ಸೆಟ್‍ನ ಆರಂಭಿಕ ಗೇಮ್ ನಲ್ಲಿ ಸೌಮ್ಯಜಿತ್‍ಗಿಂತ್ 10 ಅಂತರದ ಮುನ್ನಡೆ ಸಾಧಿಸಿದ ದೇಸಾಯ್, ಉತ್ತಮ ಅಂಕ ಪೇರಿಸುವತ್ತ ಹೆಜ್ಜೆಯಿಟ್ಟರು. ಆದರೆ, ಇದಕ್ಕೆ ಬ್ರೇಕ್ ಹಾಕಿದ ಸೌಮ್ಯಜೀತ್ ಈ ಅಂತರವನ್ನು 2-1ಕ್ಕೆ  ಹೆಚ್ಚಿಸಿಕೊಳ್ಳುವ ಮೂಲಕ ಎದುರಾಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಆದರೂ, ಹಠ ಬಿಡದ ದೇಸಾಯ್, ಮತ್ತೊಮ್ಮೆ ಸೌಮ್ಯಜಿತ್ ಅವರನ್ನು ಹಿಂದಿಕ್ಕಿದ್ದಾರೆ . ಅಂತಿಮವಾಗಿ ದೇಸಾಯ್ ಅವರನ್ನು ಪರಾಭವಗೊಳಿಸುವ ಮೂಲಕ ಸೌಮ್ಯಜೀತ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಡಬಲ್ಸ್‍ನಲ್ಲಿ ನಿರಾಸೆ: ಸಿಂಗಲ್ಸ್ ವಿಭಾಗದಲ್ಲಿ  ಚಾಂಪಿಯನ್ ಪಟ್ಟ ಅಲಂಕರಿಸಿದ ಸೌಮ್ಯಜಿತ್‍ಗೆ ಡಬಲ್ಸ್ ವಿಭಾಗದಲ್ಲಿ ನಿರಾಸೆ ಕಾಡಿತು. ಸೌಮ್ಯಜಿತ್ ಹಾಗೂ ಹರ್ಮೀತ್ ದೇಸಾಯ್  ಜೋಡಿ ಉತ್ತಮ ಹೋರಾಟ ನೀಡಿ, ಎದುರಾಳಿಗಳಾದ  ಅಭಿಶೇಕ್ ಯಾದವ್ ಹಾಗೂ ಸುಧಾಂಶು ಗ್ರೋವರ್ ಜೋಡಿ ವಿರುದ್ದ 2-3 ಸೆಟ್‍ಗಳ ಅಂತರದಲ್ಲಿ ಸೋಲೊಪ್ಪಿಕೊಳ್ಳಬೇಕಾಯಿತು.

ಕೃತ್ವಿಕಾ-ಶ್ವೇತಾಗೆ ಡಬಲ್ಸ್ ಪ್ರಶಸ್ತಿ
ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿಯ ಕೃತ್ವಿಕಾ ಸಿನ್ಹಾ ರಾಯ್ ಹಾಗೂ ಶ್ವೇತಾ ಪಾರ್ತಿ ಜೋಡಿಯ ಪಾಲಿಗಿದೆ. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ, ಈ ಜೋಡಿ ಆನಂದಿತಾ ಚಕ್ರವರ್ತಿ ಹಾಗೂ ಪಲ್ಲವಿ ಕುಂದು ಜೋಡಿಯ ವಿರುದ್ಧ 2-1 ಸೆಟ್ಗಳ ಅಂತರದಲ್ಲಿ ಗೆಲವು ಸಾಧಿಸಿ ಪ್ರಶಸ್ತಿಗೆ ಭಾಜನವಾಯ್ತು.

ಮಣಿಕಾ ಡಬಲ್ ಧಮಾಕ
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಮಣಿಕಾ ಬಾತ್ರಾ, ಮಿಶ್ರ ಡಬಲ್ಸ್‍ನಲ್ಲೂ ಪ್ರಶಸ್ತಿ ಬಾಚಿಕೊಂಡರು. ಭಾನುವಾರ ನಡೆದ ಮಿಶ್ರ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅವರು ಸಾನಿಲ್ ಶೆಟ್ಟಿ ಅವರೊಡಗೂಡಿ, ಜುಬಿನ್ ಕುಮಾರ್ ಹಾಗೂ ನೇಹಾ ಅಗರ್ವಾಲ್ ಜೋಡಿಯನ್ನು 30 ಅಂತರದಲ್ಲಿ ಪರಾಭವಗೊಳಿಸಿದರು. ಇದರಿಂದಾಗಿ, ಮಣಿಕಾ ಎರಡು ಪ್ರಶಸ್ತಿ ಗೆದ್ದ ಸಾಧನೆಯನ್ನು ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com