ಫೈನಲ್‍ಗೆ ಆಸ್ಟ್ರೇಲಿಯಾ

ಮತ್ತೊಮ್ಮೆ ಆಲ್‍ರೌಂಡ್ ಆಟವಾಡಿದ ಪ್ರವಾಸಿ ಆಸ್ಟ್ರೇಲಿಯಾ `ಎ' ತಂಡ, ಸೋಮವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ `ಎ' ತಂಡವನ್ನು 3 ವಿಕೆಟ್‍ಗಳಿಂದ ಮಣಿಸುವುದರೊಂದಿಗೆ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ತಲುಪುವಲ್ಲಿ ಯಶಕಂಡಿದೆ...
ಆಕರ್ಷಕ ಅರ್ಧಶತಕ ಗಳಿಸಿದ ಮಾಯಾಂಕ್ ಅಗರ್ವಾಲ್ ಬ್ಯಾಟಿಂಗ್ ಶೈಲಿ.
ಆಕರ್ಷಕ ಅರ್ಧಶತಕ ಗಳಿಸಿದ ಮಾಯಾಂಕ್ ಅಗರ್ವಾಲ್ ಬ್ಯಾಟಿಂಗ್ ಶೈಲಿ.
Updated on

ಚೆನ್ನೈ: ಮತ್ತೊಮ್ಮೆ ಆಲ್‍ರೌಂಡ್ ಆಟವಾಡಿದ ಪ್ರವಾಸಿ ಆಸ್ಟ್ರೇಲಿಯಾ `ಎ' ತಂಡ, ಸೋಮವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ `ಎ' ತಂಡವನ್ನು 3 ವಿಕೆಟ್‍ಗಳಿಂದ ಮಣಿಸುವುದರೊಂದಿಗೆ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ತಲುಪುವಲ್ಲಿ ಯಶಕಂಡಿದೆ.

ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ 4ನೇ ಪಂದ್ಯದಲ್ಲಿ ಗೆಲುವಿಗೆ ಉನ್ಮುಕ್ತ್ ಚಾಂದ್ ಸಾರಥ್ಯದ ಭಾರತ ಎ ತಂಡ ನೀಡಿದ್ದ 259 ರನ್ ಗಳಿಗೆ ಉತ್ತರವಾಗಿ ಉಸ್ಮಾನ್ ಖವಾಜಾ ನೇತೃತ್ವದ ಆಸೀಸ್, 48.3 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 262 ರನ್ ಗಳಿಸುವುದರೊಂದಿಗೆ ವಿಯಯಿಯಾಯಿತು. ಆರಂಭಿಕ ಟ್ರಾವಿಸ್ ಹೆಡ್ (45), ಕ್ರಿಸ್ ಲಿನ್ (63), ಕಲಮ್ ಫಗ್ರ್ಯೂಸನ್ (ಅಜೇಯ 45) ಹಾಗೂ ಆ್ಯಡಂ ಝಂಪಾ (54) ಹಾಗೂ 39 ರನ್‍ಗಳಿಗೆ 5 ವಿಕೆಟ್ ಪಡೆದ ಆ್ಯಷ್ಟನ್ ಆಗರ್ ಭಾರತ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮಿಂಚಿದ ಆಗರ್: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ `ಎ' ತಂಡ ಎಡಗೈ ಸ್ಪಿನ್ನರ್ ಆ್ಯಷ್ಟನ್ ಆಗರ್ ನಡೆಸಿದ ಮಾರಕ ದಾಳಿಗೆ ಸಿಲುಕಿ 50 ಓವರ್ ಗಳಲ್ಲಿ 9 ವಿಕೆಟ್ ಗೆ 258 ರನ್ ಗಳಿಸಿತು. ಆರಂಭಿಕ ಮಯಾಂಕ್ ಅಗರ್ವಾಲ್ (61) ಯಶಸ್ವಿ ಅರ್ಥಶತಕ ಪೂರೈಸಿದರೆ, ನಾಯಕ ಉನ್ಮುಕ್ತ್ ಚಾಂದ್ ಕೇವಲ 5 ರನ್ ಗಳಿಗೆ ನಿರುತ್ತರರಾದರು.

ಸಂಕ್ಷಿಪ್ತ ಸ್ಕೋರ್:
ಭಾರತ `ಎ': 50 ಓವರ್ ಗಳಲ್ಲಿ 9 ವಿಕೆಟ್‍ಗೆ 258 (ಮಯಾಂಕ್ 61, ಮನೀಶ್ ಪಾಂಡೆ 50, ಕರುಣ್ ನಾಯರ್ 32; ಆ್ಯಷ್ಟನ್ ಆಗರ್ 30ಕ್ಕೆ 5) ಆಸ್ಟ್ರೇಲಿಯಾ ಎ: 48.3 ಓವರ್ ಗಳಲ್ಲಿ 7 ವಿಕೆಟ್ ಗೆ 262 (ಕ್ರಿಸ್ ಲಿನ್ 63, ಆ್ಯಡಂ ಝಂಪಾ 54: ಫರ್ಗ್ಯೂಸನ್ ಅಜೇಯ 45: ಕರಣ್ ಶರ್ಮಾ 45ಕ್ಕೆ 3 ) ಪಂದ್ಯಶ್ರೇಷ್ಠ: ಆ್ಯಷ್ಟನ್ ಆಗರ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com