ಬಿಎಫ್‌ಸಿಗೆ ಮತ್ತೊಂದು ಗೆಲುವು

ಪಂದ್ಯದ ದ್ವಿತೀಯಾರ್ಧದಲ್ಲಿ ಒಂದರ ಹಿಂದೊಂದರಂತೆ ಐದು ಗೋಲುಗಳನ್ನು ದಾಖಲಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್‌ಸಿ)...
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು: ಪಂದ್ಯದ ದ್ವಿತೀಯಾರ್ಧದಲ್ಲಿ ಒಂದರ ಹಿಂದೊಂದರಂತೆ ಐದು ಗೋಲುಗಳನ್ನು ದಾಖಲಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್‌ಸಿ), 19 ವರ್ಷದೊಳಗಿನವರ ಭಾರತ ತಂಡದ ವಿರುದ್ಧ ಬುಧವಾರ ನಡೆದ 2ನೇ ಸೌಹಾರ್ದ ಪಂದ್ಯದಲ್ಲಿ 5-2 ಗೋಲುಗಳಿಂದ ಜಯ ಸಾಧಿಸಿತು.
ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 37ನೇ ನಿಮಿಷದಲ್ಲಿ ಭಾರತ ತಂಡದ ವಿನಿತ್ ರೈ ಬಿಎಫ್‌ಸಿಯ ಗೋಲಿನ ಅಭಿಯಾನಕ್ಕೆ ಚಾಲನೆ ನೀಡಿದರಾದರೂ, ಆನಂತರದ ಜಿದ್ದಾಜಿದ್ದಿನ ಕಾದಾಟದಿಂದಾಗಿ ಪಂದ್ಯದ ಮೊದಲಾರ್ಧ ಇದೇ ಅಂತರದಲ್ಲಿ ಮುಕ್ತಾಯವಾಯಿತು. ಲೆನ್ ಡಾಂಜೆಲ್ ಅವರು ಪಂದ್ಯದ 55ನೇ ನಿಮಿಷದಲ್ಲಿ ಬಿಎಫ್‌ಸಿಗೆ ಮೊದಲ ಗೋಲು ಗಳಿಸಿಕೊಟ್ಟರೆ, 56ನೇ ನಿಮಿಷದಲ್ಲಿ ಕಿಮ್ ಸಾಂಗ್ ಯಂಗ್ ಹಾಗೂ 66ನೇ ನಿಮಿಷದಲ್ಲಿ ಸುನಿಲ್ ಛೆಟ್ರಿ ಗಳಿಸಿದ ಗೋಲಿನಿಂದ ಬಿಎಫ್‌ಸಿ 3-1 ಅಂತರದ ಮುನ್ನಡೆ ಪಡೆಯಿತು. 
ಆದರೆ, ಈ ಹಂತದಲ್ಲಿ ಭಾರತ ತಂಡದ ಲಾಲ್ ಹ್ಲಿಂಪುಯಿಯಾ  ದಾಖಲಿಸಿದ ಗೋಲು ಅಂತರವನ್ನು 32ಕ್ಕೆ ತಗ್ಗಿಸಿತು. ಆದರೆ, ಆನಂತರ ಮಿಂಚಿನ ಆಟವಾಡಿದ ಜಾರ್ಜ್ (80ನೇ ನಿಮಿಷ) ಹಾಗೂ ವಿನೀತ್ (90ನೇ ನಿಮಿಷ) ಮತ್ತೆರಡು ಗೋಲುಗಳ ಉಡುಗೊರೆ ನೀಡಿದ್ದು ಬಿಎಫ್‌ಸಿಯ ಭರ್ಜರಿ ಜಯಕ್ಕೆ ಕಾರಣವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com