

ನವದೆಹಲಿ: ದೇಶದ ಪ್ರತಿಷ್ಠಿತ ಕ್ರೀಡಾ ಪುರಸ್ಕಾರವಾಗಿರುವ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿರುವ ಭರವಸೆಯ ಬಾಕ್ಸರ್ ಮಂದೀಪ್ ಜಂಗ್ರಾ, ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಇಷ್ಟು ಬೇಗ ಈ ಪುರಸ್ಕಾರ ದೊರೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಏಷ್ಯಾ ಚಾಂಪಿಯನ್‍ಶಿಪ್‍ಗೆ ಸಿದ್ಧತೆ ನಡೆಸುತ್ತಿರುವ ಮಂದೀಪ್, ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ತನಗಿಂತ ನನ್ನ ಮಾರ್ಗದರ್ಶಕರಿಗೆ ಹೆಚ್ಚು ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
``ಅಖಿಲ್ ಹಾಗೂ ಅವರ ಪತ್ನಿ ಪೂನಮ್ ನನ್ನ ಯಶಸ್ಸಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ನನ್ನಲ್ಲಿ ತುಂಬಾ ನಂಬಿಕೆ ಇಟ್ಟಿದ್ದಾರೆ. ಅದನ್ನು ಉಳಿಸಿಕೊಂಡಿರುವುದು ಸಂತಸವಾಗಿದೆ'' ಎಂದು ಮಂದೀಪ್ ಹೇಳಿದ್ದಾರೆ.