

ಸೆಂಚುರಿಯನ್: ಆರಂಭಿಕ ಮಾರ್ಟೀನ್ ಗುಪ್ಟೀಲ್ (60) ಅವರ ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಸೋಲನುಭವಿಸಿದೆ.
ಭಾನುವಾರ ಸೂಪರ್ ಸ್ಪೋರ್ಟ್ಸ್ ಪಾರ್ಕ್‍ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 32 ರನ್‍ಗಳ ಅಂತರದಲ್ಲಿ ಹರಿಣಗಳ ಪಡೆಯನ್ನು ಮಣಿಸಿತು. ಈ ಮೂಲಕ 2 ಟಿ20 ಪಂದ್ಯಗಳ ಸರಣಿಯನ್ನು 1-1 ಅಂತರದಲ್ಲಿ ಮಣಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 177 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 145 ರನ್ ದಾಖಲಿಸಲಷ್ಟೇ ಶಕ್ತವಾಯಿತು.
ಮಿಂಚಿದ ಮಾರ್ಟೀನ್: ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕರಾದ ಮಾರ್ಟೀನ್ ಗುಪ್ಟಿಲ್ (60) ಮತ್ತು ಕೇನ್ ವಿಲಿಯಮ್ಸ್ (25) ಅರ್ಧಶತಕದ (52) ಆರಂಭ ನೀಡಿದರು. ನಂತರ ಬಂದ ಲ್ಯಾಥಮ್ (3), ಎಲಿಯಟ್ (20), ನಿಶಾಮ್ (28), ರೊಂಚಿ (6), ಮುನ್ರೊ (18) ಹಾಗೂ ಮಿಲ್ನೆ (ಅಜೇಯ 10) ರನ್ ದಾಖಲಿಸಿದರು. ದಕ್ಷಿಣ ಆಫ್ರಿಕಾ ಪರ ಬೌಲಿಂಗ್‍ನಲ್ಲಿ ರಬಾಬಾ 3, ಫಂಗಿಸೋ, ವೈಸ್, ಲೈ ಹಾಗೂ ಬೆಹರ್ಡಿನ್ ತಲಾ 1 ವಿಕೆಟ್ ಪಡೆದರು.
ಕುಸಿದ ಹರಿಣಗಳು: ಕಠಿಣ ಗುರಿ ಬೆನ್ನಟ್ಟಿದ ಹರಿಣಗಳ ಪಡೆ ಆರಂಭದಿಂದಲೇ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಕುಸಿತ ಕಂಡಿತು. ಆರಂಭಿಕರಾದ ಹಶೀಮ್ ಆಮಾ್ಲ (14) ಮತ್ತು ವಾನ್ ವಿಕ್ (3) ಹೆಚ್ಚು ಕಾಲ ಕ್ರೀಸ್‍ನಲ್ಲಿ ನಿಲ್ಲಲಿಲ್ಲ. ನಂತರ ಬಂದ ನಾಯಕ ಡಿವಿಲಿಯರ್ಸ್ (15), ರೊಸ್ಸೊ (26), ಬೆಹರ್ಡಿನ್ (36), ಡೇವಿಡ್ ಮಿಲ್ಲರ್ (29) ಉತ್ತಮ ಆರಂಭ ಪಡೆದ ನಂತರ ಮಹತ್ವದ ಹಂತದಲ್ಲಿ ವಿಕೆಟ್ ಒಪ್ಪಿಸಿದರು. ನ್ಯೂಜಿಲೆಂಡ್ ತಂಡದ ಪರ ನಾಥನ್ ಮೆಕಲಂ, ಮೆಕ್ಲೆನಾಘನ್ ಹಾಗೂ ಇಶ್ ಸೋಧಿ ತಲಾ 2 ವಿಕೆಟ್ ಪಡೆದರೆ, ಮಿಲ್ನೆ, ನಿಶಾಮ್ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್ 20 ಓವರ್‍ಗಳಲ್ಲಿ 7ವಿಕೆಟ್‍ಗೆ 177 (ಮಾರ್ಟೀನ್ ಗುಪ್ಟಿಲ್ 60, ನಿಶಾಮ್ 28, ವಿಲಿಯಮ್ಸನ್ 25, ರಬಾಬಾ 30ಕ್ಕೆ3, ಬೆಹರ್ಡಿನ್ 4ಕ್ಕೆ1)
ದಕ್ಷಿಣ ಆಫ್ರಿಕಾ 20 ಓವರ್‍ಗಳಲ್ಲಿ 8 ವಿಕೆಟ್‍ಗೆ 145(ಬೆಹರ್ಡಿನ್ 36, ಮಿಲ್ಲರ್ 29, ರೊಸ್ಸೊ 26, ಸೋಧಿ 27ಕ್ಕೆ2, ಮೆಕ್ಲೆನಾಘನ್ 28ಕ್ಕೆ2) ಪಂದ್ಯ ಶ್ರೇಷ್ಠ: ಮಾರ್ಟೀನ್ ಗುಪ್ಟಿಲ್, ಸರಣಿ ಶ್ರೇಷ್ಠ: ಮಾರ್ಟೀನ್ ಗುಪ್ಟಿಲ್