ಅದಿತಿ ಚಾರಿತ್ರಿಕ ಸಾಧನೆ

ಬೆಂಗಳೂರಿನ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಮಹಿಳೆಯರ ಬ್ರಿಟೀಷ್ ಅಮೇಚುರ್ ಸ್ಟ್ರೋಕ್ ಲೇ ಗಾಲ್ಫ್ ಚಾಂಪಿಯನ್‍ಶಿಪ್‍ನಲ್ಲಿ...
ಅದಿತಿ ಅಶೋಕ್
ಅದಿತಿ ಅಶೋಕ್

ಲೀಡ್ಸ್: ಬೆಂಗಳೂರಿನ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಮಹಿಳೆಯರ ಬ್ರಿಟೀಷ್ ಅಮೇಚುರ್ ಸ್ಟ್ರೋಕ್ ಲೇ ಗಾಲ್ಫ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಶನಿವಾರ ಮೂರ್‍ಟೌನ್ ಗಾಲ್ಫ್ ಕ್ಲಬ್‍ನಲ್ಲಿ ಮುಕ್ತಾ ಯವಾದ ಚಾಂಪಿಯನ್‍ಶಿಪ್‍ನಲ್ಲಿ 17 ವರ್ಷದ ಅದಿತಿ ಒಟ್ಟು 285  ಅಂಕಗಳನ್ನು ಕಲೆ ಹಾಕಿದರು. ನಾಲ್ಕು ದಿನಗಳ ಸ್ಪರ್ಧೆಯಲ್ಲಿ ಅದಿತಿ ಕ್ರಮವಾಗಿ 71, 73, 70, 71 ಅಂಕಗಳನ್ನು ಕಲೆಹಾ ಕಿದರು.

ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿಯಾಗಿದ್ದಾರೆ. ಜುಲೈನಲ್ಲಿ ಸೆಂಟ್ ರೂಲ್ ಟ್ರೋಫಿ ಮತ್ತು ಸೆಂಟ್ ಆ್ಯಡ್ರೂಸ್ ಟ್ರೊಫಿಯನ್ನು ಗೆದ್ದುಕೊಂಡಿದ್ದ ಅದಿತಿ, ಯುರೋಪಿಯನ್ ಅಮೆಚುರ್ ಚಾಂಪಿಯನ್ ಶಿಪ್‍ನಲ್ಲಿ 2ನೇ ಸ್ಥಾನ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com