

ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಡೆಸಲು ವೇದಿಕೆ ಸಜ್ಜಾಗಿದೆ. ಅಕ್ಟೋಬರ್ 11ರಿಂದ 15ರವರೆಗೆ ನಡೆಯಲಿರುವ ಕಾಮನ್ವೆಲ್ತ್ ಯೂತ್, ಜೂನಿಯರ್ ಹಾಗೂ ಸೀನಿಯರ್ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ಗೆ ಪುಣೆ ಆತಿಥ್ಯ ವಹಿಸಲಿದೆ.
ಈ ಕ್ರೀಡಾಕೂಟದಲ್ಲಿ ಭಾರತದ 40 ವೇಟ್‍ಲಿಫ್ಟರ್‍ಗಳು ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ, ಥಾಯ್ ಲ್ಯಾಂಡ್‍ನ ಫಾಕೆಟ್ ನಲ್ಲಿ ನಡೆಯಲಿರುವ 25ನೇ ಮಹಿಳೆಯರ ಹಾಗೂ 46ನೇ ಪುರುಷರ (ಹಿರಿಯರ) ಏಷ್ಯನ್ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಐವರು ಪಾಲ್ಗೊಳ್ಳಲಿದ್ದಾರೆ. ಸೆ. 3ರಿಂದ 12ರವರೆಗೆ ಈ ಕ್ರೀಡಾಕೂಟ ನಡೆಯಲಿದೆ. ಇದೇ ಅವಧಿಯಲ್ಲಿ, ಸಮೋವಾದ ಅಪಿಯಾದಲ್ಲಿ ನಡೆಯಲಿರುವ 5ನೇ ಕಾಮನ್ವೆಲ್ತ್ ಯೂತ್ ಗೇಮ್್ಸನಲ್ಲಿ ಭಾರತದ ಇಬ್ಬರು ಕ್ರೀಡಾಳುಗಳು ಭಾಗವಹಿಸಲಿದ್ದಾರೆ.
Subscribe and Receive exclusive content and updates on your favorite topics
Advertisement