ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಗೆ ಸಂಬಂಧಿಸಿದಂತೆ, ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡುವೆ ಏರ್ಪಟ್ಟಿದ್ದ ಒಪ್ಪಂದವೇ ಅನೈತಿಕ ಎಂಬ ಅನುಮಾನಗಳು ವ್ಯಕ್ತವಾಗಿವೆ ಎಂದು ಐಬಿಎನ್ ಹೇಳಿದೆ. ಐಸಿಸಿ ಯಲ್ಲಿ ಬಿಸಿಸಿಐನ ಪ್ರಾಬಲ್ಯ ಸ್ಥಾಪಿಸಲು ತನಗೆ ಸಹಕಾರ ನೀಡಬೇಕೆಂಬ ಪ್ರಸ್ತಾವನೆಯಡಿ, ಬಿಸಿಸಿಐನ ಈ ಹಿಂದಿನ ಆಡಳಿತ ಪಿಸಿಬಿ ಜತೆ `ಅನುಕೂಲ ಸಿಂಧು' ಒಪ್ಪಂದ ಮಾಕೊಂಡಿದ್ದು ಅದರಂತೆ, 2013ರಿಂದ 2023ರವರೆಗಿನ 8 ವರ್ಷಗಳ ಅವ„ಯಲ್ಲಿ 6 ಸರಣಿ (ಪಾಕಿಸ್ತಾನದಲ್ಲಿ 4, ಭಾರತದಲ್ಲಿ 2) ಸೇರಿದಂತೆ 50 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲು ಬಿಸಿಸಿಐ ಒಪ್ಪಿಗೆ ನೀಡಿತ್ತು.