ನವದೆಹಲಿ: ಟೆಸ್ಟ್ ಕ್ರಿಕೆಟ್‍ನ ಕಲಾತ್ಮಕ ಕ್ರಿಕೆಟಿಗನೆಂದೇ ಕರೆಯಲ್ಪಡುವ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ತಮ್ಮ ವೃತ್ತಿಬದುಕಿನಲ್ಲಿ ಆಸ್ಟ್ರೇಲಿಯಾದ ವೇಗಿ ಗ್ಲೆನ್ ಮೆಗ್ರಾತ್ ಹಾಗೂ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅತಿಯಾಗಿ ಕಾಡಿದ್ದರು ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ ಬುಕ್‍ನಲ್ಲಿ ಅಭಿಮಾನಿಗಳ ಜತೆಗಿನ ಸಂವಾದದಲ್ಲಿ ``ನನ್ನನ್ನು ಕಾಡಿದ ಬೌಲರ್‍ಗಳ ಬಗ್ಗೆ ಹೇಳುವುದಾದರೆ ಅದು ಮೆಗ್ರಾತ್ ಮತ್ತು ಮುರಳೀಧರನ್. ಅದರಲ್ಲೂ ಮೆಗ್ರಾತ್ ಆ ಫ್ ಸ್ಟಂಪ್‍ನಲ್ಲಿನ ಎಸೆತವನ್ನು ಹೀಗೆಯೇ ಇರುತ್ತದೆ ಎಂದು ಖಚಿತವಾಗಿ ನಿರ್ಧರಿಸಲು ಆಗುತ್ತಿರಲಿಲ್ಲ. ಇನ್ನು ಸ್ಪಿನ್ನಿಂಗ್‍ನಲ್ಲಂತೂ ಮುರಳೀಧರನ್ ಅವರಿಗೆ ಉತ್ತರಿಸುವುದು ಕಷ್ಟಕವಾಗಿತ್ತು'' ಎಂದಿದ್ದಾರೆ.