ರಾಜಸ್ಥಾನ ಮಣಿಸಿದ ರಾಜ್ಯ ಬಾಲಕಿಯರು

ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ನೀಡಿದ ಕರ್ನಾಟಕ ಬಾಲಕಿಯರ ತಂಡ, 42ನೇ ಕಿರಿಯರ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯ 2ನೇ ದಿನ, ರಾಜಸ್ಥಾನ ತಂಡವನ್ನು 3-1 ಸೆಟ್‍ಗಳಿಂದ ಸೋಲಿಸಿತು...
ರಾಷ್ಟ್ರೀಯ ಕಿರಿಯರ ವಾಲಿಬಾಲ್ (ಸಂಗ್ರಹ ಚಿತ್ರ)
ರಾಷ್ಟ್ರೀಯ ಕಿರಿಯರ ವಾಲಿಬಾಲ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ನೀಡಿದ ಕರ್ನಾಟಕ ಬಾಲಕಿಯರ ತಂಡ, 42ನೇ ಕಿರಿಯರ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯ 2ನೇ ದಿನ, ರಾಜಸ್ಥಾನ ತಂಡವನ್ನು 3-1 ಸೆಟ್‍ಗಳಿಂದ ಸೋಲಿಸಿತು.

ಮೊದಲ ಸೆಟ್‍ನಲ್ಲಿ 25-14 ಅಂತರದಲ್ಲಿ ಜಯ ಸಾಧಿಸಿದ ಕರ್ನಾಟಕ, ಆನಂತರದ ಸೆಟ್‍ನಲ್ಲೂ ಪ್ರಬಲ ಪೈಪೋಟಿ ನೀಡಿ ವಿಜಯಿಯಾಯಿತು. ಆದರೆ, ಮೂರನೇ ಸೆಟ್‍ನಲ್ಲಿ ಸಡ್ಡು ಹೊಡೆದ  ರಾಜಸ್ಥಾನ ಜಯ ಸಾಧಿಸಿ ಸೆಟ್‍ಗಳ ಅಂತರವನ್ನು 2-1ಕ್ಕೆ ಕುಗ್ಗಿಸಿಕೊಂಡಿತು. ಆದರೆ, ನಂತರದ ಸೆಟ್‍ನಲ್ಲಿ ಮತ್ತೆ ವಿಜೃಂಭಿಸಿದ ಕರ್ನಾಟಕ ತಂಡ, 25-8 ಅಂಕಗಳ ಅಂತರದಲ್ಲಿ  ರಾಜಸ್ಥಾನವನ್ನು ಮಣಿಸುವುದರೊಂದಿಗೆ ವಿಜಯದ ನಗೆಬೀರಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com