ಜಯದ ಹಳಿಗೆ ಮರಳಿದ ಕರ್ನಾಟಕ

ಒಂದು ಬದಿಯಲ್ಲಿ ವಿಕೆಟ್‍ಗಳು ಉರುಳುತ್ತಾ ಸಾಗಿದರೂ, ಮತ್ತೊಂದು ಬದಿಯಲ್ಲಿ ಸ್ಥಿತಪ್ರಜ್ಞತೆಯಿಂದ...
ಕರ್ನಾಟಕದ ಪರ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಆಲ್ ರೌಂಡರ್ ಜೆ.ಸುಜಿತ್
ಕರ್ನಾಟಕದ ಪರ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಆಲ್ ರೌಂಡರ್ ಜೆ.ಸುಜಿತ್
Updated on: 

ಬೆಂಗಳೂರು: ಒಂದು ಬದಿಯಲ್ಲಿ ವಿಕೆಟ್‍ಗಳು ಉರುಳುತ್ತಾ ಸಾಗಿದರೂ, ಮತ್ತೊಂದು ಬದಿಯಲ್ಲಿ ಸ್ಥಿತಪ್ರಜ್ಞತೆಯಿಂದ ಬ್ಯಾಟ್ ಮಾಡುತ್ತಾ ಮುನ್ನಡೆದ ರಾಹುಲ್ ದಾಗರ್ (96: 116 ಎಸೆತ, 9 ಬೌಂಡರಿ) ಕಡೆಗೂ ತಂಡಕ್ಕೆ ಗೆಲುವು ತಂದುಕೊಡಲಾಗದ ಅಸಹಾಯಕತೆಯಿಂದ  ಮುದುಡಿಹೋದರು.

ಇನ್ನೊಂದೆಡೆ ಶುಕ್ರವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ  ರೋಫಿ  ಪಂದ್ಯಾವಳಿಯ `ಬಿ' ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಪುಟಿದೆದ್ದು ನಿಂತ ಕರ್ನಾಟಕ  8 ರನ್ ಗಳ ಗೆಲುವಿನೊಂದಿಗೆ ಜಯದ ಹಳಿಗೆ ಮರಳಿತು.

ನಾಯಕ ವಿನಯ್ ಕುಮಾರ್ ಮತ್ತೊಮ್ಮೆ ತೋರಿದ ಆಲ್‍ರೌಂಡ್ ಆಟಕ್ಕೆ ಪೂರಕವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಜೆ. ಸುಚಿತ್ ಆಟ ಕೂಡ ದಾಗರ್ ಅವರ  ಕಾಂಗಿ  ಹೋರಾಟವನ್ನು ಮಂಕಾಗಿಸಿತು. ಪರಿಣಾಮ ಮೊದಲ ಪಂದ್ಯದಲ್ಲಿ ರೇಲ್ವೇಸ್ ವಿರುದ್ಧ ರೋಚಕ ಸೋಲನುಭವಿಸಿದ್ದ ಕರ್ನಾಟಕ, ಎರಡನೇ ಪಂದ್ಯದಲ್ಲಿ ಜಯದ ನಗೆಬೀರಿ  ಪೂರ್ಣ 4 ಅಂಕಗಳನ್ನು ತನ್ನದಾಗಿಸಿಕೊಂಡಿತು.

243 ರನ್ ಜಯದ ಗುರಿ ಪಡೆದ ಹರ್ಯಾಣ, ಕರ್ನಾಟಕ ಬೌಲರ್ ಗಳ ಸಂಘಟಿತ ದಾಳಿಗೆ  ಸಿಲುಕಿ 46.3 ಓವರ್‍ಗಳಲ್ಲಿ 204 ರನ್‍ಗಳಿಗೆ ಆಲೌಟ್  ಆಯಿತು. ದಾಗರ್ ಜತೆಗೆ ರೋಹಿತ್  ರ್ಮಾ(46), ಅಮಿತ್ ಮಿಶ್ರಾ (12), ಯಜುವೇಂದ್ರ ಚಾಹಲ್ (16) ಹಾಗೂ ನಾಯಕ ಮೋಹಿತ್  ಶರ್ಮಾ(10)  ಬಿಟ್ಟರೆ ಮಿಕ್ಕವರು ಎರಡಂಕಿ ದಾಟದಂತೆ ನೋಡಿಕೊಂಡ ಕರ್ನಾಟಕ  ಬೌಲರ್ ಗಳು ಸಕಾಲದಲ್ಲಿ ಸಾರ್ಥಕ ಬೌಲಿಂಗ್ ನಡೆಸಿ ಕರ್ನಾಟಕ ಮತ್ತೊಂದು ಸೋಲು ಅನುಭವಿಸದಂತೆ ನೋಡಿಕೊಂಡರು. ಅಭಿಮನ್ಯು ಮಿಥುನ್, ವಿನಯ್ ಕುಮಾರ್ ಮತ್ತು ಜೆ. ಸುಚಿತ್ ತಲಾ 2 ವಿಕೆಟ್ ಗಳಿಸಿದರೆ, ಸ್ಟುವರ್ಟ್ ಬಿನ್ನಿ ಹಾಗೂ ಎಸ್. ಅರವಿಂದ್ ಸಹ  ಒಂದೊಂದು ವಿಕೆಟ್ ಗಳಿಸಿದರು.

ಮತ್ತೆ ಎಡವಟ್ಟು: ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ  ಕರ್ನಾಟಕದ ರನ್ ಗಳಿಕೆಯ ಹಾದಿ ಅಷ್ಟೇನೂ ಅಪ್ಯಾಯವಾಗಿರಲಿಲ್ಲ. ಇಷ್ಟಾದರೂ, ವಿನಯ್ ಮತ್ತು ಸುಚಿತ್ ಸಕಾಲದಲ್ಲಿ ನಡೆಸಿದ ಭವ್ಯ ಬ್ಯಾಟಿಂಗ್‍ನಿಂದಾಗಿ ಕರ್ನಾಟಕ 50 ಓವರ್‍ಗಳಲ್ಲಿ 9  ವಿಕೆಟ್ ನಷ್ಟಕ್ಕೆ 242 ರನ್ ಕಲೆಹಾಕಿತು.

ಕೇವಲ 1 ರನ್ ಗಳಿಸುವಷ್ಟರಲ್ಲೇ ಮಯಾಂಕ್ ಅಗರ್ವಾಲ್ (0) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು  ಆಘಾತ ತರಿಸಿತು. ಇನ್ನು ಕೆ.ಎಲ್. ರಾಹುಲ್ (40) ಕ್ರೀಸ್‍ಗೆ  ಕಚ್ಚಿಕೊಳ್ಳುವ ಯತ್ನದಲ್ಲೇ  ಯಜುವೇಂದ್ರ ಚಾಹಲ್ ಗೆ ಬೌಲ್ಡ್ ಆಗಿ ಹೊರಬಿದ್ದರು. ಇತ್ತ ಸಾದಿಕ್ ಕಿರ್ಮಾನಿ (19) ಆಶೀಶ್  ಡಾಗೆ ಬಲಿಯಾದರೆ, ತುಸು ಪ್ರತಿರೋಧ ತೋರಿದ ಮನೀಶ್ ಪಾಂಡೆ (36) ಮತ್ತು ಸ್ಟುವರ್ಟ್    ಬಿನ್ನಿ (30) ಕೂಡ ಹೆಚ್ಚು ಹೊತ್ತು  ಕ್ರೀಸ್‍ನಲ್ಲಿ ನಿಲ್ಲಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಬೇಕಿದ್ದ ಕರುಣ್ ನಾಯರ್ (0) ಮತ್ತು ಅನಿರುದ್ಧ್ ಜೋಶಿ (0) ವೈಫಲ್ಯ ಅನುಭವಿಸಿ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. 

ವಿನಯ್-ಸುಚಿತ್ ಮಿಂಚಿನ ಆಟ: ಈ ತೀವ್ರತರ ಹಿನ್ನಡೆಯಲ್ಲೇ ಜತೆಗೂಡಿದ ಸುಚಿತ್ ಮತ್ತು  ವಿನಯ್ 8ನೇ ವಿಕೆಟ್‍ಗೆ ಅರ್ಧಶತಕದ ಜತೆಯಾಟವಾಡಿ ಅಲ್ಪಮೊತ್ತಕ್ಕೆ ಕುಸಿಯುತ್ತಿದ್ದ  ತಂಡವನ್ನು ಮೇಲೆತ್ತಿದರು.

ಅದಾಗ್ಯೂ ಜೆ. ಸುಚಿತ್ (46: 63 ಎಸೆತ, 4 ಬೌಂಡರಿ, 1 ಸಿಕ್ಸರ್) ಕೇವಲ 4 ರನ್ ಅಂತರದಲ್ಲಿ ಅರ್ಧಶತಕದಿಂದ ವಂಚಿತವಾದರೆ, ನಿನ್ನೆಯ ಪಂದ್ಯದಲ್ಲಿ ಅಜೇಯ ಆಟವಾಡಿದ್ದ ವಿನಯ್ ಕುಮಾರ್ ಇಂದು 30 ಎಸೆತಗಳಲ್ಲಿ 41 ರನ್ ಮಾಡಿ  ಹರ್ಷಲ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು.  ಬಳಿಕ ಅಭಿಮನ್ಯು ಮಿಥುನ್ ಮತ್ತು ಎಸ್. ಅರವಿಂದ್ 12 ಮತ್ತು 1 ರನ್ ಗಳಿಸಿ  ಅಜೇಯರಾಗುಳಿದರು.  ಹರ್ಯಾಣ ಪರ ಹರ್ಷಲ್ ಪಟೇಲ್ 62ಕ್ಕೆ 4 ವಿಕೆಟ್ ಪಡೆದರೆ, ಆಶೀಶ್  ಡಾ, ಯಜುವೇಂದ್ರ ಚಾಹಲ್ ತಲಾ 2 ಹಾಗೂ ಅಮಿತ್ ಮಿಶ್ರಾ 1 ವಿಕೆಟ್ ಗಳಿಸಿದರು.

ಗುಜರಾತ್ ಮುಂದಿನ ಗುರಿ:
ಎರಡನೇ ಪಂದ್ಯದಲ್ಲಿ ಆಕರ್ಷಕ ಜಯ ಸಾಧಿಸಿರುವ ಕರ್ನಾಟಕ  ಇದೀಗ ಡಿಸೆಂಬರ್ 14ರಂದು ನಡೆಯಲಿರುವ ಮೂರನೇ ಸುತ್ತಿನ ಪಂದ್ಯದಲ್ಲಿ ಗುಜರಾತ್  ತಂಡವನ್ನು ಎದುರಿಸುತ್ತಿದೆ.  ಈ ಪಂದ್ಯ ಆಲೂರಿನ ಕೆಎಸ್‍ಸಿಎ ಕ್ರಿಕೆಟ್ ಮೈದಾನದಲ್ಲಿ  ನಡೆಯಲಿದ್ದು, ನಾಕೌಟ್ ಹಂತದ ಪ್ರವೇಶಕ್ಕೆ ಮಹತ್ವದ ಪಂದ್ಯವಾಗಿ ಪರಿಣಮಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com