ಐಸಿಸಿ ಪ್ರಶ್ನಿಸಿದ ಬಿಸಿಸಿಐ

ಭಾರತ ಮತ್ತು ದ. ಆಫ್ರಿಕಾ ನಡುವಣದ ಟೆಸ್ಟ್ ಪಂದ್ಯಕ್ಕೆ ನೀಡಲಾಗಿದ್ದ ನಾಗ್ಪುರ ಪಿಚ್ ಕುರಿತು ಪಂದ್ಯದ ರೆಫರಿ ಜೆಫ್ ಕ್ರೊವ್ ಅವರು ನೀಡಿದ ವರದಿಯಿಂದ ಪಿಚ್...
ಬಿಸಿಸಿಐ- ಐಸಿಸಿ
ಬಿಸಿಸಿಐ- ಐಸಿಸಿ
Updated on: 
ನವದೆಹಲಿ: ಭಾರತ ಮತ್ತು ದ.  ಆಫ್ರಿಕಾ ನಡುವಣದ ಟೆಸ್ಟ್ ಪಂದ್ಯಕ್ಕೆ  ನೀಡಲಾಗಿದ್ದ ನಾಗ್ಪುರ ಪಿಚ್ ಕುರಿತು ಪಂದ್ಯದ ರೆಫರಿ ಜೆಫ್ ಕ್ರೊವ್ ಅವರು  ನೀಡಿದ ವರದಿಯಿಂದ ಪಿಚ್
ಗುಣಮಟ್ಟ ಕಳಪೆ ಎಂದು  ಪ್ರಮಾಣೀಕರಿಸಿರುವ ಐಸಿಸಿಯನ್ನು ಬಿಸಿಸಿಐ ಪ್ರಶ್ನಿಸಿದೆ. ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ವೇಗಿಗಳು ಇಲ್ಲವೇ ಬ್ಯಾಟ್ಸ್ ಸಮನ್‍ಗಳಿಗೆ ನೆರವಾಗುವ ಪಿಚ್  ಮಾತ್ರ ನೀಡಬೇಕೆ ಎಂದು ಅದು ಖಾರವಾಗಿ ಪ್ರತಿಕ್ರಿಯಿಸಿದೆ. ಪಿಚ್  ಗುಣಮಟ್ಟದ ಬಗ್ಗೆ 14 ದಿನಗಳ  ಒಳಗಾಗಿ ಪ್ರತಿಕ್ರಿಯೆ ನೀಡುವಂತೆ  ಐಸಿಸಿಯು, ಬಿಸಿಸಿಐಗೆ ಸೂಚನೆ  ನೀಡಿತ್ತು. ನಾಗ್ಪುರ ಪಿಚ್ ಸಂಪೂರ್ಣ  ಕಳಪೆಯಾಗಿದೆ ಎಂಬುದು ಸರಿಯಲ್ಲ. ಜೆಫ್  ಕ್ರೊವ್ ಅವರ ವರದಿಯನ್ನು  ಬಿಸಿಸಿಐ ಖಂಡಿಸುತ್ತದೆ ಎಂದು  ಬಿಸಿಸಿಐನ ಹಿರಿಯ ಅಧಿ ಕಾರಿಯೊಬ್ಬರು  ಡಿಎನ್‍ಎಗೆ ನೀಡಿದ ಹೇಳಿಕೆಯಲ್ಲಿ  ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com