ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ದೀನ್‌ಗಿದು ಮೂರನೇ ಮದುವೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮೂರನೇ ಮದುವೆಯಾಗಲು ತೀರ್ಮಾನಿಸಿದ್ದಾರೆ...
ಮೊಹಮ್ಮದ್ ಅಜರುದ್ದೀನ್
ಮೊಹಮ್ಮದ್ ಅಜರುದ್ದೀನ್
Updated on: 
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮೂರನೇ ಮದುವೆಯಾಗಲು ತೀರ್ಮಾನಿಸಿದ್ದಾರೆ.
ಮಹಾರಾಷ್ಟ್ರ ಟೈಮ್ಸ್ ಪತ್ರಿಕಾ ವರದಿ ಪ್ರಕಾರ 52ರ ಹರೆಯ ಅಜರುದ್ದೀನ್ ಅಮೆರಿಕ ಮೂಲಕ ಶಾನನ್ ಮೇರಿ ಅವರನ್ನು ಮದುವೆಯಾಗಲಿದ್ದಾರೆ.
ತಮ್ಮ ಕಾರಿನ ಮಾಜಿ ಚಾಲಕ ಜಾನ್ ಮಹಮ್ಮದ್‌ನ ಮನೆಗೆ ಅಜರ್ ಮತ್ತು ಶಾನನ್ ಶನಿವಾರ ಜತೆಯಾಗಿ ಬಂದು ಜಾನ್  ಕುಟುಂಬವನ್ನು ಭೇಟಿ ಮಾಡಿದ್ದರು. ಸೆಪ್ಟೆಂಬರ್ ನಲ್ಲಿ ನಡೆದ ಅಪಘಾತವೊಂದರಲ್ಲಿ ಜಾನ್ ಸಾವಿಗೀಡಾಗಿದ್ದರು.
ಅಜರ್ ಈ ಹಿಂದೆ ನೌರೀನ್ ಮತ್ತು  ನಟಿ ಸಂಗೀತಾ ಬಿಜಲಾನಿಯನ್ನು ಮದುವೆಯಾಗಿದ್ದರು . 2013ರಿಂದ ಅಜರ್ ಮತ್ತು ಶಾನನ್ ಸ್ನೇಹದಲ್ಲಿದ್ದರು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com