

ನವದೆಹಲಿ: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.
ಗುರ್‍ಗಾಂವ್‍ನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ದಾಖಲಾಗಿದ್ದ ಧೋನಿ ಪತ್ನಿ ಸಾಕ್ಷಿ ದಾಖಲಾಗಿದ್ದರು. ಅಂದಹಾಗೆ, ಈ ಖುಷಿಯನ್ನು ಹಂಚಿಕೊಳ್ಳಲು ಧೋನಿ ಭಾರತದಲ್ಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ, ಅವರು ಕಳೆದ ಡಿಸೆಂಬರ್‍ನಲ್ಲೇ ಆಸ್ಟ್ರೇಲಿಯಾಕ್ಕೆ ತೆರಳಿದ್ದರು.
ವಿಶ್ವಕಪ್ ಪಂದ್ಯಾವಳಿಗೆ ಇನ್ನೂ ಕೆಲವೇ ದಿನಗಳು ಬಾಕಿಯಿರುವ ಹಿನ್ನೆಲೆಯಲ್ಲಿ, ಅವರಿನ್ನೂ ಅಲ್ಲೇ ಉಳಿದಿದ್ದಾರೆ. ಆದರೂ, ಎರಡೂ ಕುಟುಂಬದ ಸದಸ್ಯರು ಈ ಸುದ್ದಿಯನ್ನು ಧೋನಿಗೆ ತಿಳಿಸಿದ್ದಾರೆ. 2010ರ ಜುಲೈ 4ರಂದು ಧೋನಿ, ಸಾಕ್ಷಿಯ ವಿವಾಹವಾಗಿತ್ತು.