

ಕ್ರೈಸ್ಟ್ ಚರ್ಚ್: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಗುರುವಾರವೇ ಅಧಿಕೃತ ಚಾಲನೆ ಸಿಕ್ಕಿದ್ದು, ನ್ಯೂಜಿಲ್ಯಾಂಡ್‌ನ ಹೇಗ್ಲೆ ಓವಲ್ ನ ಕ್ರೈಸ್ಟ್ ಚರ್ಚ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ಶ್ರೀಲಂಕಾ ವಿರುದ್ದ ಜಯಗಳಿಸಿ ಶುಭಾರಂಭ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 331ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. 332 ರನ್‌ಗಳ ಗುರಿ ಬೆನ್ನಟ್ಟಿದ ಲಂಕನ್ನರು 233 ರನ್ ಗಳಿಗೆ ಆಲೌಟ್ ಆಗುವ ಮೂಲಕ 98 ರನ್‌ಗಳ ಅಂತರದಲ್ಲಿ ಸೋಲನ್ನಪ್ಪಿಕೊಂಡಿತ್ತು.
ನ್ಯೂಜಿಲೆಂಡ್ನ ಆರಂಭಿಕರಾದ ಗಪ್ಟಿಲ್ (49) ಮತ್ತು ನಾಯಕ ಬ್ರೆಂಡನ್ ಮೆಕಲಮ್ (65) ಶತಕದ ಜೊತೆಯಾಟ ನೀಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಅದರಲ್ಲೂ ನಾಯಕ ಮೆಕ್ ಕಲಮ್ 49 ಎಸೆತಗಳಲ್ಲಿ 65 ರನ್ ಗಳಿಸಿದರು. ನಂತರ ಬಂದ ವಿಲಿಯಮ್ಸ್ ಕೂಡ ಉತ್ತಮವಾಗಿ ಬ್ಯಾಸ್ ಬೀಸಿ 57 ಕಲೆ ಹಾಕಿದರು.
ಸ್ಪೋಟಕ ಬ್ಯಾಟ್ಸ್ ಮನ್ ಕೋರಿ ಅಂಡರ್ಸನ್ ಲಂಕಾ ಬೌಲರ್ ಗಳ ಬೆವರಿಳಿಸಿದರು. ಕೋರಿ ಕೇವಲ 46 ಎಸೆತಗಳಲ್ಲಿ 75 ರನ್ ಗಳಿಸಿ ನ್ಯೂಜಿಲೆಂಡ್ ಭರ್ಜರಿ ಮೊತ್ತ ಕಲೆ ಹಾಕಲು ಸಹಾಯಕರಾದರು.
ಶ್ರೀಲಂಕಾ ಪರ ಸುರಂಗ ಲಕ್ಮಲ್ ಮತ್ತು ಅಮಿತ್ ಜೀವನ್ ಮೆಂಡಿಸ್ ತಲಾ 2 ವಿಕೆಟ್ ಪಡೆದರೇ, ಕುಲಶೇಖರ ಹಾಗೂ ರಂಗನ್ ಹೆರಾತ್ ತಲಾ 1 ವಿಕೆಟ್ ಪಡೆದರು.
ಕಿವೀಸ್ ಬೃಹತ್ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಲಂಕನ್ನರಿಗೆ ತಿನಿಮನ್ನೆ (65) ಹಾಗೂ ದಿಲ್ಷನ್ ತಿಲಕರತ್ನೆ (24) ಸಾಧಾರಣ ಆರಂಭ ಒದಗಿಸಿದರು. ಸಂಗಕ್ಕರ (39) ಹಾಗೂ ಜಯವರ್ಧನೆ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ನಾಯಕ ಮ್ಯಾಥ್ಯೂಸ್ 46 ,ಕರುಣರತ್ನೆ 14 ,ಮೆಂಡಿಸ್ 4, ಕುಲಶೇಖರ 10, ಮಾಲಿಂಗ 0 , ಹೆರಾತ್ 13 ರನ್‌ಗಳಿಸಿ ಔಟಾದರೆ, ಲಕ್ಮಲ್ ಅಜೇಯ 7 ರನ್ ಗಳಿಸಿದರು.
ಕೀವಿಸ್ ಪರ ಡೇನಿಯಲ್ ವೆಟರಿ, ಟಿಮ್ ಸೌಥಿ, ಆ್ಯಡಂ ಮಿಲ್°, ಟ್ರೆಂಟ್ ಬೌಲ್ಟ್. ಕೋರಿ ಆ್ಯಂಡರ್ಸನ್ ತಲಾ 2 ವಿಕೆಟ್ ಪಡೆದರು.