

ನವದೆಹಲಿ: ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕುಗಳನ್ನು ನೀಡುವ ಪ್ರಕ್ರಿಯೆಯಲ್ಲಿ ತನ್ನ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿದ್ದ ಬಿಸಿಸಿಐಗೆ ವಿಧಿಸಲಾದ ದಂಡದಿಂದ ಸ್ಪರ್ಧಾತ್ಮಕ ವ್ಯಾಜ್ಯಗಳ ಮೇಲ್ಮನವಿ ನ್ಯಾಯಾಧಿಕರಣ (ಸಿಎಟಿ) ಮುಕ್ತಿಗೊಳಿಸಿದೆ.
ಕಳೆದ ವರ್ಷ ಐಪಿಎಲ್ ಸಂದರ್ಭದಲ್ಲಿ ಪ್ರಸಾರ ಹಕ್ಕುಗಳನ್ನು ನೀಡುವ ವೇಳೆ ಬಿಸಿಸಿಐ ಗರ್ವದಿಂದ ವರ್ತಿಸಿದ್ದು, ಹಲವಾರು ಮಾಧ್ಯಮಗಳಿಗೆ ಪ್ರಸಾರದ ಹಕ್ಕುಗಳನ್ನು ನೀಡದೇ ದೂರ ಇಟ್ಟಿತ್ತು ಎಂದು ವ್ಯಕ್ತಿಯೊಬ್ಬರು ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ)ದಲ್ಲಿ ದೂರು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಬಿಸಿಸಿಐ ನಡೆಯು ತಪ್ಪು ಎಂದು ಸಾಬೀತಾಗಿದ್ದರಿಂದ ಸಿಎಟಿ, ಬಿಸಿಸಿಐಗೆ ರು. 52.24 ಕೋಟಿ ದಂಡ ವಿಧಿಸಿತ್ತು.
ಅಲ್ಲದೆ, ಬಿಸಿಸಿಐ ತನ್ನ ಸ್ಥಾನಮಾನದ ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿ ಸಿತ್ತು. ಆದರೆ, ಸಿಸಿಐ ಆದೇಶದ ವಿರುದಟಛಿ ಸಿಎಟಿಯಲ್ಲಿ ಬಿಸಿಸಿಐ ಮೇಲ್ಮನವಿ ಸಲ್ಲಿಸಿತ್ತು. ಮಂಗಳವಾರ ಇದರ ವಿಚಾರಣೆ ನಡೆಸಿದ ಸಿಎಟಿ, ಬಿಸಿಸಿಐಗೆ ವಿಧಿಸಲಾಗಿದ್ದ ದಂಡವನ್ನು ತೆರವುಗೊಳಿಸಿದೆ.