ಶತಕ ಬಾರಿಸಿ ನಿರಾಳನಾದ ರಾಹುಲ್

ಗುರುವಾರ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿದೆ...
ಲೋಕೇಶ್ ರಾಹುಲ್  (ಸಂಗ್ರಹ ಚಿತ್ರ)
ಲೋಕೇಶ್ ರಾಹುಲ್ (ಸಂಗ್ರಹ ಚಿತ್ರ)

ಸಿಡ್ನಿ:  ಗುರುವಾರ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿದೆ ಎಂದು ಹೆಮ್ಮೆ ಪಡುವುದಕ್ಕಿಂತ ಹೆಚ್ಚು ನಾನು ನಿರಾಳನಾಗಿದ್ದೇನೆ ಎಂದು ಕುಡ್ಲದ ಕುವರ ಲೋಕೇಶ್ ರಾಹುಲ್ ಹೇಳಿದ್ದಾರೆ.

ಕರ್ನಾಟಕದ 22ರ ಹರೆಯದ ರಾಹುಲ್ ಸಿಡ್ನಿಯಲ್ಲಿ ಚೊಚ್ಚಲ ಶತಕ ಬಾರಿಸುವ ಮೂಲಕ ಹೊಸ ಭರವಸೆಯನ್ನು ಹುಟ್ಟು ಹಾಕಿದ್ದಾರೆ. 342 ಬಾಲ್ಗಳನ್ನೆದುರಿಸಿ 110 ರನ್ ದಾಖಲಿಸುವ ಮೂಲಕ ರಾಹುಲ್ ಸಿಡ್ನಿಯಲ್ಲಿ ಮಿಂಚಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೊಂದಿಗೆ 141 ರನ್ಗಳ ಜತೆಯಾಟ ಆಡಿದ ರಾಹುಲ್, ಮೆಲ್ಬರ್ನ್ ಟೆಸ್ಟ್ನಲ್ಲಿ ಪಾದಾರ್ಪಣೆ ಮಾಡಿ 1 ರನ್ ಗೆ ಔಟಾಗಿದ್ದರು. ಮೆಲ್ಬರ್ನ್ನಲ್ಲಿ ತನ್ನ ಪ್ರಥಮ ಪಂದ್ಯದಲ್ಲೇ ನಿರಾಶಾದಾಯಕ ಪ್ರದರ್ಶನ ನೀಡಿರುವ ಬಗ್ಗೆ ನನಗೆ ತುಂಬಾ ಬೇಸರವಾಗಿತ್ತು. ಆದರೆ ನಾಯಕ ವಿರಾಟ್ ಕೊಹ್ಲಿ, ಧೈರ್ಯಗೆಡಬೇಡ ಎಂದು ನನ್ನನ್ನು ಹುರಿದುಂಬಿಸಿದರು. ನಿನ್ನ ಸಾಮರ್ಥ್ಯದ ಮೇಲೆ ನಂಬಿಕೆಯಿಡು ಎಂದು ಕೊಹ್ಲಿ ನನಗೆ ಧೈರ್ಯ ತುಂಬಿದರು. ಈಗ ನಾನು ಶತಕ ಬಾರಿಸಿದ್ದೇನೆ. ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಶತಕ ಬಾರಿಸಿದ್ದೇನೆ ಎಂಬ ಹೆಮ್ಮೆಗಿಂತ ನಾನೀಗ ಚಿಂತೆ ಮುಕ್ತನಾಗಿದ್ದೇನೆ ಎಂದು ಪಂದ್ಯದ ನಂತರ ಮಾತನಾಡಿದ ರಾಹುಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com