ಪಾಕ್ ಕ್ರಿಕೆಟರ್ ಗೆ ದೆವ್ವದ ಕಾಟ !

ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್ ರೌಂಡರ್ ಹ್ಯಾರೀಸ್ ಸೊಹೈಲ್ ಗೆ ನ್ಯೂಜಿಲೆಂಡ್ ನ ಹೋಟೆಲ್ ನಲ್ಲಿ ತಂಗಿದ್ದಾಗ ದೆವ್ವ ...
ಹ್ಯಾರೀಸ್ ಸೊಹೈಲ್
ಹ್ಯಾರೀಸ್ ಸೊಹೈಲ್

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್ ರೌಂಡರ್ ಹ್ಯಾರೀಸ್ ಸೊಹೈಲ್ ಗೆ ನ್ಯೂಜಿಲೆಂಡ್ ನ ಹೋಟೆಲ್ ನಲ್ಲಿ ತಂಗಿದ್ದಾಗ ದೆವ್ವ ಕಾಟದ ಅನುಭವವಾಗಿದೆಯಂತೆ .ಇದಕ್ಕೆ  ಭಯಭೀತರಾದ ಸೊಹೈಲ್ ತಾವಿದ್ದ ರೂಮ್ ಬದಲಾಯಿಸುವಂತೆ ವ್ಯವಸ್ಥಾಪಕರನ್ನು ಕೋರಿದ್ದಾರೆ ಎಂಬ ವಿಷಯ ಈಗ ಸುದ್ದಿಯಾಗಿದೆ.

ಸೊಹೈಲ್ ಇದ್ದ ರೂಮಿನಲ್ಲಿ ಅಗೋಚರ ಶಕ್ತಿಗಳ ಓಡಾಟ, ಚೀರಾಟದ ಸದ್ದು ಕೇಳಿ ಬರುತ್ತಿತ್ತು. ಹೀಗಾಗಿ, ರಾತ್ರಿ ಒಂದು ಹೊತ್ತಿನಲ್ಲಿ ಗಾಬರಿಯಿಂದ ಎದ್ದ ಕ್ರಿಕೆಟರ್ ಬೇರೆ ರೂಮಿಗೆ ಹೋಗಬೇಕು ಎಂದು ಹೋಟೆಲ್ ಮ್ಯಾನೇಜ್ಮೆಂಟ್ ಗೆ ಮನವಿ  ಮಾಡಿದ್ದಾರೆ . ಮರು ದಿನ ಜ್ವರದಿಂದ ಸೊಹೈಲ್ ಕಂಪಿಸುತ್ತಿದ್ದರು .

ಆದಾಗ್ಯೂ , ಈ ಬಗ್ಗೆ ಸೊಹೈಲ್ ರನ್ನು ಪ್ರಶ್ನಿಸಿದರೆ, 'ದೆವ್ವವೊಂದು ನಾನು ಮಲಗಿದ್ದ ಹಾಸಿಗೆಯನ್ನು ಅಲ್ಲಾಡಿಸಿತು' ಎಂದಿದ್ದಾರೆ.

ಈ ಹಿಂದೆ ತಮ್ಮ ಕೆಟ್ಟ ವರ್ತನೆಗಳಿಂದಾಗಿ ರೂಮ್ ಬದಲಿಸಬೇಕಾದ ಸಂದರ್ಭ ಪಾಕ್ ಕ್ರಿಕೆಟರ್ಗಳಿಗೆ ಬಂದಿತ್ತು. ಆದರೆ ಇದೇ ಮೊದಲ ಬಾರಿಗೆ ಪ್ರೇತ ಭಯದಿಂದಾಗಿ ಪಾಕ್ ಕ್ರಿಕೆಟರ್ ರೂಮ್ ಬದಲಿಸಿದ್ದಾನೆ.
ವಿಶ್ವಕಪ್ಗೆ ಸಿದ್ಧತೆಯಲ್ಲಿರುವ ಪಾಕ್ ತಂಡ ಇದೀಗ 2 ಏಕದಿನ ಪಂದ್ಯಗಳನ್ನಾಡುವ ಸಲುವಾಗಿ ನ್ಯೂಜಿಲ್ಯಾಂಡ್ನಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com