

ಕೊಲ್ಕತ್ತಾ: ಐತಿಹಾಸಿಕ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಒಂದಾದರೂ ಅಂತಾರಾಷ್ಟ್ರೀಯ ಶತಕ ಬಾರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಭಯ ನನ್ನನ್ನು ಕಾಡಿತ್ತು ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ನಾನು ಈಡನ್ ನಲ್ಲಿ ಶತಕ ಬಾರಿಸಲು ಸಾಧ್ಯವಾಗುವುದೋ? ಎಂಬ ಭಯ ನನಗಿತ್ತು. ಆದರೆ ನಾನು ಪಾಕಿಸ್ತಾನ ವಿರುದ್ಧ ನಾನು ಶತಕ ಬಾರಿಸಿದೆ.
2007, ಡಿಸೆಂಬರ್ 1ರಂದು ನನ್ನ ಆ ಭಯ ದೂರವಾಯ್ತು. ಪಾಕಿಸ್ತಾನದ ವಿರುದ್ಧ ನಡೆದ ಎರಡನೇ ಟೆಸ್ಟ್‌ನಲ್ಲಿ ನಾನು 102ರನ್ ಸಿಡಿಸಿದ್ದೆ ಎಂದು ಗಂಗೂಲಿ ತಮ್ಮ ಕ್ರಿಕೆಟ್ ಜೀವನದ ಭಯದ ಬಗ್ಗೆ ಹೇಳಿದ್ದಾರೆ.
ಬುಧವಾರ 'ಈಡನ್ ಗಾರ್ಡನ್ -ಲೆಜೆಂಡ್ ಆ್ಯಂಡ್ ರೊಮ್ಯಾನ್ಸ್ 'ಎಂಬ ಪುಸ್ತಕ ಲೋಕಾರ್ಪಣೆಯ ಕ್ಷಣದಲ್ಲಿ ಗಂಗೂಲಿ ತನ್ನ ಹಳೆಯ ನೆನಪುಗಳನ್ನು ಈ ರೀತಿ ಬಿಚ್ಚಿಟ್ಟಿದ್ದಾರೆ.