ಆ್ಯಶಸ್ ಟೂರ್ನಿ ಏಕದಿನ ಪಂದ್ಯಗಳಿಗೆ ಕ್ರಿಕೆಟಿಗ ಜೇಮ್ಸ್ ಫಾಲ್‍ಕ್ನರ್ ಅಲಭ್ಯ?

ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಜೇಮ್ಸ್ ಫಾಲ್‍ಕ್ನರ್ ನನ್ನು ಮುಂಬರು ಆಸೀಸ್ ಸರಣಿಯಿಂದ ಬ್ಯಾನ್ ಮಾಡಲಾಗಿದೆ...
ಜೇಮ್ಸ್ ಫಾಲ್‍ಕ್ನರ್
ಜೇಮ್ಸ್ ಫಾಲ್‍ಕ್ನರ್

ಮ್ಯಾಂಚೆಸ್ಟರ್: ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಜೇಮ್ಸ್ ಫಾಲ್‍ಕ್ನರ್ ನನ್ನು ಮುಂಬರು ಆ್ಯಶಿಸ್ ಏಕದಿನ ಪಂದ್ಯಗಳಿಗೆ ಬ್ಯಾನ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಬ್ರಿಟನ್ನಿನ ಗ್ರೇಟರ್ ಮ್ಯಾಂಚೆಸ್ಟರ್ ನಲ್ಲಿ 2 ಬಾರಿ ಡ್ರಿಂಕ್ ಅಂಡ್ ಡ್ರೈವ್ ಮಾಡಿ ಸಿಕ್ಕಿಹಾಕಿಕೊಂಡ ಫಾಲ್ಕ್ ನರ್ ಅನ್ನು ಬಂಧಿಸಿದ್ದು, ಇದೀಗ, ಫಾಲ್‍ಕ್ನರ್ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಂಚೆಸ್ಟರ್ ಕೋರ್ಟ್‘ನಲ್ಲಿ ಜುಲೈ 21ರಂದು ಫಾಲ್‍ಕ್ನರ್ ವಿಚಾರಣೆಗೆ ಹಾಜರಾಗಬೇಕಿದೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com