ಡಿವೈನ್ ದಾಖಲೆ ಆಟ; ಕಿವೀಸ್‍ಗೆ ಭರ್ಜರಿ ಜಯ

ಆರಂಭಿಕ ಆಟಗಾರ್ತಿ ಹಾಗೂ ನಾಯಕಿ ಸೋಫಿ ಡಿವೈನ್ ಅವರ ಸ್ಫೋಟಕ ಹಾಗೂ ದಾಖಲೆ ಆಟದ ಫಲವಾಗಿ ಭಾರತ ಮಹಿಳಾ ತಂಡದ...
ಸೋಫಿಯಾ ಡಿವೈನ್
ಸೋಫಿಯಾ ಡಿವೈನ್

ಬೆಂಗಳೂರು: ಆರಂಭಿಕ ಆಟಗಾರ್ತಿ ಹಾಗೂ ನಾಯಕಿ ಸೋಫಿ ಡಿವೈನ್ ಅವರ ಸ್ಫೋಟಕ ಹಾಗೂ ದಾಖಲೆ ಆಟದ ಫಲವಾಗಿ ಭಾರತ ಮಹಿಳಾ ತಂಡದ ವಿರುದ್ಧ ಶನಿವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವನಿತಾ ತಂಡ 8 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 126 ರನ್ ಗುರಿ ಪಡೆದ ನ್ಯೂಜಿಲೆಂಡ್ ಇನ್ನೂ 45 ಎಸೆತಗಳು ಬಾಕಿ ಇರುವಂತೆಯೇ ಅಂದರೆ 12.3 ಓವರ್‍ಗಳಲ್ಲೇ ಕೇವಲ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಇದರೊಂದಿಗೆ ಪ್ರವಾಸಿ ತಂಡ ಮುರು ಚುಟುಕು ಪಂದ್ಯ ಸರಣಿಯಲ್ಲಿ 10 ಮುನ್ನಡೆ ಸಾಧಿಸಿದಂತಾಗಿದೆ.
ನಾಯಕಿಯಾಗಿ ಸಮರ್ಥ ನಿರ್ವಹಣೆ ನೀಡಿದ ಸೋಫಿ ತಂಡವನ್ನು ಗೆಲುವಿನತ್ತ  ಮುನ್ನಡೆಸಿದ್ದಲ್ಲದೆ, ಕೇವಲ 18 ಎಸೆತಗಳಲ್ಲಿ 50 ರನ್ ಪೂರೈಸುವುದರೊಂದಿಗೆ ಮಹಿಳಾ ವಿಶ್ವ ಕ್ರಿಕೆಟ್ ಟೂರ್ನಿಯಲ್ಲಿ ಶರವೇಗದಲ್ಲಿ ಶತಕ ಪೂರೈಸಿ ದಾಖಲೆ ಬರೆದರು. ಕೇವಲ 22 ಎಸೆತಗಳಲ್ಲಿ 5 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ಸಿಡಿಸಿದ ಸೋಫಿ 6ನೇ ಓವರ್‍ನಲ್ಲಿಯೇ ತಂಡದ ಗೆಲುವನ್ನು ಖಾತ್ರಿಗೊಳಿಸಿದರು. 6ನೇ ಓವರ್‍ನ 3ನೇ ಎಸೆತದಲ್ಲಿ ರಾಜೇಶ್ವರಿ ಗಾಯಕ್ವಾಡ್ ಬೌಲಿಂಗ್‍ನಲ್ಲಿ ಸ್ನೇಹಾ ರಾಣಾಗೆ ಕ್ಯಾಚಿತ್ತು ನಿರ್ಗಮಿಸಿದ ಬಳಿಕ ಏ್ಯಮಿ ಸ್ಯಾಟರ್‍ವೈಟ್ (39) ಮತ್ತು ಲೀ ಕಾಸ್ಪೆರಿಕ್ (11) ಅಜೇಯ ಆಟದೊಂದಿಗೆ ತಂಡವನ್ನು ಸುನಾಯಾಸವಾಗಿ ಗೆಲುವಿನ ದಡ ಮುಟ್ಟಿಸಿದರು. ಮೊನಚು ಕಳೆದುಕೊಂಡಿದ್ದ ಭಾರತದ ಬೌಲಿಂಗ್ ವಿಭಾಗದಲ್ಲಿ ವೇಗಿ ಜೂಲನ್ ಗೋಸ್ವಾಮಿ 19ಕ್ಕೆ 1 ಹಾಗೂ ರಾಜೇಶ್ವರಿ ಗಾಯಕ್ವಾಡ್ 30ಕ್ಕೆ 1 ವಿಕೆಟ್ ಗಳಿಸಿದರು. ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ಮಿಥಾಲಿ ರಾಜ್ ಸಾರಥ್ಯದ ಭಾರತ ವನಿತಾ ತಂಡ 20 ಓವರ್‍ಗಳನ್ನೂ ಪೂರೈಸಲು ವಿಫಲವಾಗಿ 19.5 ಓವರ್‍ಗಳಲ್ಲಿ 125 ರನ್ ಗಳಿಗೆ ಆಲೌಟ್ ಆಯಿತು. ಪ್ರವಾಸಿ ತಂಡದ ಸಂಘಟಿತ ದಾಳಿಗೆ ನಲುಗಿದ ಭಾರತ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ವಿಫಲವಾಯಿತು. ಮೋರ್ನಾ ನೀಲ್‍ಸೆನ್ (30ಕ್ಕೆ 3), ಕೇಟ್ ಬ್ರಾಡ್ಮೋರ್ (16ಕ್ಕೆ 3), ಲೀ ಕಾಸ್ಪೆರೆಕ್ (18ಕ್ಕೆ 2) ಮತ್ತು ಸೋಪಿs ಡಿವೈನ್ 18ಕ್ಕೆ 1 ವಿಕೆಟ್ ಗಳಿಸಿ ಆತಿಥೇಯ ತಂಡವನ್ನು ಕಾಡಿದರು. ಆರಂಭಿಕ ಆಟಗಾರ್ತಿ ಹಾಗೂ ನಾಯಕಿ ಮಿಥಾಲಿ ರಾಜ್ (35: 23 ಎಸೆತ, 6 ಬೌಂಡರಿ) ಭಾರತದ ಪರ ಗರಿಷ್ಟ ಸ್ಕೋರರ್ ಎನಿಸಿಕೊಂಡರು. ಒಟ್ಟಾರೆ ಏಕದಿನ ಸರಣಿಯನ್ನು 23ರಿಂದ ಕಳೆದುಕೊಂಡ ಕಿವೀಸ್ ಚುಟುಕು ಪಂದ್ಯ ಸರಣಿಯ ಮೊದಲ ಪಂದ್ಯವನ್ನು ಜಯಿಸುವುದರೊಂದಿಗೆ ಭಾರತ ಪಾಳೆಯದಲ್ಲಿ ನಡುಕ ಹುಟ್ಟಿಸಿದೆ.
ಸಂಕ್ಷಿಪ್ತ ಸ್ಕೋರ್
ಭಾರತ: 19.5 ಓವರ್‍ಗಳಲ್ಲಿ 125 (ಮಿಥಾಲಿ ರಾಜ್ 35;
ಕೇಟ್ ಬ್ರಾಡ್ಮೋರ್ 16ಕ್ಕೆ 3)
ನ್ಯೂಜಿಲೆಂಡ್: 12.3 ಓವರ್‍ಗಳಲ್ಲಿ 2 ವಿಕೆಟ್‍ಗೆ 126
(ಸೋಪಿs ಡಿವೈನ್ 70, ಸ್ಯಾಟರ್‍ವೈಟ್ ಅಜೇಯ 39;
ಗೋಸ್ವಾಮಿ 19ಕ್ಕೆ 1)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com