ಮಿಲಿಂದ್‍ಗೆ ಐರನ್‍ಮ್ಯಾನ್ ಗರಿ

ರಾಷ್ಟ್ರ ಮಟ್ಟದ ಮಾಜಿ ಈಜು ಚಾಂಪಿಯನ್, ಬಾಲಿವುಡ್ ನಟ ಮಿಲಿಂದ್ ಸೊಮನ್ 'ಐರನ್ ಮ್ಯಾನ್ ಗರಿ'ಯನ್ನು ಮುಡಿಗೇರಿಸಿಕೊಂಡಿದ್ದಾರೆ...
ಮಿಲಿಂದ್ ಸೊಮನ್
ಮಿಲಿಂದ್ ಸೊಮನ್

ನವದೆಹಲಿ: ರಾಷ್ಟ್ರ ಮಟ್ಟದ ಮಾಜಿ ಈಜು ಚಾಂಪಿಯನ್, ಬಾಲಿವುಡ್ ನಟ ಮಿಲಿಂದ್ ಸೊಮನ್ 'ಐರನ್ ಮ್ಯಾನ್ ಗರಿ'ಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ಜರ್ಮನಿಯ ಜ್ಯೂರಿಚ್ ನಲ್ಲಿ ನಡೆದ ಐರನ್‍ ಮ್ಯಾನ್ ಟ್ರಯ- ಥ್ಲಾನ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವ  ಮೂಲಕ 49 ವರ್ಷದ ಮಿಲಿಂದ್ ಗಮನ ಸೆಳೆದಿದ್ದಾರೆ. ಈ ಸ್ಪರ್ಧೆಯಲ್ಲಿ 7 ಭಾರತೀಯರು  ಸೇರಿದಂತೆ ವಿಶ್ವದಾದ್ಯಂತ 2,000 ಸ್ಪರ್ಧಿಗಳು ಭಾಗವಹಿಸಿದ್ದರು. ಕಳೆದ ಕೆಲವು  ತಿಂಗಳಿನಿಂದ ಮಿಲಿಂದ್ ಈ ಸ್ಪರ್ಧೆಗಾಗಿ  ಸಾಕಷ್ಟು ಅಭ್ಯಾಸ ನಡೆಸಿದ್ದರು.

ಈ ಸ್ಪರ್ಧೆಯು 3.8 ಕಿ.ಮೀ ಈಜು, 180.2  ಕಿ.ಮೀ ಸೈಕ್ಲಿಂಗ್ ಮತ್ತು 42.2 ಕಿ.ಮೀ  ಓಟವನ್ನು ಒಳಗೊಂಡಿತ್ತು. ಈ ಮೂರೂ ಸ್ಪರ್ಧಾವಳಿಯನ್ನು ಮಿಲಿಂದ್ 15  ಗಂಟೆ, 19 ನಿಮಿಷ ಮತ್ತು 29 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com