ರೊನಾಲ್ಡೊ, ಮೆಸ್ಸಿ ಹಿಂದಿಕ್ಕಿದ ಧೋನಿ, ವಿಶ್ವದ 9ನೇ ಬೇಡಿಕೆ ಆಟಗಾರ

ಫೊರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ್ದ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್...
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ
Updated on: 

ನವದೆಹಲಿ: ಫೊರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ್ದ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, ಇದೀಗ ಲಂಡನ್ ಸ್ಕೂಲ್ ಆಫ್ ಮಾರ್ಕೆಟಿಂಗ್ ಪ್ರಕಟಿಸಿರುವ ಅತಿ ಹೆಚ್ಚು ಬೇಡಿಕೆಯ ವಿಶ್ವ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಹೆಚ್ಚು ಬೇಡಿಕೆಯ ಆಟಗಾರರ ಪಟ್ಟಿಯಲ್ಲಿ ಧೋನಿ ವಿಶ್ವ ಫೂಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೊನೆಲ್ ಮೆಸ್ಸಿ ಅವರನ್ನು ಹಿಂದಿಕ್ಕಿ 9ನೇ ಸ್ಥಾನ ಪಡೆದಿದ್ದಾರೆ.

17 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿರುವ ಟೆನಿಸ್ ತಾರೆ ರೊಜರ್ ಫೆಡರರ್ರ್ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಟೈಗರ್ ವೂಡ್ಸ್ ಎರಡನೇ ಸ್ಥಾನ ಪಡೆದಿದ್ದಾರೆ.

ಆಟಗಾರರ ಬ್ರಾಂಡ್ ಮೌಲ್ಯ ಹಾಗೂ ಅವರ ವಾರ್ಷಿಕ ಆದಾಯ ಮತ್ತು ಸಾಮಾಜಿಕ ಜಾಲ ತಣದಲ್ಲಿನ ಪ್ರಭಾವದ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಲಂಡನ್ ಸ್ಕೂಲ್ ಆಫ್ ಮಾರ್ಕೆಟಿಂಗ್ ಹೇಳಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com