ಭಾರತದ ಗೆಲುವಿನ ಶುಭಾರಂಭ

ಶನಿವಾರ ನಡೆದ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಭಾರತ 3-2 ಗೋಲುಗಳ ರೋಚಕ ಜಯ ದಾಖಲಿಸಿತು...
ರಮಣ್ ದೀಪ್ ಸಿಂಗ್ ಗಳಿಸಿದ ಗೋಲ್ ನಿಂದ ಭಾರತ ಪುರುಷರ ಹಾಕಿ ತಂಡ ಫ್ರಾನ್ಸ್ ವಿರುದ್ಧ ಜಯ ದಾಖಲಿಸಿತು.
ರಮಣ್ ದೀಪ್ ಸಿಂಗ್ ಗಳಿಸಿದ ಗೋಲ್ ನಿಂದ ಭಾರತ ಪುರುಷರ ಹಾಕಿ ತಂಡ ಫ್ರಾನ್ಸ್ ವಿರುದ್ಧ ಜಯ ದಾಖಲಿಸಿತು.

ಬೆಲ್ಜಿಯಂ: ಪಂದ್ಯದ ಅಂತಿಮ ಘಟ್ಟದಲ್ಲಿ ರಮಣ್ ದೀಪ್ ಸಿಂಗ್ ಗಳಿಸಿದ ಗೋಲ್ ನ ಸಹಾಯದಿಂದಾಗಿ, ಭಾರತ ಪುರುಷರ ಹಾಕಿ ತಂಡ, ಶನಿವಾರ ನಡೆದ ವಿಶ್ವ ಹಾಕಿ ತಂಡ, ಶನಿವಾರ ನಡೆದ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 3-2 ಗೋಲುಗಳ ರೋಚಕ ಜಯ ದಾಖಲಿಸಿತು.

ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಸರ್ದಾರ್ ಪಡೆ, ಫ್ರಾನ್ಸ್ ಗೆ ಪ್ರತಿ ಹಂತದಲ್ಲೂ ಸವಾಲೆಸೆಯುತ್ತಾ ಸಾಗಿತು. ಆದರೆ, ಪಂದ್ಯದ 4ನೇ ನಿಮಿಷದಲ್ಲಿ ಎದುರಾಳಿ ತಂಡದ ಮಿಡ್ ಫೀಲ್ಡರ್ ಸ್ಯಾಂಚೆಜ್ ಅವರು, ಗೋಲು ಗಳಿಸುವ ಮೂಲಕ ತಮ್ಮ ತಂಡಕ್ಕೆ 1-0 ಅಂತರದ ಮುನ್ನಡೆ ತಂದುಕೊಟ್ಟರು.

ಇದಾದ ನಂತರ, 27ನೇ ನಿಮಿಷದಲ್ಲಿ ಭಾರತಕ್ಕೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ, ಧರಮ್ ವೀರ್ ಸಿಂಗ್ ಅವರಿಂದ ಚೆಂಡನ್ನು ಪಾಸ್ ಪಡೆದ ಮನ್ ಪ್ರೀತ್ ಸಿಂಗ್ ಅವರು ಚೆಂಡನ್ನು ನೇರವಾಗಿ ಫ್ರಾನ್ಸ್ ನ ಗೋಲು ಪೆಟ್ಟಿಗೆಯೊಳಗೆ ಸೇರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ, ಭಾರತ ತಂಡ, ಫ್ರಾನ್ಸ್ ವಿರುದ್ಧ 1-1ರ ಸಮಬಲ ಸಾಧಿಸಿತು.

ನಂತರ,29ನೇ ನಿಮಿಷದಲ್ಲಿ ಭಾರತ ಮತ್ತೊಂದು ಗೋಲು ದಾಖಲಿಸಿತು. ವಾಲ್ಮೀಕಿ ಈ ಗೋಲು ಗಳಿಸಿಕೊಟ್ಟರು. ಇದು ಫ್ರಾನ್ಸ್ ಎದುರು ಭಾರತಕ್ಕೆ 2-1ರ ಮುನ್ನಡೆ ಸಾಧಿಸಲು ನೆರವಾಯಿತು.

ಆದರೆ, 43ನೇ ನಿಮಿಷದಲ್ಲಿ, ಎದುರಾಳಿ ತಂಡದ ಮಿಡ್ ಫೀಲ್ಡರ್ ಮಾರ್ಟಿನ್ ಅವರು ಗೋಲು ಗಳಿಸುವ ಮೂಲಕ, ಪಂದ್ಯದಲ್ಲಿ ಫ್ರಾನ್ಸ್ ಸಮಬಲ ಸಾಧಿಸುವಲ್ಲಿ ನೆರವಾದರು. ಇದಾದ ಮೇಲೆ, ಇತ್ತಂಡಗಳು ಪೈಪೋಟಿಯಲ್ಲಿ ಆಡಿದ ಕಾರಣದಿಂದ ಪಂದ್ಯ ಅಂತಿಮ ಘಟ್ಟಕ್ಕೆ ಕಾಲಿಟ್ಟರೂ, ಯಾರು ಗೆಲ್ಲುತ್ತಾರೆಂಬ ಕುತೂಹಲ ಎಲ್ಲರನ್ನೂ ಕಾಡಿತು. ಈ ಎಲ್ಲರ ಕುತೂಹಲಕ್ಕೆ ತೆರೆ ಎಳೆದ ರಮಣ್ ದೀಪ್ ಸಿಂಗ್ ಅವರು, ಪಂದ್ಯದ 59ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇದೇ ಅಂತರದಲ್ಲಿ, ಭಾರತ ಜಯಶಾಲಿಯಾಗಿ ಹೊರಹೊಮ್ಮಿತು.

ಆದರೆ ವಿಶ್ವ ಹಾಕಿ ಲೀಗ್ ನ ಸೆಮಿಫೈನಲ್ ಟೂರ್ನಿಯಲ್ಲಿ ಭಾರತೀಯ ಮಹಿಳೆಯರು ಆರಂಭದಲ್ಲೇ ಸೋಲಿನ ಕಹಿ ಕಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com