ಟೋಪಲೋವ್ ನಾರ್ವೆ ಚೆಸ್ ಚಾಂಪಿಯನ್, 2ನೇ ಸ್ಥಾನಕ್ಕೆ ತೃಪ್ತಿಪಟ್ಟ ಆನಂದ್

ನಾರ್ವೆ ಚದುರಂಗ ಟೂರ್ನಿಯಲ್ಲಿ ಫೀನಿಕ್ಸ್ ನಂತೆ ಕಮ್ ಬ್ಯಾಕ್ ಮಾಡಿದ್ದ ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು...
ವಿಶ್ವನಾಥ್ ಆನಂದ್
ವಿಶ್ವನಾಥ್ ಆನಂದ್

ಸ್ಟಾವೆಂಜರ್: ನಾರ್ವೆ ಚದುರಂಗ ಟೂರ್ನಿಯಲ್ಲಿ ಫೀನಿಕ್ಸ್ ನಂತೆ ಕಮ್ ಬ್ಯಾಕ್ ಮಾಡಿದ್ದ ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು, ಬಲ್ಗೇರಿಯಾದ ವಸೆಲಿನ್ ಟೋಪಲೋವ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಸತತ ಗೆಲುವುಗಳ ಮೂಲಕ ಟೂರ್ನಿ ಗೆಲ್ಲುವ ಹಂತ ತಲುಪಿದ್ದ ವಿಶ್ವನಾಥನ್ ಆನಂದ್ ಮತ್ತು ಟೋಪಲೋವ್ ನಡುವಿನ ಪಂದ್ಯ ತೀವ್ರ ಕುತೂಹಲ ಮೂಡಿಸಿತ್ತು. ಈ ಇಬ್ಬರ ನಡುವಿನ ಕೊನೆಯ ಸುತ್ತಿನ ಪಂದ್ಯ 18 ನಡೆಗಳಲ್ಲಿ ಅಂತ್ಯಗೊಂಡಿದ್ದು, ವಸೆಲಿನ್ ಟೋಪಲೋವ್ ಚಾಂಪಿಯನ್ ಆಗಿದ್ದಾರೆ. ಟೋಪಲೋವ್ ಕೊನೆಯ ಸುತ್ತಿನಲ್ಲಿ ಪ್ರಬಲ ರಕ್ಷಣಾವ್ಯೂಹ ಹೆಣೆದು ಆನಂದ್ ಗೆಲುವಿನ ಯತ್ನವನ್ನು ವಿಫಲಗೊಳಿಸಿದರು.

ಇದೇ ಟೂರ್ನಿಯಲ್ಲಿ ವಿಶ್ವನಾಥ್ ಆನಂದ್ ಹಾಲಿ ವಿಶ್ವಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ರನ್ನು ಸೋಲಿಸಿ ತಮ್ಮ ಹಳೆಯ ಸೋಡು ತೀರಿಸಿಕೊಂಡಿದ್ದರು. ಹಾಲಿ ಚಾಂಪಿಯನ್ ಆದರೂ ಆತಿಥೇಯ ನಾರ್ವೆ ದೇಶದವರೇ ಆದ ಮ್ಯಾಗ್ನಸ್ ಕಾರ್ಲ್ಸನ್ ಈ ಟೂರ್ನಿಯ 9 ಸುತ್ತುಗಳಲ್ಲಿ ಕೇವಲ 3.5 ಅಂಕಗಳನ್ನು ಗಳಿಸಿ 7ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com