ಭಾರತಕ್ಕೆ ಮಲೇಷ್ಯಾ ಸವಾಲು

ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವಿರುದ್ಧ ಅಂತಿಮ ಲೀಗ್ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತ ತಂಡ, ಈಗ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ...
ಭಾರತೀಯ ಹಾಕಿ ತಂಡ (ಸಂಗ್ರಹ ಚಿತ್ರ)
ಭಾರತೀಯ ಹಾಕಿ ತಂಡ (ಸಂಗ್ರಹ ಚಿತ್ರ)

ಆ್ಯಂಟ್ವೆರ್ಪ್ (ಬೆಲ್ಜಿಯಂ): ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ  ಅಂತಿಮ ಲೀಗ್ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತ ತಂಡ, ಈಗ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ಮಲೇಷ್ಯಾ ತಂಡದ ವಿರುದ್ಧ ಸೆಣಸಲಿದೆ. ಬುಧವಾರ ಕೆಎಚ್‍ಸಿ ಡ್ರ್ಯಾಗನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸರ್ದಾರ್ ಸಿಂಗ್ ನೇತೃತ್ವದ ಭಾರತ ತಂಡ ಗೆಲವು ದಾಖಲಿಸುವ ಮೂಲಕ ಟೂರ್ನಿಯ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ಗುರಿ ಹೊತ್ತಿದೆ. ಗುಂಪು ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಭಾರತ ತಂಡ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2-6 ಗೋಲುಗಳ ಅಂತರದ ಭಾರೀ ಸೋಲನುಭವಿಸಿತ್ತು. ಕಳೆದ ಪಂದ್ಯದಲ್ಲಿ ಭಾರತ ತಂಡದ ರಕ್ಷಣಾತ್ಮಕ ವಿಭಾಗ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿತ್ತು. ಹಾಗಾಗಿ ಆಸ್ಟ್ರೇಲಿಯಾ ಆಟಗಾರರು ಇದರ ಲಾಭ ಪಡೆದು 6 ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ನಾಕೌಟ್ ಹಂತದಲ್ಲಿ ಬಲಿಷ್ಠ ಮಲೇಷ್ಯಾ ತಂಡದ ವಿರುದ್ಧ ಸೆಣಸಲಿದ್ದು, ಭಾರತ ತಂಡದ ರಕ್ಷಣಾತ್ಮಕ ವಿಭಾಗಕ್ಕೆಮತ್ತೊಂದು ಪರೀಕ್ಷೆ ಎದುರಾಗಿದೆ ಎಂದೇ ಹೇಳಬಹುದು.ಇತ್ತ ಮಲೇಷ್ಯಾ ತಂಡ ಕೂಡ ಭಾರತ ತಂಡಕ್ಕೆ ಸವಾಲು ನೀಡಲು ಸಜ್ಜಾಗಿ ನಿಂತಿದೆ. ಈ ಎರಡು ತಂಡಗಳು ಕಳೆದ ಬಾರಿ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಮಲೇಷ್ಯಾ ತಂಡ 3-2 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು. ಹಾಗಾಗಿ ಮಲೇಷ್ಯಾ ತಂಡ ಈ ಪಂದ್ಯದಲ್ಲಿ ಆತ್ಮವಿಶ್ವಾಸದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಭಾರತ ತಂಡದಲ್ಲಿ ಬಹುತೇಕ ಆಟಗಾರರು ಹೊಸಬರಾಗಿರುವ ಹಿನ್ನೆಲೆಯಲ್ಲಿ, ಮಲೇಷ್ಯಾ ತನ್ನ ಎಲ್ಲ ಪ್ರಯೋಗಗಳನ್ನು ಬಳಸುವ ನಿರೀಕ್ಷೆ ಇದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ, ಮಲೇಷ್ಯಾ 2016ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಳ್ಳಲಿದೆ. ಹಾಗಾಗಿ ಈ ಪಂದ್ಯದಲ್ಲಿ ಗೆಲುವು ದಾಖಲಿಸಬೇಕೆಂಬ ಹಠ ಮಲೇಷ್ಯಾ ಆಟಗಾರರಲ್ಲಿದೆ. ಕಳೆದ ವರ್ಷ ಇಂಚಾನ್‍ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದು, ರಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿರುವ ಭಾರತ, ಈಗ ಯಾವುದೇ ಆತಂಕವಿಲ್ಲದೇ ಪ್ರತಿ ಪಂದ್ಯದಲ್ಲೂ ಹೊಸ ಪ್ರಯೋಗಗಳನ್ನು ನಡೆಸುವ ಅವಕಾಶ ಹೊಂದಿದೆ. ಆದರೂ ಡಿಸೆಂಬರ್‍ನಲ್ಲಿ ಭಾರತ ತವರಿನಲ್ಲಿ ವಿಶ್ವ ಹಾಕಿ ಲೀಗ್  ಫೈನಲ್ ಟೂರ್ನಿಯನ್ನು ಆಯೋಜಿಸಲಿರುವ ಹಿನ್ನೆಲೆಯಲ್ಲಿ ಆ ಟೂರ್ನಿಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು, ಈ ಟೂರ್ನಿಯಲ್ಲಿ ಕನಿಷ್ಠ ಪೋಡಿಯಂ ಸ್ಥಾನ ಪಡೆಯುವ ಗುರಿ ಹೊಂದಿದೆ. ಕಳೆದ ಏಪ್ರಿಲ್‍ನಲ್ಲಿ ಮಲೇಷ್ಯಾ ವಿರುದ್ಧ ಆಡಿದ್ದ ಭಾರತ ತಂಡಕ್ಕೂ, ಈ ಪಂದ್ಯವನ್ನಾಡುತ್ತಿರುವ ಭಾರತ ತಂಡಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಭಾರತ ತಂಡದಲ್ಲಿನ ಕೆಲ ಹಿರಿಯ
ಆಟಗಾರರು ಗಾಯದ ಸಮಸ್ಯೆಯಿಂದ ಟೂರ್ನಿಗೆ ಅಲಭ್ಯರಾಗಿದ್ದಾರೆ. ಹಾಗಾಗಿ ಈ ಪಂದ್ಯದಲ್ಲಿ ಮಲೇಷ್ಯಾವನ್ನು ಭಾರತ ತಂಡ ಯಾವ ರೀತಿ ನಿಭಾಯಿಸಲಿದೆ ಎಂಬುದನ್ನು
ಕಾದು ನೋಡಬೇಕು.

ಪಂದ್ಯ ಆರಂಭ: ರಾತ್ರಿ 9.30ಕ್ಕೆ
ನೇರ ಪ್ರಸಾರ: ಸ್ಟಾರ್‍ಸ್ಪೋರ್ಟ್ಸ್ 1


ಹಾಲೆಂಡ್ ವಿರುದ್ಧ ರೀತು ತಂಡಕ್ಕೆ ಮುಖಭಂಗ

ಪ್ರತಿಷ್ಠಿತ 2017ರಿಯೋ ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯುವ ಕನಸು ಹೊತ್ತು ವಿಶ್ವ ಹಾಕಿ ಲೀಗ್ಸೆಮಿಫೈನಲ್ ಟೂರ್ನಿಗೆ ಕಾಲಿಟ್ಟಿದ್ದ ಭಾರತ ವನಿತೆಯರ ಆಸೆ ಕಮರಿದೆ.ಮಂಗಳವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಭಾರತ ಮಹಿಳಾ ತಂಡ 0-7 ಗೋಲುಗಳ ಅಂತರದಲ್ಲಿ ಎದುರಾಳಿ ತಂಡ ಹಾಲೆಂಡ್ ಮುಂದೆ ಹೀನಾಯ ಸೋಲನುಭವಿಸಿತು.
ಹಾಲೆಂಡ್ ತಂಡದ ಪರ ನವೊಮಿ ವಾನ್ ಆಸ್ (1ನೇ), ಲಿಡೆಜ್ ವೆಲ್ಟನ್ (9, 48ನೇ), ವಾನ್ ಮಾಸಕರ್ (16, 26ನೇ), ಜಿನೆಲಾ ಜೆರ್ಬೊ (18ನೇ), ಡೆ ವಾರ್ಡ್ (53ನೇ)
ನಿಮಿಷದಲ್ಲಿ ಗೋಲು ದಾಖಲಿಸಿದರು. ಹಾಲೆಂಡ್ ತಂಡದ ಆಟಗಾರ್ತಿಯರ ಸಂಘ ಟಿತ ದಾಳಿಯ ಮುಂದೆ ಮಂಕಾ ದ ರೀತು ರಾಣಿ ನೇತೃತ್ವದ ತಂಡ, ಯಾವುದೇ ಹಂತದಲ್ಲೂ
ಪ್ರತಿರೋಧ ನೀಡಲು ಸಾಧ್ಯವಾಗಲಿಲ್ಲ. ಪಂದ್ಯದ ಆರಂಭದಿಂದ, ಅಂದರೆ ಮೊದಲ ನಿಮಿಷದಲ್ಲಿ ನವೊಮಿ ಅವರ ಗೋಲಿನಿಂದ ಶುಭಾರಂಭ ಮಾಡಿದ ಹಾಲೆಂಡ್ ಆಟಗಾರ್ತಿಯರು, ಅಂತಿಮ ಹಂತದವರೆ ಭಾರತೀಯ ಆಟಗಾರ್ತಿಯರ ಮೇಲೆ ಬಿಗಿ ಹಿಡಿತ ಸಾಧಿಸಿದರು. ಈ ಮೂಲಕ ಹಾಲೆಂಡ್ ಉಪಾಂತ್ಯನ ಸುತ್ತಿಗೆ ಪ್ರವೇಶಿಸಿತು. ಮಂಗಳವಾರ ನಡೆದ ಇತರೆ ಪಂದ್ಯಗಳಲ್ಲಿ ಪೋಲೆಂಡ್, ಆಸ್ಟ್ರೇಲಿಯಾ ಹಾಗೂನ್ಯೂಜಿಲೆಂಡ್ ಗೆಲವು ದಾಖಲಿಸಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com