ಆಂಗ್ಲರಿಗೆ ಗೆಲವಿನ ಅಂತ್ಯ

ಕ್ರಿಕೆಟ್ ಜನಕ ಇಂಗ್ಲೆಂಡ್ ಪಡೆ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಕಡೇಯ ಪಂದ್ಯದಲ್ಲಿ ಗೆಲವು ದಾಖಲಿಸುವ ಮೂಲಕ ಹೋರಾಟ...
ಇಂಗ್ಲೆಂಡ್‍ ತಂಡ
ಇಂಗ್ಲೆಂಡ್‍ ತಂಡ

ಸಿಡ್ನಿ: ಕ್ರಿಕೆಟ್ ಜನಕ ಇಂಗ್ಲೆಂಡ್ ಪಡೆ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಕಡೇಯ ಪಂದ್ಯದಲ್ಲಿ ಗೆಲವು ದಾಖಲಿಸುವ ಮೂಲಕ ಹೋರಾಟ ಅಂತ್ಯಗೊಳಿಸಿದೆ. ಈ ಮೊದಲೇ ಟೂರ್ನಿಯಿಂದ ಹೊರಬಿದ್ದಿದ್ದ ಇಂಗ್ಲೆಂಡ್ ತಂಡಕ್ಕೆ ಎ ಗುಂಪಿನ ತನ್ನ ಅಂತಿಮ ಪಂದ್ಯಗೆದ್ದು ಗೌರವ ಉಳಿಸಿಕೊಳ್ಳಲು ಇದ್ದ ಕಡೇಯ ಅವಕಾಶವಾಗಿತ್ತು. ಈ ಪಂದ್ಯದಲ್ಲಿ ಆಂಗ್ಲರ್ ಪಡೆ ದುರ್ಬಲ ಅಫ್ಘಾನಿಸ್ತಾನ ವಿರುದ್ಧ 9 ವಿಕೆಟ್‍ಗಳ ಅಂತರದಲ್ಲಿ ಗೆಲವು ದಾಖಲಿಸಿದೆ. ಈ ಮೂಲಕ ಜಯ ದೊಂದಿಗೆ ವಿಶ್ವಕಪ್‍ಗೆ ಗುಡ್ ಬೈ ಹೇಳಿದೆ.
ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪಂದ್ಯದಲ್ಲಿ ಓವರ್ ಪ್ರಮಾಣವನ್ನು ಕಡಿಮೆ ಮಾಡಲಾಯಿತು. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು  ಫೀಲ್ಡಿಂಗ್ ಆಯ್ಕೆ  ಮಾ ಡಿಕೊಂಡಿತು. ಅಫ್ಘಾನಿಸ್ತಾನ 36.2 ಓವರ್‍ಗಳಿಗೆ 7 ವಿಕೆಟ್ ಕಳೆದುಕೊಂಡು 111ರನ್ ದಾಖಲಿಸಿತ್ತು. ಈ ಮೊತ್ತವನ್ನು ಇಂಗ್ಲೆಂಡ್ ಬೆನ್ನಟ್ಟಿದ ನಂತರ ಮತ್ತೆ ಮಳೆ ಅಡ್ಡಿಪಡಿಸಿದಾಗ ಓವರ್ ಸಂಖ್ಯೆಯನ್ನು 25ಕ್ಕೆ ಇಳಿಸಲಾಯಿತು. ಅಲ್ಲದೆ ಡಕ್ವರ್ತ್ ಲೂಯಿಸ್ ಸ್ಟೆರ್ನ್ ನಿಯಮದ ಪ್ರಕಾರ ಇಂಗ್ಲೆಂಡ್‍ಗೆ 101 ರನ್ ಗುರಿ ನೀಡಲಾಯಿತು. ನಂತರ ಆಂಗ್ಲರು 1 ವಿಕೆಟ್‍ಗೆ 101 ರನ್ ಪೇರಿಸಿ ಗೆಲವಿನ ದಡ ಸೇರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com