ವಿಶ್ವಕಪ್ ಮುಗಿದ ಮೇಲೆ ಸುರೇಶ್ ರೈನಾ ಮದುವೆ?

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮೆನ್ ಸುರೇಶ್ ರೈನಾ ಮದುವೆಯಾಗುತ್ತಿದ್ದಾರಂತೆ. ವಿಶ್ವಕಪ್ ಪಂದ್ಯ ಮುಗಿದ ಮೇಲೆ ಮೀರತ್ ಮೂಲದ ...
ಸುರೇಶ್ ರೈನಾ
ಸುರೇಶ್ ರೈನಾ
Updated on: 

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮೆನ್ ಸುರೇಶ್ ರೈನಾ ಮದುವೆಯಾಗುತ್ತಿದ್ದಾರಂತೆ. ವಿಶ್ವಕಪ್ ಪಂದ್ಯ ಮುಗಿದ ಮೇಲೆ ಮೀರತ್ ಮೂಲದ ಪ್ರಿಯಾಂಕಾ ಚೌಧರಿಯನ್ನು ರೈನಾ ವರಿಸಲಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

ಏಪ್ರಿಲ್ 8 ನೇ ತಾರೀಖಿಗೆ ರೈನಾ ವಿವಾಹ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಆ ಹೊತ್ತಿಗೆ ಐಪಿಎಲ್ ಆರಂಭವಾಗುವ ಕಾರಣ ಏಪ್ರಿಲ್ 3ರಂದು ವಿವಾಹ ಸಮಾರಂಭ ನಡೆಯಲಿದೆ. ಏಪ್ರಿಲ್ 8ರಂದು ದೆಹಲಿಯ ಫಾರ್ಮ್ ಹೌಸ್‌ನಲ್ಲಿ ಆರತಕ್ಷತೆ ನಡೆಯಲಿದೆ.

ನೆದರ್‌ಲ್ಯಾಂಡ್‌ನಲ್ಲಿ ನೆಲೆಸಿರುವ ಪ್ರಿಯಾಂಕಾ, ರೈನಾ ಕುಟುಂಬದ ಆಪ್ತರೊಬ್ಬರ ಮಗಳು. ರೈನಾ ಅವರ ಅಪ್ಪ ಮತ್ತು ಪ್ರಿಯಾಂಕಾ ಅವರ ಅಪ್ಪ ಒಂದೇ ಕಂಪನಿಯಲ್ಲಿ ಸಹೋದ್ಯೋಗಿಗಳಾಗಿದ್ದರು. ರೈನಾ ಮತ್ತು ಪ್ರಿಯಾಂಕಾ ಪರಸ್ಪರ ಪರಿಚಿತರಿದ್ದರೂ ಕಳೆದ 6 ತಿಂಗಳ ಹಿಂದೆಯಷ್ಟೇ ಇವರಿಬ್ಬರೂ ಮದುವೆಯಾಗುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದರು ಎಂದು ರೈನಾ ಆಪ್ತರು ಹೇಳಿರುವ ಬಗ್ಗೆ ವಿದೇಶಿ ಮಾಧ್ಯಮವೊಂದು ವರದಿ ಮಾಡಿದೆ.

ವಿವಾಹದ ಬಗ್ಗೆ ರೈನಾ ತಮ್ಮ ಟೀಂ ಮೇಟ್‌ಗಳ ಜತೆ ಹೇಳಿದ್ದಾರೆ ಎಂಬ ಮಾಹಿತಿ ಸೋರಿಕೆಯಾಗಿ ಮಾಧ್ಯಮಗಳಿಗೆ ತಲುಪಿದ್ದು ಬಿಟ್ಟರೆ ಇಲ್ಲಿಯವರೆಗೆ ರೈನಾ ಅಥವಾ ಅವರ ಕುಟುಂಬದವರು ವಿವಾಹದ ಬಗ್ಗೆ ಏನೂ ಹೇಳಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com