ಶೇಷಕ್ಕೆ ಅಲ್ಪ ಮುನ್ನಡೆ

ಕರ್ನಾಟಕದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೇದಾರ ಜಾಧವ್ ಇರಾನಿಕಪ್..
ಕೇದಾರ್ ಜಾಧವ್ ಆಟದ ಭಂಗಿ (ಸಂಗ್ರಹ ಚಿತ್ರ)
ಕೇದಾರ್ ಜಾಧವ್ ಆಟದ ಭಂಗಿ (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೇದಾರ ಜಾಧವ್ ಇರಾನಿ ಕಪ್ ಪಂದ್ಯದಲ್ಲಿ ಶೇಷ ಭಾರತ ತಂಡ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ನೆರವಾಗಿದ್ದಾರೆ.

ಚಿನ್ನಸ್ವಾಮಿ ಅಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮನೋಜ್ ತಿವಾರಿ ನೇತೃತ್ವದ ಶೇಷ ಭಾರತ, ಕರ್ನಾಟಕ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ 20 ರನ್ ಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಪಂದ್ಯದ ಆರಂಭಿಕ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 20 ರನ್ ದಾಖಲಿಸಿದ್ದ ಶೇಷ ಭಾರತ, ಬುಧವಾರ ಎರಡನೇ ದಿನಾದಟವನ್ನು ಮುಂದುವರೆಸಿ ಮೊದಲ ಇನ್ನಿಂಗ್ಸ್ ನಲ್ಲಿ 75.4 ಓವರ್ ಗಳಲ್ಲಿ 264 ರನ್ ಗಳಿಗೆ ಆಲ್ ಔಟ್ ಆಯಿತು. ನಂತರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ದಿನದಾಟ ಮುಕ್ತಾಯಕ್ಕೆ 11 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 39 ರನ್ ದಾಖಲಿಸಿದೆ.

ಮೊದಲ ಅವಧಿಯಲ್ಲಿ ಕರ್ನಾಟಕ ಮೇಲುಗೈ

ಎರಡನೇ ದಿನದ ಮೊದಲ ಅವಧಿ ಉಭಯ ತಂಡಗಳ ಪಾಲಿಗೆ ಮಹತ್ವದ್ದಾಗಿತ್ತು. ಇದು ಪಂದ್ಯದ ಗತಿಯನ್ನು ನಿರ್ಧರಿಸುವ ಘಟ್ಟವಾಗಿದ್ದರಿಂದ ಉಭಯ ತಂಡಗಳು ನಿಯಂತ್ರಣ ಸಾಧಿಸುವತ್ತ ಗಮನ ಹರಿಸಿದ್ದವು. ಪಿಚ್ ನ ಲಾಭ ಪಡೆದು, ಎದುರಾಳಿ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಮುರಿಯುವ ಅಗತ್ಯದೊಂದಿಗೆ ಕಣಕ್ಕಿಳಿದ ವಿನಯ್ ಪಡೆ ನಿರೀಕ್ಷಿಯಂತೆ ಮೊದಲ ಅವಧಿಯಲ್ಲಿ ಜೀವನ್ ಜೋತ್ ಸಿಂಗ್ (17), ಪಾರಸ್ ದೊಗ್ರಾ (26), ನಮನ್ ಓಜಾ (34), ಮನೋಜ್ ತಿವಾರಿ (14) ವಿಕೆಟ್ ಉರುಳಿಸಿತು.

ದುಬಾರಿಯಾದ ಜೀವದಾನ
ಭೋಜನ ವಿರಾಮದ ನಂತರ ಒತ್ತಡದ ಪರಿಸ್ಥಿತಿಯಲ್ಲಿ ಕಣಕ್ಕಿಳಿದ ಶೇಷ ಭಾರತಕ್ಕೆ, ಕರ್ನಾಟಕ ಜೀವದಾನ ನೀಡುವ ಮೂಲಕ ಚೇತರಿಸಿಕೊಳ್ಳುವ ಅವಕಾಶ ನೀಡಿತು. ತಂಡ 146 ರನ್ ಗಳಿಸಿದ್ದಾಗ ವಿನಯ್ ಎಸೆದ ಚೆಂಡು ಕೇದಾರ್ ಜಾಧವ್ ಬ್ಯಾಟಿಗೆ ತಾಗಿ ಮೇಲಕ್ಕೆ ಚಿಮ್ಮಿದ ಸುಲಭ ಕ್ಯಾಚ್ ಅನ್ನು ಎರಡನೇ ಸ್ಲಿಪ್‍ನಲ್ಲಿದ್ದ ಆರ್.ಸಮರ್ಥ್ ನೆಲಕ್ಕೆ ಹಾಕಿದರು. ಆಗ ಜಾಧವ್ ಮೊತ್ತ 34 ರನ್ ಆಗಿತ್ತು. ಈ ಜೀವದಾನ ಬಳಸಿಕೊಂಡ ಜಾಧವ್ ಅಂತಿಮವಾಗಿ 78 ರನ್ ಗಳಿಸಿ ತಂಡವನ್ನು ಮೇಲೆತ್ತಿದರು.

ರಿಶಿ ಧವನ್ 11 ರನ್ ಗಳಿಸಿದ್ದಾಗ ವಿನಯ್ ಬೌಲಿಂಗ್‍ನಲ್ಲೇ ಸ್ಲಿಪ್‍ನಲ್ಲಿದ್ದ ಕರುಣ್‍ಗೆ ಕ್ಯಾಚ್ ತೆಗೆದುಕೊಳ್ಳುವ ಅವಕಾಶ ಸಿಕ್ಕಿತ್ತು. ಈ ಅವಕಾಶವನ್ನು ಕೈಚೆಲ್ಲಿದ ಕರುಣ್ ನಿರಾಸೆ ಮೂಡಿಸಿದರು. ಆಟ ಸಾಗಿದಂತೆ ಪಿಚ್ ಬ್ಯಾಟ್ಸ್‍ಮನ್‍ಗಳಿಗೆ ನೆರವು ನೀಡಿದ್ದು, ಶೇಷ ಭಾರತಕ್ಕೆ ಮುನ್ನಡೆ ಪಡೆಯಲು ಅನುಕೂಲವಾಯಿತು. ದಿನದಾಟದಲ್ಲಿ ಆಕ್ರಮಣಕಾರಿ ಕ್ಷೇತ್ರರಕ್ಷಣೆ ಮೂಲಕ ಕಾರ್ಯತಂತ್ರ ಹೆಣೆದ ನಾಯಕ ವಿನಯ್ ಕುಮಾರ್, ಪ್ರತಿ ಬೌಲರ್ ಗಳಿಗೆ 2-4 ಓವರ್ ಗಳ ಸ್ಪೆಲ್ ನೀಡುತ್ತ ಉತ್ತಮ ರೀತಿಯಲ್ಲಿ ರೊಟೇಷನ್ ನೀಡುತ್ತಿದ್ದರು. 63ನೇ ಓವರ್‍ನಲ್ಲಿ ಮಿಥುನ್‍ಗೆ ಚೆಂಡು ನೀಡಿದ ವಿನಯ್ ತಕ್ಕ ಸಫಲತೆ ಪಡೆದರು.

ಆ ಓವರ್‍ನಲ್ಲಿ ಮಿಥುನ್, ಜಾಧವ್ ಹಾಗೂ ರಿಶಿ ವಿಕೆಟ್ ಪಡೆದರು. ಶೇಷಕ್ಕೆ ಮುನ್ನಡೆ ತಂದುಕೊಟ್ಟ ಅರುಣ್: ಚಹಾ ವಿರಾಮದ ವೇಳೆಗೆ 219 ರನ್‍ಗಳಿಗೆ 8 ವಿಕೆಟ್ ಕಳೆದುಕೊಂಡ ಶೇಷ ಭಾರತಕ್ಕೆ, ಇನಿಂಗ್ಸ್ ಹಿನ್ನಡೆ ಅನುಭವಿಸುವ ಭಯವಿತ್ತು. ಅಂತಿಮ ಅವ„ಯ ಆಟ ಆರಂಭಿಸಿದ ಶಾರ್ದುಲ್ ಠಾಕೂರ್ 17 ರನ್ ಗಳಿಸಿದರು. ವರುಣ್ ಅರುಣ್ 25 ರನ್ ಗಳಿಸಿ ತಂಡಕ್ಕೆ ಇನಿಂಗ್ಸ್ ಮುನ್ನಡೆ ತಂದರು. ಕರ್ನಾಟಕದ ಪರ ವಿನಯï, ಮಿಥುನ್ ಹಾಗೂ ಶ್ರೇಯಸ್ ತಲಾ 3 ವಿಕೆಟ್ ಕಬಳಿಸಿದರೆ, ಅರವಿಂದ್ 1 ವಿಕೆಟ್ ಪಡೆದರು.

ಬ್ಯಾಟ್ಸ್ ಮನ್‍ಗಳ ಮೇಲೆ ಹೆಚ್ಚಿನ ಜವಾಬ್ದಾರಿ

20 ರನ್‍ಗಳ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ, ಯಾವುದೇ ಆಘಾತ ಎದುರಿಸದೇ ದಿನದಾಟ ಅಂತ್ಯಗೊಳಿಸಿದೆ. ಆರಂಭಿಕ ರಾಬಿನ್ ಉತ್ತಪ್ಪ ಇನಿಂಗ್ಸ್ ಆರಂಭಿಸಲಿಲ್ಲ. ಮಾಯಂಕ್ ಅಗರ್‍ವಾಲ್ ಜತೆಗೆ ಆರ್.ಸಮರ್ಥ್ ಆರಂಭಿಕರಾಗಿ ಕಣಕ್ಕಿಳಿದರು. ಈ ಜೋಡಿ ಮುರಿಯದ ಮೊದಲ ವಿಕೆಟ್‍ಗೆ 39 ರನ್ ಗಳಿಸಿದೆ. ಆರ್.ಸಮರ್ಥ್  21, ಮಾಯಾಂಕ್ 15 ರನ್ ಗಳಿಸಿ 3ನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ. ಈಗ ಬ್ಯಾಟ್ಸ್ ಮನ್‍ಗಳು ಉತ್ತಮ ಪ್ರದರ್ಶನ ನೀಡಿ ಶೇಷ ಭಾರತಕ್ಕೆ ಕಠಿಣ ಸವಾಲು ನೀಡುವ ಅಗತ್ಯವಿದೆ.

ಮಹತ್ವ ಪಡೆದ ಎರಡನೇ ಇನಿಂಗ್ಸ್
ಇನ್ನು ಮೂರು ದಿನಗಳ ಆಟ ಬಾಕಿ ಇದೆ. ಹಾಗಾಗಿ ನಿಚ್ಚಳ ಫಲಿತಾಂಶ ಬರುವ ಸಾಧ್ಯತೆಗಳು ಹೆಚ್ಚಾಗಿವೆ. ಚಿನ್ನಸ್ವಾಮಿ ಅಂಗಣದಲ್ಲಿ ನಾಲ್ಕನೇ ಇನ್ನಿಂಗ್ಸ್ ಆಡುವುದು ಸುಲಭವಲ್ಲ. ಪಿಚ್ ಮೇಲೆ ಬಿರುಕು ಹೆಚ್ಚಾದಂತೆ ಸ್ಪಿನ್ನರ್ ಗಳ ಪಾತ್ರ ಮಹತ್ವದ್ದಾಗಿರುತ್ತದೆ. ಸದ್ಯಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ ಪಂದ್ಯದ ಮೇಲೆ ಹೆಚ್ಚು ಪರಿಣಾಮ ಬೀರುವಂತೆ ಕಾಣುತ್ತಿಲ್ಲ. ಉಭಯ ತಂಡಗಳು ತಮ್ಮ 2ನೇ ಇನ್ನಿಂಗ್ಸ್ಗಳಲ್ಲಿ ಯಾವರೀತಿಯ ಪ್ರದರ್ಶನ ನೀಡುತ್ತವೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ನಿರ್ಣಯವಾಗಲಿದೆ.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಮೊದಲ ಇನಿಂಗ್ಸ್ 244
ಶೇಷ ಭಾರತ ಮೊದಲ ಇನಿಂಗ್ಸ್ 264

(ಮೊದಲ ದಿನ 1 ವಿಕೆಟ್‍ಗೆ 20ರನ್‍ನಿಂದ ಮುಂದುವರಿದಿದೆ)
ಜೀವನ್‍ಜೋತ್ ಸಿ ಉತ್ತಪ್ಪ ಬಿ ವಿನಯ್ 17, ಪಾರಸ್
ಎಲ್‍ಬಿ ಬಿ ಗೋಪಾಲ್ 26, ನಮನ್ ಸಿ ಅಗರ್‍ವಾಲ್ ಬಿ
ಮಿಥುನ್ 34, ಮನೋಜ್ ಎಲ್‍ಬಿ ಬಿ ವಿನಯï 14,
ಕೇದಾರ್ ಬಿ ಮಿಥುನ್ 78, ಜಯಂತ್ ಬಿ ಗೋಪಾಲ್
26, ರಿಶಿ ಧವನ್ ಸಿ ಶರತ್ ಬಿ ಮಿಥುನ್ 15, ಶಾರ್ದುಲ್
ಬಿ ಗೋಪಾಲ್ 17, ವರುಣ್ ಬಿ ಅರವಿಂದ್ 25,
ಪ್ರಗ್ಯಾನ್ ಅಜೇಯ 4, ಇತರೆ: (ಬೈ 5, ಲೆಗ್‍ಬೈ 3) 8.
ವಿಕೆಟ್ ಪತನ: 1-0- , 2-- 23, 3-7- 2, 4-- 90, 5-- 102,
6--182, 7--218, 8--219, 9--242, 10--264.
ಬೌಲಿಂಗ್ ವಿವರ: ಆರ್.ವಿನಯ್ ಕುಮಾರ್ 22-4-
76-3, ಮಿಥುನ್ 17-1-46-3, ಅರವಿಂದ್
14.4-0-40-1, ಶರತ್ 8-0-36-0, ಗೋಪಾಲ್
13-1-51-3, ಮಾಯಾಂಕ್ 1-0-7-0.

ಕರ್ನಾಟಕ 2ನೇ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೆ 39
ಸಮರ್ಥ್ ಬ್ಯಾಟಿಂಗ್ 21, ಮಾಯಾಂಕ್ ಬ್ಯಾಟಿಂಗ್ 15.
ಇತರೆ: (ಲೆಗ್‍ಬೈ 1, ವೈಡ್ 2) ಒಟ್ಟು 3.
ಬೌಲಿಂಗ್ ವಿವರ: ರಿಶಿ 4-0-13-0, ವರುಣ್5-1-13-0, ಶಾರ್ದುಲ್ 1-0-4-0, ಪ್ರಗ್ಯಾನ್ 1-0-8-0.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com