ಪ್ಲೇ ಆಫ್ ಲೆಕ್ಕಾಚಾರ

ಐಪಿಎಸ್ ಟೂರ್ನಿ ಅಂತಿಮ ಹಂತಕ್ಕೆ ಬಂದಿದೆ. ಭಾನುವಾರ ನಡೆಯಲಿರುವ ಎರಡು ಮ್ಯಾಚ್ ಗಳಲ್ಲಿ ಇಬ್ಬರು ಪ್ಲೇ ಆಫ್ ಗೆ ಬರಬೇಕು. ಮೊದಲ ಪಂದ್ಯ ಆರ್‍ಸಿಬಿ....
ಡ್ವೇಯಿನ್ ಬ್ರಾವೋ  (ಕೃಪೆ : ಬಿಸಿಸಿಐ)
ಡ್ವೇಯಿನ್ ಬ್ರಾವೋ (ಕೃಪೆ : ಬಿಸಿಸಿಐ)
Updated on: 

ಐಪಿಎಲ್ ಟೂರ್ನಿ ಅಂತಿಮ ಹಂತಕ್ಕೆ ಬಂದಿದೆ. ಭಾನುವಾರ ನಡೆಯಲಿರುವ ಎರಡು ಮ್ಯಾಚ್ ಗಳಲ್ಲಿ ಇಬ್ಬರು ಪ್ಲೇ ಆಫ್ ಗೆ ಬರಬೇಕು. ಮೊದಲ ಪಂದ್ಯ ಆರ್‍ಸಿಬಿ ಮತ್ತು ಡೆಲ್ಲಿ ಡೇರ್ ಡೇವಿಲ್ಸ್ ನಡುವೆ ನಡೆಯಲಿದ್ದು, ಇದರಲ್ಲಿ ಡಿಡಿ ಗೆದ್ದರೆ ಕೋಲ್ಕತಾ ಜತೆ ಬೆಂಗಳೂರು ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್  ಪ್ರವೇಶಿಸಬೇಕಾಗುತ್ತದೆ. ಬೆಂಗಳೂರೇ ಗೆದ್ದರೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಹೋಗುತ್ತದೆ. ಇನ್ನೊಂದು ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ನಡುವೆ ನಡೆಯಲಿದೆ. ಇದರಲ್ಲಿ ಗೆದ್ದವರು ಸುಲಭವಾಗಿ ಪ್ಲೇ ಆಫ್ ಗೆ ಹೋಗುತ್ತಾರೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಮತ್ತೆ ರನ್ ರೇಟ್‍ಗೆ ಕಾಯಬೇಕಾಗುತ್ತದೆ. ಆಗ ಕೋಲ್ಕತಾ, ಮುಂಬೈ, ಹೈದರಾಬಾದ್ ತಂಡಗಳ ನಡುವೆ ಲೆಕ್ಕಾಚಾರ ನಡೆಯುತ್ತದೆ. ಚೆನ್ನೈ ಮತ್ತು ರಾಜಸ್ಥಾನದ ಸ್ಥಾನ ಖಚಿತ.


ಅಂಕಪಟ್ಟಿ


ತಂಡಗಳು  ಪಂದ್ಯ   ಜಯ   ಸೋಲು   ರದ್ದು    ಅಂಕ   ಸರಾಸರಿ
ಚೆನ್ನೈ 14 9 5 - 18 +0.709
ರಾಜಸ್ಥಾನ 14 7 5 2 16 +0.062
ಬೆಂಗಳೂರು 13 7 5 1 15 +1.037
ಕೋಲ್ಕತಾ 14 7 6 1 15 +0.253
ಹೈದರಾಬಾದ್ 13 7 6 - 14 -0.033
ಮುಂಬೈ 13 7 6 - 14 -0.259
ಡೆಲ್ಲಿ 13 5 8 - 10 -0.049
ಪಂಜಾಬ್ 14 3 11 - 6 -1.436

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com