

ನವದೆಹಲಿ: ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್‍ನ ಸಂಪೂರ್ಣ ಷೇರನ್ನು ತನ್ನದೇ ಆದ ಮತ್ತೊಂದು ಟ್ರಸ್ಟ್ ಗೆ ಕೇವಲ ರು.5 ಲಕ್ಷಕ್ಕೆ ಮಾರಾಟ ಮಾಡುವ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಇಂಡಿಯಾ ಸಿಮೆಂಟ್ಸ್ ಸಿಎಸ್‍ಕೆ ತಂಡದ ಒಟ್ಟಾರೆ ಮೊತ್ತ ರು.7.83 ಕೋಟಿ ಎಂದು ತಿಳಿಸಿದೆ.
ಇಂಡಿಯಾ ಸಿಮೆಂಟ್ಸ್ ಐಪಿಎಲ್ ಫ್ರಾಂಚೈಸಿಗಳ ಒಪ್ಪಂದದ ನಿಯಮಗಳನ್ನು ಪೂರೈಸಿದರೆ, ಷೇರುಗಳ ಹಸ್ತಾಂತರಕ್ಕೆ ಒಪ್ಪಿಗೆ ನೀಡುವುದಾಗಿ ಬಿಸಿಸಿಐ ತಿಳಿಸಿದೆ. ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್‍ನ 50 ಸಾವಿರ ಷೇರುಗಳನ್ನು ಪ್ರತಿ ಷೇರಿಗೆ ರು.10 ಎಂಬಂತೆ ಇಂಡಿಯಾ ಸಿಮೆಂಟ್ಸ್ ಷೇರ್ ಹೋಲ್ಡರ್ಸ್ ಟ್ರಸ್ಟ್ ಗೆ ಮಾರಾಟ ಮಾಡಲು ಒಪ್ಪಿಗೆ ನೀಡಿತು.
ಕಳೆದ ಮಾರ್ಚ್‍ನಲ್ಲಿ ತ್ರೈಮಾಸಿಕ ಪರಿಶೀಲನೆ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್‍ನ ಫ್ರಾಂಚೈಸಿ ಹಕ್ಕನ್ನು ತನ್ನದೇ ಮತ್ತೊಂದು ಟ್ರಸ್ಟ್‍ಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. 2014ರ ಮಾರ್ಚ್ 31ರ ಪ್ರಕಾರ ತಂಡ ಒಟ್ಟಾರೆ ಮೌಲ್ಯ ರು.7.83 ಕೋಟಿ ಎಂದು ಇಂಡಿಯಾ ಸಿಮೆಂಟ್ ಮುಂಬೈ ಷೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.