ಈಗಲೇ ಕೊಹ್ಲಿ-ಧೋನಿ ಹೋಲಿಕೆ ಸರಿಯಲ್ಲ: ಕಪಿಲ್

ಭಾರತ ಟೆಸ್ಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ನೂತನ ನಾಯಕ ಹಾಗೂ ಬ್ಯಾಟಿಂಗ್ ತಾರೆ ವಿರಾಟ್ ಕೊಹ್ಲಿ ನಡುವಣ ನಾಯಕತ್ವದ ಗುಣಮಟ್ಟವನ್ನು ಈಗಲೇ ಹೋಲಿಕೆ ಮಾಡುವುದು ಸರಿಯಲ್ಲ...
ಕಪಿಲ್ ದೇವ್
ಕಪಿಲ್ ದೇವ್

ಜೈಪುರ:  ಭಾರತ ಟೆಸ್ಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ನೂತನ ನಾಯಕ ಹಾಗೂ ಬ್ಯಾಟಿಂಗ್ ತಾರೆ ವಿರಾಟ್ ಕೊಹ್ಲಿ ನಡುವಣ ನಾಯಕತ್ವದ ಗುಣಮಟ್ಟವನ್ನು ಈಗಲೇ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.

''ತಂದೆ ಎಂದಿಗೂ ತಂದೆ ಆಗಿರುತ್ತಾನೆ. ಮಗ ಮಗನಾಗಿಯೇ ಇರುತ್ತಾನೆ,'' ಎಂದು ಧೋನಿ ಮತ್ತು ನೂತನ ನಾಯಕನಲ್ಲಿ ಯಾರು ಉತ್ತಮರು ಎಂದು ಕೇಳಲಾದ ಪ್ರಶ್ನೆಗೆ ಕಪಿಲ್ ಉತ್ತರ ನೀಡಿದ್ದಾರೆ.

''ಧೋನಿ ನಾಯಕತ್ವ ಹಾಗೂ ಆತನ ಸಾಧನೆಗಳತ್ತ ಸಾಗಬೇಕೆಂದರೆ ಕೊಹ್ಲಿಗೆ ಇನ್ನೂ ಬಹಳಷ್ಟು ದೂರ ಹೋಗಬೇಕಿದೆ. ಕೊಹ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಂತೆಯೇ ನಾಯಕನಾಗಿಯೂ ಯಶಸ್ಸು ಕಾಣುತ್ತಾರೆ ಎಂಬ ವಿಶ್ವಾಸವಿದೆ,'' ಎಂದು ಕಪಿಲ್ ದೇವ್ ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡ ಇದೇ ಮೊದಲ ಬಾರಿ ನೂತನ ನಾಯಕ ವಿರಾಟ್ ಕೊಹ್ಲಿ ಮುಂದಳತ್ವದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ 4 ಪಂದ್ಯಗಳ ಸರಣಿಯನ್ನಾಡುತ್ತಿದ್ದು, ಮೊಹಾಲಿಯಲ್ಲಿ ಗುರುವಾರ ಮೊದಲ ಪಂದ್ಯ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com